Site icon Vistara News

Abhishek Ambareesh: ಮಳೆ ಬರಲಿ ಎಂದು ಕಾವೇರಿ ಮಾತೆಗೆ ವಿಶೇಷ ಪೂಜೆ ಸಲ್ಲಿಸಿದ ಅಭಿಷೇಕ್‌-ಅವಿವಾ ದಂಪತಿ!

Abhishek Ambareesh Aviva Bidapa

ಈಗಾಗಲೇ ಕಾವೇರಿ ವಿವಾದಕ್ಕೆ ಸ್ಯಾಂಡಲ್‌ವುಡ್‌ ಸಾಥ್‌ ನೀಡಿದೆ. ಬಹಳಷ್ಟು ಕನ್ನಡದ ನಟ-ನಟಿಯರು ಕಾವೇರಿ ಹೋರಾಟಕ್ಕೆ ಬೆಂಬಲ ನೀಡಿದ್ದಾರೆ. ಇದೀಗ ಅಂಬಿ ಅವರ ಪುತ್ರ ಅಭಿಷೇಕ್ ಅಂಬರೀಶ್‌ (Abhishek Ambareesh) ಅವರು ಪತ್ನಿ ಅವಿವಾ ಜತೆಯಾಗಿ ಕಾವೇರಮ್ಮನಿಗೆ ಪೂಜೆ ಸಲ್ಲಿಸಿದ್ದಾರೆ.

ಕಾವೇರಿ ಉಗಮ ಸ್ಥಾನ ತಲಕಾಡಿನಲ್ಲಿ ಸೆ. 30ರಂದು ಅಭಿಷೇಕ್ ಅಂಬರೀಶ್ , ಪತ್ನಿ ಅವಿವಾ ಅಭೀಷೇಕ್ ತಾಯಿ ಕಾವೇರಿ ಮಾತೆಗೆ ವಿಶೇಷ ಪೂಜೆ ಸಲ್ಲಿಸಿ, ಕಾವೇರಿ ನದಿ ಪಾತ್ರದಲ್ಲಿ ಮಳೆಯಾಗಿ ಕಾವೇರಿ ವಿವಾದ ಬಗೆಹರಿಯಲೆಂದು ಪ್ರಾರ್ಥಿಸಿದರು.

ರೈತರಿಗೆ ಬೆಂಬಲ ಸೂಚಿಸುವ ನಿಟ್ಟಿನಲ್ಲಿ ಹಸರು ಶಾಲು ಹೊದ್ದು ಪೂಜೆ ಸಲ್ಲಿಸಿದರು ಅಭಿಷೇಕ್‌.  ಕೊಡಗು ಜಿಲ್ಲೆಯ ತಲಕಾವೇರಿಗೆ ದಂಪತಿ ಭೇಟಿ ನೀಡಿದ್ದಾರೆ. ಮಳೆ ಬರಲಿ ಎಂದು ಪ್ರಾರ್ಥಿಸುವುದರ ಜತೆಗೆ ಕಾವೇರಿ ವಿವಾದ (Cauvery Dispute) ಬಗೆಹರಿಯಲೆಂದು ಪ್ರಾರ್ಥನೆ ಸಲ್ಲಿಸಿದ್ದಾರೆ. 

ಇದನ್ನೂ ಓದಿ: Abhishek Ambareesh: ’ವಾಮನ’ ಸಿನಿಮಾಕ್ಕೆ ಆರಡಿಯ ಅಭಿಷೇಕ್ ಅಂಬರೀಶ್‌ ಸಾಥ್‌!

ಈ ಫೋಟೊಗಳನ್ನು ಸುಮಲತಾ ಅಂಬರೀಶ್‌ ಇನ್‌ಸ್ಟಾದಲ್ಲಿ ಶೇರ್‌ ಮಾಡಿಕೊಂಡಿದ್ದಾರೆ.

ಸ್ಟಾರ್ ನಟರು ಈ ಸಲದ ಕಾವೇರಿ ಹೋರಾಟದಲ್ಲಿ ಭಾಗಿ ಆಗಿದ್ದಾರೆ. ಚಾಲೆಂಜಿಂಗ್ ಸ್ಟಾರ್ ದರ್ಶನ್, ವಸಿಷ್ಠ ಸಿಂಹ, ಶ್ರೀಮುರಳಿ, ವಿಜಯ್ ರಾಘವೇಂದ್ರ ಸೇರಿದಂತೆ ಇನ್ನು ಅನೇಕರು ಈ ಹೋರಾಟದಲ್ಲಿ ಭಾಗಿ ಆಗಿದ್ದರು.

ಅಭಿಷೇಕ್‌ ಅಂಬರೀಶ್‌ (Abhishek Ambareesh) ಅಭಿನಯದ ʻಬ್ಯಾಡ್‌ ಮ್ಯಾನರ್ಸ್ʼ ಕೂಡ ಬಿಡುಗಡೆಗೆ ಸಜ್ಜಾಗುತ್ತಿದೆ.

Exit mobile version