Site icon Vistara News

Abhishek Ambareesh: ಉಷಾ ಉತ್ತುಪ್‌ ಕಂಠದಲ್ಲಿ ʻಬ್ಯಾಡ್‌ ಮ್ಯಾನರ್ಸ್ʼ: ಯಂಗ್‌ ರೆಬೆಲ್‌ ಸ್ಟಾರ್‌ಗೆ ಭರ್ಜರಿ ರೆಸ್ಪಾನ್ಸ್‌!

Abhishek Ambareesh Bad Manners Title Track Out

ಬೆಂಗಳೂರು: ಯಂಗ್‌ ರೆಬೆಲ್‌ ಸ್ಟಾರ್‌ ಅಭಿಷೇಕ್‌ ಅಂಬರೀಶ್‌ (Abhishek Ambareesh) ಅಭಿನಯದ ʻಬ್ಯಾಡ್‌ ಮ್ಯಾನರ್ಸ್ʼ ಚಿತ್ರದ ಮೊಟ್ಟ ಮೊದಲ ಹಾಡು ಬಿಡುಗಡೆಗೊಂಡು ಸಖತ್‌ ಸೌಂಡ್‌ ಮಾಡುತ್ತಿದೆ. ರಿಲೀಸ್‌ ಆದ ಒಂದೇ ದಿನಕ್ಕೆ 2.7 ಮಿಲಿಯನ್‌ ವೀಕ್ಷಣೆ ಕಂಡಿದೆ. ಯುಗಾದಿ ಹಬ್ಬಕ್ಕೆ ಬ್ಯಾಡ್‌ ಮ್ಯಾನರ್ಸ್ ಟೈಟಲ್‌ ಟ್ರ್ಯಾಕ್‌ ಸಿನಿರಸಿಕರಿಗೆ ಸಖತ್‌ ಕಿಕ್‌ ನೀಡಿದೆ. ಬಹು ಭಾಷಾ ಗಾಯಕಿ ಉಷಾ ಉತ್ತುಪ್‌ ಅವರ ಅದ್ಭುತ ಕಂಠಸಿರಿಯಲ್ಲಿ ಈ ಹಾಡು ಮೂಡಿ ಬಂದಿದೆ.

ಗೀತೆಯಲ್ಲಿ ಅಭಿಷೇಕ್‌ ಅಂಬರೀಶ್‌ ನಿರ್ವಹಿಸಿರುವ ಪಾತ್ರದ ಚಿತ್ರಣ ಇದೆ. ಪ್ರತಿ ಸಾಲಿನಲ್ಲೂ ಅಭಿ ಪಾತ್ರದ ಸಾಫ್ಟ್‌ ಮತ್ತು ಹಾರ್ಡ್‌ ಮ್ಯಾನರಿಸಂನ ಝಲಕ್ ಇದೆ. ನಿರ್ದೇಶಕ ದುನಿಯಾ ಸೂರಿ ಅವರ ಕಲ್ಪನೆಯ ಈ ಗೀತೆಯ ಮೇಕಿಂಗ್ ವಿಡಿಯೊ ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ಹವಾ ಕ್ರಿಯೇಟ್‌ ಮಾಡುತ್ತಿದೆ. ಚರಣ್ ರಾಜ್ ಸಂಗೀತ ನಿರ್ದೇಶನದ ಈ ಹಾಡಲ್ಲಿ ಅಭಿಷೇಕ್‌ ಅಂಬರೀಶ್‌ ಅದ್ಭುತವಾಗಿಯೇ ಕಾಣಿಸಿಕೊಂಡಿದ್ದಾರೆ. ಸನ್‌ ಗ್ಲಾಸ್, ಕೈಯಲ್ಲಿ ಸಿಗಾರ್ ಹೀಗೆ ಅಭಿಷೇಕ್ ಖದರ್ ಹಾಡಿನೂದ್ದಕ್ಕೂ ಇದೆ.

ಇದನ್ನೂ ಓದಿ: Abhishek Ambareesh: ಭಾವಿ ಪತ್ನಿ ಜನುಮದಿನದಂದು ರೊಮ್ಯಾಂಟಿಕ್‌ ಫೋಟೊಗಳನ್ನು ಹಂಚಿಕೊಂಡ ಅಭಿಷೇಕ್‌ ಅಂಬರೀಶ್‌

ಬ್ಯಾಡ್ ಮ್ಯಾನರ್ಸ್‌ ಹಾಡಿಗೆ ಧನು ಮಾಸ್ಟರ್ ಕೊರಿಯೋಗ್ರಫಿ ಮಾಡಿದ್ದಾರೆ. ಸಿನಿಮಾಟೋಗ್ರಾಫರ್ ಶೇಖರ್ ಅದನ್ನು ಅಷ್ಟೇ ಅದ್ಭುತವಾಗಿ ಸೆರೆ ಹಿಡಿದಿದ್ದಾರೆ. ಅಭಿಷೇಕ್ ಖಡಕ್ ಪೊಲೀಸ್‌ ಆಫಿಸರ್ ಪಾತ್ರದಲ್ಲಿ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರದಲ್ಲಿ ಇಬ್ಬರು ನಾಯಕಿಯರು. ಧನಂಜಯ್ ರಾಜನ್ ಈ ಗೀತೆಯನ್ನು ಬರೆದಿದ್ದಾರೆ.
ಈ ಗೀತೆಯ ಮೂಲಕ ಅಭಿಷೇಕ್‌ ಅಂಬರೀಶ್‌ ಅಭಿನಯದ ಬ್ಯಾಡ್ ಮ್ಯಾನರ್ಸ್ ಚಿತ್ರದ ಪ್ರಚಾರ ಶುರು ಆಗಿದೆ.

Exit mobile version