Site icon Vistara News

Abhishek Ambareesh | ಖ್ಯಾತ ಫ್ಯಾಷನ್ ಡಿಸೈನರ್ ಪುತ್ರಿ ಜತೆ ಎಂಗೇಜ್‌ ಆಗ್ತಿದ್ದಾರಂತೆ ಅಭಿಷೇಕ್‌ ಅಂಬರೀಷ್!

Abhishek Ambareesh

ಬೆಂಗಳೂರು: ರೆಬಲ್‌ ಸ್ಟಾರ್‌ ಅಂಬರೀಷ್ (Abhishek Ambareesh) ಅವರ ಪುತ್ರ ಯಂಗ್‌ ರೆಬಲ್‌ ಸ್ಟಾರ್‌ ಅಭಿಷೇಕ್‌ ಅಂಬರೀಷ್ ಅವರ ನಿಶ್ಚಿತಾರ್ಥದ ಸುದ್ದಿ ಹಲವು ದಿನಗಳಿಂದ ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿವೆ. ವರದಿ ಪ್ರಕಾರ ಹಲವು ವರ್ಷಗಳಿಂದ ಪರಿಚಯವಿರುವ ತಮ್ಮ ಗೆಳತಿಯನ್ನೇ ನಟ ಮದುವೆಯಾಗಲಿದ್ದಾರೆ ಎನ್ನಲಾಗುತ್ತಿದೆ. ಖ್ಯಾತ ಫ್ಯಾಷನ್ ಡಿಸೈನರ್ ಪುತ್ರಿ ಜತೆ ಅಭಿಷೇಕ್‌ ಅವರು ಎಂಗೇಜ್‌ ಆಗುತ್ತಿದ್ದಾರೆ ಎನ್ನಲಾಗುತ್ತಿದೆ.

ಸ್ನೇಹಿತೆಯಾಗಿರುವ ಅವಿದಾ ಬಿದ್ದಪ್ಪ ಅವರೇ ಅಭಿಷೇಕ್‌ ಅವರ ಹೊಸ ಜೀವನಕ್ಕೆ ಕಾಲಿಡುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಇವರು ಖ್ಯಾತ ಫ್ಯಾಷನ್ ಡಿಸೈನರ್ ಪ್ರಸಾದ್ ಬಿದ್ದಪ್ಪ ಅವರು ಪುತ್ರಿಯಾಗಿದ್ದಾರೆ. ಡಿಸೆಂಬರ್‌ 11ಕ್ಕೆ ಅಭಿಷೇಕ್‌ ಅವರ ನಿಶ್ಚಿತಾರ್ಥವಿದೆ ಎನ್ನಲಾಗುತ್ತಿದೆ. ಆದರೆ ಈ ಬಗ್ಗೆ ನಟ ಅಭಿಷೇಕ್‌ ಅಧಿಕೃತವಾಗಿ ಪ್ರತಿಕ್ರಿಯೆ ನೀಡಿಲ್ಲ.

ಈ ಹಿಂದೆಯಷ್ಟೇ ನಟಿ ಸುಮಲತಾ ಅವರು ಈ ಗಾಸಿಪ್‌ಗಳ ಕುರಿತು ಮಾತನಾಡಿ ʻʻಕಳೆದ ಮೂರು ವರ್ಷಗಳಿಂದ ಅಭಿಷೇಕ್‌ ವಿವಾಹದ ವಿಷಯ ಆಗಾಗ ಕೇಳಿಬರುತ್ತಲೇ ಇದೆ. ಹುಡುಗಿ ಇದ್ದರೆ ನನಗೂ ಹೇಳಿ, ನಾನೂ ನೋಡುತ್ತೇನೆʼʼ ಎಂದು ನಗುತ್ತಲೇ ಉತ್ತರಿಸಿದ್ದರು.

ಇದನ್ನೂ ಓದಿ | Sapthami Gowda | ಅಭಿಷೇಕ್‌ ಅಂಬರೀಶ್‌ ಜತೆ ನಟಿಸುತ್ತಿದ್ದಾರೆ ಕಾಂತಾರ ಚೆಲುವೆ ಸಪ್ತಮಿ ಗೌಡ

ಈಗಾಗಲೇ ಆಯ್ದ ನಟ ಹಲವು ನಟ, ನಟಿಯರಿಗೆ, ಗಣ್ಯವ್ಯಕ್ತಿಗಳಿಗೆ ಆಹ್ವಾನ ನೀಡಿದ್ದಾರೆ ಎನ್ನಲಾಗುತ್ತಿದೆ. ನವೆಂಬರ್‌ 29ರಂದು ಮಂಗಳವಾರ ಅಭಿಷೇಕ್‌ ಅಂಬರೀಶ್‌ ಅವರು ʻಕಾಳಿʼ ಸಿನಿಮಾದ ಮುಹೂರ್ತ ನೆರವೇರಿಸಿದ್ದಾರೆ. ಕಾಂತಾರ ಬೆಡಗಿ ಸಪ್ತಮಿ ಗೌಡ ಈ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಪೈಲ್ವಾನ್‌, ಗಜಕೇಸರಿ, ಹೆಬ್ಬುಲಿ ಚಿತ್ರವನ್ನು ನಿರ್ದೇಶಿಸಿದ ಕೃಷ್ಣ ಅವರು ಈ ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದಾರೆ. 

ಕಾಳಿ ಸಿನಿಮಾ 1990ರ ದಶಕದ ಕಾವೇರಿ ಗಲಭೆಯ ಹಿನ್ನೆಲೆಯಲ್ಲಿ ನಡೆಯುವ ಚಿತ್ರವಾಗಿದೆ. ನಿರ್ದೇಶಕ ಕೃಷ್ಣ ಅವರ ಪತ್ನಿ ಸ್ವಪ್ನಾ ಕೃಷ್ಣ ತಮ್ಮ RRR ಮೋಷನ್ ಪಿಕ್ಚರ್ಸ್ ಸಂಸ್ಥೆಯಡಿ ನಿರ್ಮಾಣ ಮಾಡುತ್ತಿದ್ದಾರೆ. ಕಾಳಿ ಚಿತ್ರಕ್ಕೆ ‘ಗೋಧಿ ಬಣ್ಣ ಸಾಧಾರಣ ಮೈಕಟ್ಟು’, ‘ಟಗರು’ ‘ಸಲಗ’ ಮುಂತಾದ ಚಿತ್ರಗಳಿಗೆ ಸಂಗೀತ ಸಂಯೋಜಿಸಿರುವ ಚರಣ್ ರಾಜ್ ಸಂಗೀತ ನೀಡುತ್ತಿದ್ದಾರೆ. ಈಗಾಗಲೇ ಅಭಿಷೇಕ್‌ ಅವರು ʻಬ್ಯಾಡ್‌ಮ್ಯಾನರ್ಸ್‌ʼ ಸಿನಿಮಾ ಚಿತ್ರೀಕರಣವನ್ನು ಮುಗಿಸಿದ್ದಾರೆ.

ಇದನ್ನೂ ಓದಿ | Young Rebel Star ಅಭಿಷೇಕ್‌ ಅಂಬರೀಶ್‌ ‘ಕಾಳಿ’ ಫಸ್ಟ್‌ ಲುಕ್‌ ರಿವೀಲ್‌

Exit mobile version