ಬೆಂಗಳೂರು: ಅಭಿಷೇಕ್ ಅಂಬರೀಶ್ (Abhishek Ambareesh) ಹಾಗೂ ಅವಿವ ಬಿಡಪ ಜೂನ್ 5ರಂದು ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಇದೀಗ ಈಗಾಗಲೇ ಮದುವೆಯಾಗಿ ವಿವಾಹ ವಿಚ್ಛೇದನವನ್ನು ಪಡೆದುಕೊಂಡಿರುವ ಹಾಗೂ ವಯಸ್ಸಿನಲ್ಲಿ ದೊಡ್ಡವರಾಗಿರುವ ಹುಡುಗಿಯನ್ನು ಯಾಕೆ ಮದುವೆ ಆಗುತ್ತಿದ್ದೀರಿ ಎಂದು ಅಭಿಷೇಕ್ ಅಂಬರೀಶ್ ಅವರಿಗೆ ನೆಟ್ಟಿಗರು ಸೋಷಿಯಲ್ ಮೀಡಿಯಾ ಮೂಲಕ ಪ್ರಶ್ನೆ ಕೇಳುತ್ತಿದ್ದಾರೆ. ಈಗಾಗಲೇ ಡಿವೋರ್ಸ್ ಪಡೆದಿದ್ದ ಅವಿವ ಬಿಡಪ ಅವರಿಗೆ ಇದು ಎರಡನೇ ಮದುವೆ.
ಅವಿವ ಅವರು ಉದ್ಯಮಿ ವಿಕ್ರಂ ಮೆಹ್ತಾ ಅವರನ್ನು ಮದುವೆಯಾಗಿದ್ದರು. 2016ರಲ್ಲಿ ಡಿವೋರ್ಸ್ ನೀಡಿ ಬೇರೆಯಾಗಿದ್ದರು. ಆದರೀಗ ಅಭಿಷೇಕ್ ಅಂಬರೀಶ್ ಅವರನ್ನು ಮದುವೆಯಾಗಿದ್ದಾರೆ. ಅಭಿಷೇಕ್ ಅಂಬರೀಶ್ ಅವರು ಅವಿವ ಅವರನ್ನು ಸ್ನೇಹಿತರ ಮೂಲಕ ಪಾರ್ಟಿ ಒಂದರಲ್ಲಿ ನೋಡಿದ್ದೇ ಅಲ್ಲಿಂದಲೇ ನಮ್ಮಿಬ್ಬರ ನಡುವೆ ಪರಿಚಯ ಪ್ರಾರಂಭವಾಯಿತು ಎಂಬುದಾಗಿ ಮಾಧ್ಯಮವೊಂದಕ್ಕೆ ಹೇಳಿಕೊಂಡಿದ್ದಾರೆ. ಪರಿಚಯ ಸ್ನೇಹಕ್ಕೆ ತಿರುಗಿ ಸ್ನೇಹ ಪ್ರೀತಿಗೆ ತಿರುಗಿ ಈಗ ನಮ್ಮ ಜೀವನವನ್ನು ಒಟ್ಟಾಗಿ ಕಳೆಯಲು ನಿರ್ಧರಿಸಿದ್ದೇವೆ ಎಂಬುದಾಗಿ ಹೇಳಿಕೊಂಡಿದ್ದಾರೆ.
ಇದನ್ನೂ ಓದಿ: Abhishek Ambareesh Reception: ಅಭಿಷೇಕ್- ಅವಿವ ಜೋಡಿಗೆ ಶುಭ ಕೋರಿದ ಗಣ್ಯರು; ಹೇಗಿತ್ತು ನೋಡಿ ವೈಭವದ ಆರತಕ್ಷತೆ!
ಅದ್ಧೂರಿಯಾಗಿ ನೆರವೇರಿದ ಮದುವೆ!
ಬೆಂಗಳೂರಿನ ಮಾಣಿಕ್ಯ ಚಾಮರ ವಜ್ರದ ಕಲ್ಯಾಣಮಂಟಪದಲ್ಲಿ ಮದುವೆ ಗೌಡರ ಸಂಪ್ರದಾಯದಲ್ಲಿ ಜೂನ್ 5ರಂದು ಅದ್ಧೂರಿಯಾಗಿ ನೆರವೇರಿತು. ಆಪ್ತರು, ಕುಟುಂಬದವರಿಗೆ ಮಾತ್ರ ಆಹ್ವಾನ ಇತ್ತು. ಈಗ ಮದುವೆಗಿಂತಲೂ ಅದ್ಧೂರಿಯಾಗಿ ರಿಸೆಪ್ಷನ್ ನಡೆದಿದೆ. ಈ ಕಾರ್ಯಕ್ರಮಕ್ಕೆ ಆಗಮಿಸಿ ಎಲ್ಲರೂ ನವ ಜೋಡಿಗೆ ಶುಭಕೋರಿದ್ದಾರೆ.
ಕ್ರಿಸ್ಟಲ್ ಶಾಂಡ್ಲಿಯರ್ ಲೈಟ್ಸ್ ಬಳಸಿ ವೇದಿಕೆ ಸಿದ್ಧಪಡಿಸಲಾಗಿತ್ತು. 300 ಶಾಂಡ್ಲಿಯರ್ ಬಳಕೆ ಆಗಿತ್ತು. 72 ಅಡಿ ಅಗಲದ 32 ಉದ್ದದ ಶಾಂಡ್ಲಿಯರ್ ಇದರಲ್ಲಿ ಇತ್ತು. ಭಾರತದಲ್ಲೇ ಮೊದಲ ಬಾರಿಗೆ ಈ ರೀತಿ ವೇದಿಕೆ ನಿರ್ಮಾಣ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ. ರಿಸೆಪ್ಷನ್ಗೆ ಆಗಮಿಸುವವರಿಗಾಗಿ ಮೂರು ಸಾವಿರ ಆಸನದ ವ್ಯವಸ್ಥೆ ಮಾಡಲಾಗಿತ್ತು. 25 ಸಾವಿರ ಜನರಿಗೆ ಭೋಜನ ಸಿದ್ಧವಾಗಿತ್ತು.