ಬೆಂಗಳೂರು: ಅಭಿಷೇಕ್ ಅಂಬರೀಶ್ ಹಾಗೂ ಅವಿವ ಬಿಡಪ (Abhishek-Aviva) ಅವರ ಬೀಗರೂಟ ಕಾರ್ಯಕ್ರಮ ಜೂನ್ 16ರಂದು ಮಂಡ್ಯದಲ್ಲಿ ಅದ್ದೂರಿಯಾಗಿ ನಡೆಯಿತು. ಸಾವಿರಾರು ಮಂದಿ ಬಂದು ಊಟ ಮಾಡಿ ತೆರಳಿದ್ದರು ಆದರೆ, ಕೆಲವರು ಅಡುಗೆ ಮಾಡುತ್ತಿದ್ದ ಜಾಗಕ್ಕೆ ಬಂದು ದಾಂಧಲೆ ನಡೆಸಿದ್ದಾರೆ. ಇದರಿಂದ ಸಾಕಷ್ಟು ಆಹಾರ ಹಾಳಾಗಿದೆ. ಈ ಬಗ್ಗೆ ಅಭಿಷೇಕ್ ಅಂಬರೀಷ್ ಅವರು ಬೇಸರ ಹೊರಹಾಕಿದ್ದಾರೆ. ಮಾಧ್ಯಮದವರ ಮುಂದೆ ಅಭಿಷೇಕ್ ಅಂಬರೀಶ್ ʻʻಸಾಕಷ್ಟು ಊಟ ವೇಸ್ಟ್ ಆಯಿತು. ಆ ಬಗ್ಗೆ ಬೇಸರ ಇದೆ’ ಎಂದು ಹೇಳಿದರು.
ಅಭಿಷೇಕ್ ಅಂಬರೀಶ್ ಮಾತನಾಡಿ ʻʻಎಷ್ಟೇ ಜನ ಬರಲಿ, ಬಂದವರಿಗೆ ಊಟ ಇಲ್ಲ ಎಂಬ ಸ್ಥಿತಿ ಬರಬಾರದು ಎಂದು ನಿರ್ಧಾರ ಮಾಡಿದ್ದೆವು. ಅಲ್ಲಿ ಏನಾದರೂ ಊಟ ಖಾಲಿ ಆಗತ್ತು ಬಂದರೆ ಮತ್ತೊಮ್ಮೆ ರೆಡಿ ಮಾಡಿ ಎಂತಲೂ ಹೇಳಿದ್ದೆವು. ಆದರೆ ಬೇಗ ಕ್ಲೋಸ್ ಮಾಡಬೇಕಾದ ಪರಿಸ್ಥಿತಿ ಬಂತು. ಕೆಲವರು ಅಡುಗೆ ಮಾಡುವ ಸ್ಥಳದಲ್ಲಿ ಬಂದು ಏರು ಪೇರು ಮಾಡಿದರು. ಬಂದಷ್ಟೂ ಜನರಿಗೆ ಊಟ ಬಡಿಸಿ ಎಂದು ನಾವು ಹೇಳಿದ್ದೆವು. ಆದರೆ, ಕೆಲವರು ಬಂದು ತೊಂದರೆ ಮಾಡಿದರು. ಇದರಿಂದ ಸಾಕಷ್ಟು ಊಟ ವೇಸ್ಟ್ ಆಯಿತು. ಆ ಬಗ್ಗೆ ಬೇಸರ ಇದೆ. ಊಟ ಚೆಲ್ಲೋದು ಸರಿಯಲ್ಲ ಅದು ತಪ್ಪು’ ಎಂದಿದ್ದಾರೆ ಅಭಿಷೇಕ್.
ಬೀಗರೂಟ ಅಲ್ಲ..ಇದು ಪ್ರೀತಿ ಉತ್ಸವ
ʻʻಬೀಗರೂಟ ಅನ್ನುವದಕ್ಕಿಂತ ಪ್ರೀತಿಯ ಉತ್ಸವ ಎನ್ನಬಹುದು. ನಾನು, ನನ್ನ ಪತ್ನಿ ಮತ್ತು ತಾಯಿಯ ಜತೆ ಜನರ ಜತೆ ಮಾತನಾಡುವಾಗ ಊಟ ಬೇಡಪ್ಪ, ನಿಮ್ಮನ್ನ ನೋಡೊಕೆ ಬಂದಿದ್ದೇವೆ ಎಂದು ಜನರು ಪ್ರೀತಿ ತೋರಿಸಿದರುʼʼ ಎಂದರು.
ಅಭಿ-ಅವಿವ ಬೀಗರೂಟದಲ್ಲಿ ಊಟಕ್ಕೆ ಬಂದಿದ್ದವರಲ್ಲಿ ಕೆಲವರು ಸರತಿ ಸಾಲಿನಲ್ಲಿ ನಿಂತು, ಟೇಬಲ್‌ನಲ್ಲಿ ಕುಳಿತು ಊಟ ಮಾಡಿ ಹೊದರೆ ಇನ್ನೂ ಕೆಲವರು ನೇರ ಅಡುಗೆ ಮನೆಗೆ ನುಗ್ಗಿದರು. ಊಟಕ್ಕಾಗಿ ಮುಗಿಬಿದ್ದ ಜನರಿಗೆ ಪೊಲೀಸರು ಲಾಠಿ ಚಾರ್ಜ್ ಮಾಡಿದ ಘಟನೆ ಕೂಡಾ ನಡೆಯಿತು. ಕೆಲವರು ಅಲ್ಲಿ ಹಾಕಿದ್ದ ಕಬ್ಬಿಣದ ಕಂಬಿಗಳನ್ನೂ ಕಿಚ್ಚು ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಇದನ್ನೂ ಓದಿ: Abhishek-Aviva: ಅಭೀಷೇಕ್-ಅವಿವಗೆ ಸಿಕ್ತು ಸ್ಪೆಷಲ್ ಗಿಫ್ಟ್; ಬೀಗರ ಔತಣಕೂಟದ ಸಣ್ಣ ಝಲಕ್!
ಬೀಗರೂಟಕ್ಕೆ ಸಾವಿರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಆಗಮಿಸಿದ್ದರು. ನವದಂಪತಿ ಅಭಿಷೇಕ್ ಅಂಬರೀಶ್ ಹಾಗೂ ಅವಿವಾಗೆ ಶುಭ ಕೋರಲು ಅಭಿಮಾನಿಗಳು ಮುಗಿಬಿದ್ದರು. ಅಭಿಮಾನಿಗಳನ್ನು ನಿಯಂತ್ರಿಸುವಲ್ಲಿ ಪೊಲೀಸರು ಹರಸಾಹಸ ಪಟ್ಟರು. ತಳ್ಳಾಟ ನೂಕಾಟ ಹೆಚ್ಚಾದಾಗ ಪೊಲೀಸರು ಲಘು ಲಾಠಿ ಪ್ರಹಾರ ನಡೆಸಬೇಕಾಯಿತು. ಊಟ ಸಿಗಲಿಲ್ಲ ಎಂದು ಕೆಲವರು ದೂರಿದರು. ಈ ಬಗ್ಗೆ ಸುದ್ದಿಗೋಷ್ಠಿ ನಡೆಸಿದ ಅಭಿಷೇಕ್ ಅಂಬರೀಷ್, ‘’ನಮ್ಮ ಕಡೆಯಿಂದ ಏನಾದರೂ ತಪ್ಪಾಗಿದ್ದರೆ ದಯವಿಟ್ಟು ಕ್ಷಮಿಸಿಬಿಡಿ’’ ಎಂದು ಮಂಡ್ಯದ ಜನರಲ್ಲಿ ಕ್ಷಮೆಯಾಚಿಸಿದರು.
ಜೂನ್ 5ರಂದು ನಟ ಅಭಿಷೇಕ್ ಅಂಬರೀಷ್ ಮತ್ತು ಅವಿವ ಬಿಡಪ ವಿವಾಹ ನೆರವೇರಿತ್ತು. ಹೀಗಾಗಿ ಬುಧವಾರ ಆರತಕ್ಷತೆ ಹಮ್ಮಿಕೊಳ್ಳಲಾಗಿತ್ತು. ಅದೇ ರೀತಿ ಚಿತ್ರ ರಂಗದ ನಟ, ನಟಿಯರು ಕಾರ್ಯಕ್ರಮಕ್ಕೆ ಆಗಮಿಸಿದ್ದರು. ತೆಲುಗು ಸ್ಟಾರ್ ನಟ ಮೆಗಾಸ್ಟಾರ್ ಚಿರಂಜೀವಿ, ನಟ, ರಾಜಕಾರಣಿ ಶತ್ರುಘ್ನ ಸಿನ್ಹಾ, ಸ್ಯಾಂಡಲ್‌ವುಡ್ ನಟ ರವಿಚಂದ್ರನ್, ನಟಿ ರಮ್ಯಾ, ತಮಿಳು ನಟ ಪ್ರಭು ಗಣೇಶನ್, ರಾಘವೇಂದ್ರ ರಾಜಕುಮಾರ್, ನಟಿ ಖುಷ್ಬೂ ಸುಂದರ್, ಮೈಸೂರು ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ವಾಗ್ಮಿ ಚಕ್ರವರ್ತಿ ಸೂಲಿಬೆಲೆ ಸೇರಿ ಹಲವರು ಹಾಜರಾಗಿದ್ದರು. ಅದಾದ ಬಳಿಕ ಅದ್ಧೂರಿ ಸಂಗೀತ್ ಪಾರ್ಟಿಯನ್ನು ಸಹ ಅರೇಂಜ್ ಮಾಡಲಾಗಿತ್ತು.