ಬೆಂಗಳೂರು : ರೆಬೆಲ್ ಸ್ಟಾರ್ ಅಂಬರೀಶ್ ಅವರ ಪುತ್ರ ಅಭಿಷೇಕ್ ಅಂಬರೀಶ್ (Abhishek Ambareesh) ಅವರ ನಿಶ್ಚಿತಾರ್ಥ ಡಿಸೆಂಬರ್ 11 ಭಾನುವಾರ ಖಾಸಗಿ ಹೋಟೇಲ್‌ನಲ್ಲಿ ನಡೆದಿದೆ. ಸದ್ದಿಲ್ಲದೇ ಉಂಗುರ ಪೂಜೆ ಕುಟುಂಬಸ್ಥರು ಮಾಡಿದ್ದು, ಅವೀವಾ ಬಿದ್ದಪ್ಪ ಜತೆ ಸಪ್ತಪದಿ ತುಳಿಯಲಿದ್ದಾರೆ ಅಭಿಷೇಕ್.
ಸ್ಯಾಂಡಲ್‌ವುಡ್ ಸ್ಟಾರ್ ನಟರು ಹಾಗೂ ರಾಜಕೀಯ ಗಣ್ಯರು ಸೇರಿದಂತೆ ಕೆಲವೇ ಕೆಲವು ಆಪ್ತರ ಸಮ್ಮುಖದಲ್ಲಿ ಅಭಿಷೇಕ್ ಹಾಗೂ ಅವೀವಾ ನಿಶ್ಚಿತಾರ್ಥ ನಡೆದಿದೆ. ಬೆಳಗ್ಗೆ 9:30ರಿಂದ 10.30ರ ವೇಳೆ ಕಾರ್ಯಕ್ರಮ ನಡೆದಿದೆ.
ಇದನ್ನೂ ಓದಿ | Abhishek Ambareesh | ಖ್ಯಾತ ಫ್ಯಾಷನ್ ಡಿಸೈನರ್ ಪುತ್ರಿ ಜತೆ ಎಂಗೇಜ್ ಆಗ್ತಿದ್ದಾರಂತೆ ಅಭಿಷೇಕ್ ಅಂಬರೀಷ್!
ಬಹುಕಾಲದ ಗೆಳತಿ ಅವೀವಾ ಬಿದ್ದಪ್ಪ ಜತೆ ಅಭಿಷೇಕ್ ಅಂಬರೀಶ್ ವಿವಾಹವಾಗಲಿದ್ದು, ಸಂಕ್ರಾಂತಿ ನಂತರ ಜೋಡಿ ಸಪ್ತಪದಿ ತುಳಿಯಲಿದೆ. ಇವರು ಖ್ಯಾತ ಫ್ಯಾಷನ್ ಡಿಸೈನರ್ ಪ್ರಸಾದ್ ಬಿದ್ದಪ್ಪ ಅವರು ಪುತ್ರಿಯಾಗಿದ್ದಾರೆ.
ಇದನ್ನೂ ಓದಿ | Abhishek Ambareesh | ಅವೀವಾ ಬಿದ್ದಪ್ಪ ಜತೆ ವಿವಾಹವಾಗಲಿರುವ ಅಭಿಷೇಕ್ ಅಂಬರೀಶ್: ನಿಶ್ಚಿತಾರ್ಥಕ್ಕೆ ಮುಹೂರ್ತ ಫಿಕ್ಸ್!