Site icon Vistara News

Aishwarya Rai: ಅಮ್ಮನನ್ನು ಹೊಗಳಿದ ಆರಾಧ್ಯಾ; ಮಾತು ಕೇಳಿ ಖುಷಿಯಾದ ಐಶ್ವರ್ಯಾ ರೈ!

Aaradhya Bachchan Aishwarya Birthday

ಬೆಂಗಳೂರು: ಐಶ್ವರ್ಯಾ ರೈ (Aishwarya Rai) ಬಚ್ಚನ್ ತಮ್ಮ 50ನೇ ಹುಟ್ಟುಹಬ್ಬವನ್ನು ನವೆಂಬರ್ 1ರಂದು ಆಚರಿಸಿಕೊಂಡರು. ವಿಶೇಷ ದಿನದಂದು, ಬಾಲಿವುಡ್ ಸೂಪರ್‌ಸ್ಟಾರಿಣಿ ಐಶ್ವರ್ಯಾ ರೈ ಅವರು ಮಗಳು ಆರಾಧ್ಯ ಬಚ್ಚನ್ ಮತ್ತು ತಾಯಿ ವೃಂದಾ ರೈ ಅವರೊಂದಿಗೆ ಕ್ಯಾನ್ಸರ್ ರೋಗಿಗಳ ಕಲ್ಯಾಣಕ್ಕಾಗಿ ಆಯೋಜಿಸಲಾದ ವಿಶೇಷ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಆರಾಧ್ಯ ಅವರು ಸಾರ್ವಜನಿಕವಾಗಿ ಮೊದಲ ಬಾರಿಗೆ ಭಾವುಕರಾಗಿ ಅಮ್ಮನ ಬಗ್ಗೆ ಮಾತನಾಡಿದರು. ಐಶ್ವರ್ಯಾ ಅವರನ್ನು ಹೊಗಳಿದರು. ಇದೀಗ ಈ ವಿಡಿಯೊ ಸಖತ್‌ ವೈರಲ್‌ ಆಗಿದೆ.

ಐಶ್ವರ್ಯಾ ರೈ ಅವರು ಎಲ್ಲಿಗೆ ಹೋದರೂ ಅವರ ಮಗಳು ಆರಾಧ್ಯ ಜತೆಯಲ್ಲಿರುತ್ತಾರೆ. ನವೆಂಬರ್ 1ರಂದು ಐಶ್ವರ್ಯಾ ಅವರ 50ನೇ ಹುಟ್ಟುಹಬ್ಬದಂದು, ತಮ್ಮ ತಾಯಿ ವೃಂದಾ ರೈ ಮತ್ತು ಮಗಳು ಆರಾಧ್ಯ ಬಚ್ಚನ್ ಅವರೊಂದಿಗೆ ವಿಶೇಷ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಬಿಳಿ ಸಲ್ವಾರ್ ಸೂಟ್‌ನಲ್ಲಿ ಐಶ್ವರ್ಯಾ ಸುಂದರವಾಗಿ ಕಾಣುತ್ತಿದ್ದರು. ಮಾಧ್ಯಮಗಳಿಂದ ಸದಾ ಅಂತರ ಕಾಯ್ದುಕೊಳ್ಳುವ ಮಗಳು ಮೊದಲ ಬಾರಿಗೆ ಸಾರ್ವಜನಿಕವಾಗಿ ಭಾಷಣ ಮಾಡಿದರು.

ʻʻಅಮ್ಮ ನನ್ನ ಜೀವನ, ನನ್ನ ಅಮ್ಮ ತುಂಬ ಅದ್ಭುತವಾದ ಕೆಲಸಗಳನ್ನು ಮಾಡುತ್ತಿದ್ದಾರೆ. ಇದರಿಂದ ಬಹಳ ಒಳ್ಳೆಯದು ಆಗುತ್ತಿದೆ. ಜಗತ್ತಿನಲ್ಲಿ ಅನೇಕರಿಗೆ ಇದರಿಂದ ಸಹಾಯ ಆಗುತ್ತಿದೆ. ಅವರು ಮಾಡುತ್ತಿರುವ ಕೆಲಸ ನಿಜಕ್ಕೂ ಅತ್ಯುತ್ತಮವಾಗಿದೆ ಎಂದು ಹೇಳಲು ಬಯಸುತ್ತೇನೆ’ ಎಂದು ಆರಾಧ್ಯಾ ಹೇಳಿದ್ದಾರೆ.

ಅಷ್ಟರಲ್ಲಿ ಐಶ್ವರ್ಯಾ ಆಶ್ಚರ್ಯದಿಂದ ನೋಡಿ, ʻʻಮಗಳು ಹೀಗೆಲ್ಲ ಮಾತನಾಡುತ್ತಾಳೆ ಅಂತ ನಾನು ನಿರೀಕ್ಷೆಯೇ ಮಾಡಿರಲಿಲ್ಲ;; ಎಂಬ ವಿಡಿಯೊ ವೈರಲ್‌ ಆಗಿದೆ. ಅಮ್ಮನ ಹೊಗಳಿಕೆಯ ಮಾತಿಗೆ ಆರಾಧ್ಯಾ ಕೂಡ ಸಂತಸ ವ್ಯಕ್ತಪಡಿಸಿದ್ದಾರೆ. ಸಿನಿಮಾ ವಿಚಾರಕ್ಕೆ ಬಂದರೆ ಐಶ್ವರ್ಯಾ ಕೊನೆಯ ಬಾರಿಗೆ ಐತಿಹಾಸಿಕ ಸಿನಿಮಾ ‘ಪೊನ್ನಿಯನ್ ಸೆಲ್ವನ್: 2’ ನಲ್ಲಿ ಕಾಣಿಸಿಕೊಂಡರು.

ಇದನ್ನೂ ಓದಿ: Aishwarya Rai: ಅತ್ತೆ, ನಾದಿನಿ ಕ್ರಾಪ್‌ ಮಾಡಿ ಫೋಟೊ ಹಂಚಿಕೊಂಡ ಐಶ್ವರ್ಯಾ ರೈ; ಕುಟುಂಬದಲ್ಲಿ ಬಿರುಕು?

ಐಶ್ವರ್ಯಾ ಕುಟುಂಬದಲ್ಲಿ ಬಿರುಕು?

ಅಕ್ಟೋಬರ್ 11ರಂದು (Aishwarya Rai) ಅಮಿತಾಭ್‌ ಬಚ್ಚನ್ ತಮ್ಮ 81ನೇ ಹುಟ್ಟುಹಬ್ಬ ಅದ್ಧೂರಿಯಾಗಿ ಆಚರಿಸಿಕೊಂಡರು. ಮಧ್ಯರಾತ್ರಿಯೇ ಸಂಭ್ರಮಾಚರಣೆಯಲ್ಲಿ ಅವರ ಮಕ್ಕಳು ಮತ್ತು ಮೊಮ್ಮಕ್ಕಳು ಭಾಗಿಯಾಗಿ ವಿಶಸ್‌ ಕೂಡ ತಿಳಿಸಿದ್ದರು. ಅಮಿತಾಭ್ ಬಚ್ಚನ್ ಅವರ ಮೊಮ್ಮಗಳು ನವ್ಯಾ ನವೇಲಿ ನಂದಾ ಅವರು ಜಯಾ ಬಚ್ಚನ್, ಆರಾಧ್ಯಾ ಬಚ್ಚನ್ ಮತ್ತು ಅಗಸ್ತ್ಯ ನಂದಾ ಅಮಿತಾಭ್‌ ಅವರ ಜತೆ ಇರುವ ಫೋಟೊ ಕೂಡ ಶೇರ್‌ ಮಾಡಿಕೊಂಡಿದ್ದರು. ಇದೇ ಫೋಟೊವನ್ನು ಅಕ್ಟೋಬರ್ 12ರಂದು ಐಶ್ವರ್ಯಾ ರೈ ಫೋಟೊ ಹಂಚಿಕೊಂಡಿದ್ದರು ಆದರೆ ಅತ್ತೆ ಜಯಾ ಬಚ್ಚನ್‌, ನವ್ಯಾ ನವೇಲಿ ನಂದಾ ಅವರನ್ನು ಹೊರಗಿಟ್ಟು, ಅಮಿತಾಭ್​ ಬಚ್ಚನ್​ ಜತೆ ಆರಾಧ್ಯಾ ಬಚ್ಚನ್ ಮಾತ್ರ ಕಾಣುವಂತೆ ಕ್ರಾಪ್‌ ಮಾಡಿ ಫೋಟೊ ಪೋಸ್ಟ್‌ ಮಾಡಿದ್ದರು. ಇದಾದ ಬಳಿಕ ಐಶ್ವರ್ಯಾ ರೈ ಬಚ್ಚನ್‌ ಕುಟಂಬದಲ್ಲಿ ಏನೋ ಕಿರಿಕ್‌ ಇದೆ ಎಂದು ನೆಟ್ಟಿಗರು ಕಮೆಂಟ್‌ ಮಾಡಿದ್ದರು. ಇದರಿಂದ ನಟಿ ಸಾಕಷ್ಟು ಚರ್ಚೆಯಲ್ಲಿದ್ದರು.

Exit mobile version