Site icon Vistara News

Abhishek Ambareesh Wedding: ಮದುವೆಗೂ ಮುನ್ನ ಅವಿವಗೆ ಸಿಕ್ತು ಚಿನ್ನದ ಸರ; ಇದರ ಸ್ಪೆಷಾಲಿಟಿ ಏನು?

Aviva got a gold chain; What is its specialty

ಬೆಂಗಳೂರು: ಅಭಿಷೇಕ್‌ ಅಂಬರೀಶ್‌ ಹಾಗೂ ಅವಿವ ಬಿಡಪ (Abhishek Ambareesh Wedding) ಹೊಸ ಜೀವನಕ್ಕೆ ಕಾಲಿಟ್ಟಿದ್ದಾರೆ. ವಿವಾಹಕ್ಕೂ ಮೊದಲು ಅವಿವಗೆ ಸಖತ್ ಗಿಫ್ಟ್ ಸಿಕ್ಕಿದೆ. ಇದನ್ನು ಅವರು ಇನ್‌ಸ್ಟಾ ಸ್ಟೋರಿಯಲ್ಲಿ ಹಂಚಿಕೊಂಡಿದ್ದಾರೆ. ಅಂದಹಾಗೆ ಈ ಗಿಫ್ಟ್ ಅಮೆರಿಕದ ಲಾಸ್ ಏಂಜಲೀಸ್​ನಲ್ಲಿರುವ ಅವರ ಗೆಳತಿ ಒಬ್ಬರು ಅವಿವಾಗೆ ಕಳುಹಿಸಿದ್ದಾರೆ. ಚಿನ್ನದ ಸರ ಇದಾಗಿದ್ದು, ಭಾರತ ಹಾಗೂ ಅಮೆರಿಕದ ನಕಾಶೆ ಸರದ ಮೇಲಿದೆ. ಎರಡೂ ದೇಶಗಳ ನಕಾಶೆ ಒಂದೇ ಚೈನ್​​ನಲ್ಲಿರುವುದು ಇದರ ವಿಶೇಷತೆ. ‘ಅಮೆರಿಕ ಮತ್ತು ಭಾರತ. ಸೋಲ್​ಮೇಟ್ಸ್​. ಐ ಲವ್​ ಯೂ’ ಎಂದು ಅವಿವ ಅವರ ಗೆಳತಿಯನ್ನು ಟ್ಯಾಗ್‌ ಮಾಡಿದ್ದಾರೆ.

ಖ್ಯಾತ ಫ್ಯಾಷನ್​ ಡಿಸೈನರ್​ ಪ್ರಸಾದ್​ ಬಿಡಪ ಅವರ ಪುತ್ರಿ ಆಗಿರುವ ಅವಿವ ಬಿಡಪ (Aviva Bidapa) ಹಾಗೂ ಅಭಿಷೇಕ್​ ಅಂಬರೀಷ್​ ನಡುವೆ ಇತ್ತೀಚಿನ ವರ್ಷಗಳಲ್ಲಿ ಪರಿಚಯ ಬೆಳೆದಿತ್ತು. ಪರಿಚಯ ಪ್ರೀತಿಗೆ ತಿರುಗಿತು. ಕುಟುಂಬದ ಒಪ್ಪಿಗೆ ಪಡೆದು ಇಬ್ಬರೂ ನಿಶ್ಚಿತಾರ್ಥ ಮಾಡಿಕೊಂಡರು. ಈಗ ಇಬ್ಬರೂ ಹೊಸ ಜೀವನಕ್ಕೆ ಕಾಲಿಟ್ಟಿದ್ದಾರೆ. ನಾಲ್ಕು ವರ್ಷಗಳಿಂದ ಅಭಿಷೇಕ್ ಮತ್ತು ಅವಿವ ಬಿಡಪ ಪ್ರೀತಿಸುತ್ತಿದ್ದರು. ಅವಿವ ಬಿಡಪ ಫ್ಯಾಷನ್‌ ಲೋಕದಲ್ಲಿ ತೊಡಗಿಸಿಕೊಂಡಿದ್ದಾರೆ. ತಮ್ಮದೇ ಸ್ವಿಮ್ ಸೂಟ್‌ ಬ್ರ್ಯಾಂಡ್‌ನ ಲಾಂಚ್ ಮಾಡಿದ್ದಾರೆ.

Abhishek Ambareesh Wedding

ಇದನ್ನೂ ಓದಿ: Abhishek Ambareesh Wedding: ಮದುಮಗಳಾಗಿ ಮಿಂಚಿದ ಅಭಿಷೇಕ್ ಅಂಬರೀಶ್‌ ʻಮನದರಸಿʼ!

ಕರ್ಕಾಟಕ ಲಗ್ನದಲ್ಲಿ (9:30-10:30) ಇಬ್ಬರೂ ಹಸೆಮಣೆ ಏರಿದರು. ಬೆಂಗಳೂರಿನ ಮಾಣಿಕ್ಯ ಚಾಮರ ವಜ್ರದ ಕಲ್ಯಾಣಮಂಟಪದಲ್ಲಿ ಮದುವೆ ಗೌಡರ ಸಂಪ್ರದಾಯದಲ್ಲಿ ಅದ್ಧೂರಿಯಾಗಿ ನೆರವೇರಿತು. ಅಂಬರೀಷ್ ಅವರ ಮನೆ ಮುಂದೆ ಹಸಿರು ಚಪ್ಪರ ಹಾಕಲಾಗಿದೆ. ತಳಿರು ತೋರಣಗಳಿಂದ ಮನೆಯನ್ನು ಸಿಂಗರಿಸಲಾಗಿದೆ. ವಿದ್ಯುತ್ ದೀಪಗಳಿಂದ ಇಡೀ ಮನೆ ಅಲಂಕಾರಗೊಂಡಿದೆ. ಕುಟುಂಬದವರು, ಆಪ್ತರು ಹಾಗೂ ಗಣ್ಯರ ಸಮ್ಮುಖದಲ್ಲಿ ಮದುವೆ ನೆರವೇರಿದೆ. ಜೂನ್ 7ಕ್ಕೆ ಬೆಂಗಳೂರಿನ ಪ್ಯಾಲೇಸ್​ ಗ್ರೌಂಡ್​ನ ತ್ರಿಪುರ ವಾಸಿನಿಯಲ್ಲಿ ಆರತಕ್ಷತೆ ಕಾರ್ಯಕ್ರಮ ನಡೆಯಲಿದೆ. ಜೂನ್ 16ರಂದು ಮಂಡ್ಯದಲ್ಲಿ ಬೀಗರ ಊಟ ನಡೆಯಲಿದೆ.

Exit mobile version