ಬೆಂಗಳೂರು : ಯಂಗ್ ರೆಬಲ್ ಸ್ಟಾರ್ ಅಭಿಷೇಕ್ ಅಂಬರೀಶ್ (Abhishek Ambareesh) ಹಾಗೂ ಅವಿವಾ ಬಿದ್ದಪ್ಪ ನಿಶ್ಚಿತಾರ್ಥ ಡಿಸೆಂಬರ್ 11 ಭಾನುವಾರ ಬೆಂಗಳೂರಿನ ಫೋರ್ ಸೀಸನ್ಸ್ ಹೋಟೆಲ್ನಲ್ಲಿ ಅದ್ಧೂರಿಯಾಗಿ ನಡೆದಿದೆ. ಅಭಿಷೇಕ್ ಅಂಬರೀಶ್ ಕೈ ಹಿಡಿಯಲಿರುವ ಅವಿವಾ, ಖ್ಯಾತ ಫ್ಯಾಷನ್ ಡಿಸೈನರ್ ಪ್ರಸಾದ್ ಬಿದ್ದಪ್ಪ ಅವರ ಪುತ್ರಿಯಾಗಿದ್ದಾರೆ. ನಿಶ್ಚಿತಾರ್ಥಕ್ಕೆ ಸಚಿವರಾದ ಅಶ್ವತ್ಥ ನಾರಾಯಣ್ ಕೂಡ ಆಗಮಿಸಿದ್ದರು.
ನಾಲ್ಕು ವರ್ಷಗಳಿಂದ ಅಭಿಷೇಕ್ ಮತ್ತು ಅವಿವಾ ಬಿದ್ದಪ್ಪ ಪ್ರೀತಿಸುತ್ತಿದ್ದರು. ತಮ್ಮ ಪ್ರೀತಿ ವಿಚಾರವನ್ನು ಕುಟುಂಬಕ್ಕೆ ತಿಳಿಸಿ ಗ್ರೀನ್ ಸಿಗ್ನಲ್ ಪಡೆದು ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಜನವರಿ 2023ರ ಸಂಕ್ರಾಂತಿ ಹಬ್ಬದ ಸಮಯದಲ್ಲಿ ಅದ್ಧೂರಿಯಾಗಿ ಮದುವೆ ನಡೆಯಲಿದೆ ಎನ್ನಲಾಗುತ್ತಿದೆ.
ಇದನ್ನೂ ಓದಿ | Abhishek Ambareesh | ಅವೀವಾ ಬಿದ್ದಪ್ಪ ಜತೆ ವಿವಾಹವಾಗಲಿರುವ ಅಭಿಷೇಕ್ ಅಂಬರೀಶ್: ನಿಶ್ಚಿತಾರ್ಥಕ್ಕೆ ಮುಹೂರ್ತ ಫಿಕ್ಸ್!
ಅವಿವಾ ಬಿದ್ದಪ್ಪ ಫ್ಯಾಷನ್ ಲೋಕದಲ್ಲಿ ತೊಡಗಿಸಿಕೊಂಡಿದ್ದಾರೆ. ತಮ್ಮದೇ ಸ್ವಿಮ್ ಸೂಟ್ ಬ್ರ್ಯಾಂಡ್ನ ಲಾಂಚ್ ಮಾಡಿದ್ದಾರೆ. ಅಭಿಷೇಕ್ ಮುಂದಿನ ಚಿತ್ರಕ್ಕೆ ಡೈರೆಕ್ಷನ್ ಮಾಡುತ್ತಿರುವ ಎಸ್. ಮಹೇಶ್ ಕುಮಾರ್ ಕೂಡ ನಿಶ್ಚಿತಾರ್ಥಕ್ಕೆ ಭಾಗಿಯಾಗಿದ್ದಾರೆ. ಇದೀಗ ಅವರ ಫೋಟೊ ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ.
ಇದನ್ನೂ ಓದಿ | Abhishek Ambareesh | ʻಯಂಗ್ ರೆಬಲ್ ಸ್ಟಾರ್ʼ ಅಭಿಷೇಕ್ ಅಂಬರೀಶ್ ನಿಶ್ಚಿತಾರ್ಥ: ವೈರಲ್ ಆಯ್ತು ಫೋಟೊ!