Site icon Vistara News

Abhishek Ambareesh: ಅಭಿಷೇಕ್‌ ಅಂಬರೀಶ್‌ ʻಬ್ಯಾಡ್‌ ಮ್ಯಾನರ್ಸ್ʼ ಕಲೆಕ್ಷನ್‌ ಎಷ್ಟು?

Abhishek Ambareesh Bad Manners Collection

ಬೆಂಗಳೂರು: ನವೆಂಬರ್‌ 24ಕ್ಕೆ ಯಂಗ್‌ ರೆಬೆಲ್‌ ಸ್ಟಾರ್‌ ಅಭಿಷೇಕ್‌ ಅಂಬರೀಶ್‌ (Abhishek Ambareesh) ಅಭಿನಯದ ʻಬ್ಯಾಡ್‌ ಮ್ಯಾನರ್ಸ್ʼ ಚಿತ್ರ  ರಿಲೀಸ್‌ ಆಗಿತ್ತು. . ಮುಂಗಡ ಬುಕ್ಕಿಂಗ್‌ನಲ್ಲೇ ಸುಮಾರು ಐದು ಕೋಟಿ ರೂ.ಗಳಷ್ಟು ಕಲೆಕ್ಷನ್ ಮಾಡಿತ್ತು. ಸುಮಾರು 300ಕ್ಕೂ ಅಧಿಕ ಥಿಯೇಟರ್‌ಗಳಲ್ಲಿ ರಿಲೀಸ್ ಆಗಿದ್ದು, ಮೂರು ದಿನಗಳಲ್ಲಿ 6.4 ಕೋಟಿ ರೂ.ಗಳಷ್ಟು ಬಾಚಿಕೊಂಡಿದೆ ಎಂದು ವರದಿಯಾಗಿದೆ.

ಭಾರತ-ಆಸ್ಟ್ರೇಲಿಯಾ ಟಿ20 ಕ್ರಿಕೆಟ್ ಪಂದ್ಯದ ನಡುವೆಯೂ ಅಭಿಮಾನಿಗಳು ಥಿಯೇಟರ್‌ಗೆ ಹೋಗಿದ್ದು, ಸಿನಿಮಾ ಮೆಚ್ಚಿಕೊಂಡಿದ್ದಾರೆ. ಸೂರಿ ನಿರ್ದೇಶನದ ಈ ಚಿತ್ರದಲ್ಲಿ ಅಭಿ ಖಡಕ್‌ ಪೊಲೀಸ್‌ ಆಫೀಸರ್‌ ಆಗಿ ಮಿಂಚಿದ್ದಾರೆ. ರಚಿತಾ ರಾಮ್‌ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ‘ಪಾಪ್‌ಕಾರ್ನ್‌ ಮಂಕಿ ಟೈಗರ್‌’ ಬಳಿಕ ಸೂರಿ ಈ ಚಿತ್ರ ಕೈಗೆತ್ತಿಕೊಂಡಿದ್ದರು. ಅಭಿಷೇಕ್ ನಾಲ್ಕು ವರ್ಷಗಳ ಬಳಿಕ ತೆರೆ ಮೇಲೆ ಕಾಣಿಸಿಕೊಂಡಿದ್ದು, ಎರಡನೇ ಸಿನಿಮಾಗೆ ಎಲ್ಲೆಡೆ ಅಭಿಮಾನಿಗಳಿಂದ ಮೆಚ್ಚುಗೆ ಪಡೆದುಕೊಂಡಿದ್ದಾರೆ.

ಪೊಲೀಸ್‌ ಆಫೀಸರ್‌ ರುದ್ರ ಪಾತ್ರದಲ್ಲಿ ಅಭಿಷೇಕ್‌ ನಟಿಸಿದ್ದಾರೆ. ಜಯಣ್ಣ ಕಂಬೈನ್ಸ್‌ ಸಂಸ್ಥೆ ಚಿತ್ರದ ವಿತರಣೆ ಹಕ್ಕು ಖರೀದಿಸಿದೆ. ಯುಗಾದಿ ಹಬ್ಬಕ್ಕೆ ಬ್ಯಾಡ್‌ ಮ್ಯಾನರ್ಸ್ ಟೈಟಲ್‌ ಟ್ರ್ಯಾಕ್‌ ಸಿನಿರಸಿಕರಿಗೆ ಸಖತ್‌ ಕಿಕ್‌ ನೀಡಿತ್ತು. ಬಹು ಭಾಷಾ ಗಾಯಕಿ ಉಷಾ ಉತ್ತುಪ್‌ ಅವರ ಅದ್ಭುತ ಕಂಠಸಿರಿಯಲ್ಲಿ ಈ ಹಾಡು ಮೂಡಿ ಬಂದಿತ್ತು. ಗೀತೆಯಲ್ಲಿ ಅಭಿಷೇಕ್‌ ಅಂಬರೀಶ್‌ ನಿರ್ವಹಿಸಿರುವ ಪಾತ್ರದ ಚಿತ್ರಣ ಇತ್ತು. ಪ್ರತಿ ಸಾಲಿನಲ್ಲೂ ಅಭಿ ಪಾತ್ರದ ಸಾಫ್ಟ್‌ ಮತ್ತು ಹಾರ್ಡ್‌ ಮ್ಯಾನರಿಸಂನ ಝಲಕ್ ಇತ್ತು. ನಿರ್ದೇಶಕ ದುನಿಯಾ ಸೂರಿ ಅವರ ಕಲ್ಪನೆಯ ಈ ಗೀತೆಯ ಮೇಕಿಂಗ್ ವಿಡಿಯೊ ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ಹವಾ ಕ್ರಿಯೇಟ್‌ ಮಾಡಿತ್ತು. ಚರಣ್ ರಾಜ್ ಸಂಗೀತ ನಿರ್ದೇಶನದ ಈ ಹಾಡಲ್ಲಿ ಅಭಿಷೇಕ್‌ ಅಂಬರೀಶ್‌ ಅದ್ಭುತವಾಗಿಯೇ ಕಾಣಿಸಿಕೊಂಡಿದ್ದರು. ಸನ್‌ ಗ್ಲಾಸ್, ಕೈಯಲ್ಲಿ ಸಿಗಾರ್ ಹೀಗೆ ಅಭಿಷೇಕ್ ಖದರ್ ಹಾಡಿನೂದ್ದಕ್ಕೂ ಇತ್ತು.

ಇದನ್ನೂ ಓದಿ: Abhishek Ambareesh: ಅಂಬಿ ಐದನೇ ವರ್ಷ ಪುಣ್ಯಸ್ಮರಣೆ; ಇಂದೇ ಅಭಿಷೇಕ್‌ ಸಿನಿಮಾ ತೆರೆಗೆ!

ಬ್ಯಾಡ್ ಮ್ಯಾನರ್ಸ್‌ ಹಾಡಿಗೆ ಧನು ಮಾಸ್ಟರ್ ಕೊರಿಯೋಗ್ರಫಿ ಮಾಡಿದ್ದರು. ಸಿನಿಮಾಟೋಗ್ರಾಫರ್ ಶೇಖರ್ ಅದನ್ನು ಅಷ್ಟೇ ಅದ್ಭುತವಾಗಿ ಸೆರೆ ಹಿಡಿದಿದ್ದರು.

Exit mobile version