Site icon Vistara News

Aamir Khan | ತಮ್ಮ ತಂದೆಯ ಕಷ್ಟದ ದಿನಗಳನ್ನು ನೆನೆದು ಕಣ್ಣೀರು ಹಾಕಿದ ಆಮೀರ್‌ ಖಾನ್‌!

Aamir Khan

ಬೆಂಗಳೂರು : ಆಮೀರ್‌ ಖಾನ್‌ (Aamir Khan) ತಮ್ಮ ತಂದೆಯ ಕಷ್ಟಕರ ದಿನಗಳನ್ನು ನೆನೆದು ಸಂದರ್ಶನವೊಂದರಲ್ಲಿ ಭಾವುಕರಾಗಿದ್ದಾರೆ. ತಮ್ಮ ಬಾಲ್ಯದಲ್ಲಿ ಕುಟುಂಬ ಬಹಳ ಆರ್ಥಿಕ ಸಮಸ್ಯೆಯನ್ನು ಎದುರಿಸಿತ್ತು. ಅದರಲ್ಲಿಯೂ ತಂದೆ ತಾಹಿರ್ ಹುಸೇನ್ ಚಲನಚಿತ್ರ ನಿರ್ಮಾಪಕರಾಗಿದ್ದರು. ತಂದೆ ಸಾಲವನ್ನು ಮರುಪಾವತಿಸಲಾಗಿದೇ ಅವರು ಎದುರಿಸಿದ್ದ ಸಂಕಷ್ಟಗಳನ್ನು ನೆನೆದು ನಟ ಕಣ್ಣೀರು ಹಾಕಿದ್ದಾರೆ.

ಆಮೀರ್‌ ಮಾತನಾಡಿ ʻʻನನ್ನ ತಂದೆ ತಂದೆ ತಾಹಿರ್ ಹುಸೇನ್ ಚಲನಚಿತ್ರ ನಿರ್ಮಾಪಕರಾಗಿದ್ದರು. ನನಗೆ 10 ವರ್ಷ ಇದ್ದಾಗ ನನ್ನ ಕುಟುಂಬ ಬಹಳ ಆರ್ಥಿಕವಾಗಿ ಸಮಸ್ಯೆಯನ್ನು ಎದುರಿಸಿತ್ತು. ತಂದೆ ಸುಮಾರು ಎಂಟು ವರ್ಷಗಳಿಂದ ಮಾಡದ ಚಿತ್ರಕ್ಕಾಗಿ ಬಡ್ಡಿಗೆ ಸಾಲ ಮಾಡಿದ್ದರು. ನನ್ನ ತಂದೆ ತುಂಬಾ ಸರಳ ವ್ಯಕ್ತಿಯಾಗಿದ್ದರು. ಬಹುಶಃ ಇಷ್ಟು ಸಾಲ ಮಾಡಬಾರದಿತ್ತು ಎಂಬ ಪ್ರಜ್ಞೆ ಅವರಿಗಿರಲಿಲ್ಲವೇನೋʼʼ ಎಂದು ಹೇಳಿದರು.

ಇದನ್ನೂ ಓದಿ | Aamir Khan | ನಿಶ್ಚಿತಾರ್ಥ ಮಾಡಿಕೊಂಡ ಆಮಿರ್​ ಖಾನ್ ಪುತ್ರಿ ಇರಾ ಖಾನ್‌!

ಮಾತು ಮುಂದುವರಿಸಿ ʻʻನನ್ನ ತಂದೆ ಕೆಲವು ಚಿತ್ರಗಳಿಗೆ ಕೆಲಸ ಮಾಡಿದರೂ, ‘ಅವರ ಬಳಿ ಹಣವಿರಲಿಲ್ಲ’ ಎಂದು ಅವರು ಹೇಳಿದರು. ಅವರು ತೊಂದರೆಯಲ್ಲಿದ್ದರೆ ನಮಗೆ ನೋವಾಗುತ್ತಿತ್ತು. ಏಕೆಂದರೆ ಸಾಲ ಕೊಡುವವರು ನಮಗೆ ಕರೆ ಮಾಡುತ್ತಿದ್ದರು. ಅವರು ಫೋನ್‌ನಲ್ಲಿ ಜನರೊಂದಿಗೆ ಜಗಳವಾಡುವುದನ್ನು ನಾವು ಕೇಳುತ್ತಿದ್ದೇವು. ಇಂತಹ ಸಮಯದಲ್ಲಿ ನನ್ನ ಶಾಲೆಯ ಫೀಸ್‌ ಅನ್ನು ಕಟ್ಟಿಕೊಳ್ಳಬೇಕಿತ್ತು. ತಾಯಿಯೂ ಕೂಡ ಅಷ್ಟೇ ಕಷ್ಟ ಪಟ್ಟಿದ್ದರುʼʼ ಎಂದು ಹೇಳಿಕೊಂಡಿದ್ದಾರೆ.

ಆಮೀರ್ ಖಾನ್ ಅವರ ಇತ್ತೀಚಿನ ಸಿನಿಮಾ ʻʻಲಾಲ್ ಸಿಂಗ್ ಛಡ್ಡಾʼʼ. ಆದರೆ ಚಿತ್ರಮಂದರಿಗಳಲ್ಲಿ ಅಷ್ಟಾಗಿ ಪ್ರದರ್ಶನ ಕಾಣದೇ ಬಾಕ್ಸ್‌ ಆಫೀಸ್‌ನಲ್ಲಿ ಉತ್ತಮ ಗಳಿಕೆ ಕಂಡಿಲ್ಲ. ಆದರೆ ಒಟಿಟಿಯಲ್ಲಿ ಉತ್ತಮ ಪ್ರಶಂಸೆ ಪಡೆಯಿತು.

ನಟನೆಯಿಂದ ದೂರ ಸರಿದ್ದೇನೆ
ನಾನು 35 ವರ್ಷಗಳಿಂದ ನಟನೆಯಲ್ಲಿ ತೊಡಗಿಸಿಕೊಂಡಿದ್ದೇನೆ. ನನ್ನ ಕೆಲಸ ಹೊರತು ಪಡಿಸಿ ಇನ್ನೆಲ್ಲೂ ಮನಸ್ಸನ್ನೂ ಕೇಂದ್ರೀಕರಿಸಲಿಲ್ಲ. ಈಗ ನನ್ನ ಕುಟುಂಬದ ಕಡೆ ಗಮನ ಕೊಡುವ ಸಮಯ ಬಂದಿದೆ. ಇಷ್ಟುದಿನ ಇದ್ದುದಕ್ಕಿಂತಲೂ ವಿಭಿನ್ನವಾದ ಜೀವನ ನಡೆಸಲು ಮನಸಾಗಿದೆ. ಮುಂದಿನ ಒಂದರಿಂದ ಒಂದೂವರೆ ವರ್ಷ ನಾನು ನಟನೆಯಲ್ಲಿ ಇರುವುದಿಲ್ಲ ಎಂದು ಆಮೀರ್ ಖಾನ್ ತಿಳಿಸಿದ್ದರು.

ಇದನ್ನೂ ಓದಿ | Aamir Khan | ನಟನೆಯಿಂದ ದೂರ ಸರಿಯುತ್ತಿದ್ದೇನೆ ಎಂದ ಆಮೀರ್​ ಖಾನ್​; ಲಾಲ್‌ ಸಿಂಗ್‌ ಛಡ್ಡಾ ಸೋಲು ಕಂಗೆಡಿಸಿತೇ?

Exit mobile version