Site icon Vistara News

Abhishek Ambareesh Wedding: ದೀರ್ಘಕಾಲದ ಗೆಳತಿಗೆ ಮಾಂಗಲ್ಯ ಧಾರಣೆ ಮಾಡಿದ ಅಭಿಷೇಕ್ ಅಂಬರೀಶ್‌

Abhishek Ambareesh Wedding with Aviva Bidapa

ಬೆಂಗಳೂರು: ಯಂಗ್‌ ರೆಬೆಲ್ ಸ್ಟಾರ್‌ ಅಭಿಷೇಕ್ ಅಂಬರೀಶ್ (Abhishek Ambareesh Wedding) ) ಹಾಗೂ ಅವಿವ ಬಿಡಪ ಜೂನ್‌ 5ರಂದು ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಕರ್ಕಾಟಕ ಲಗ್ನದಲ್ಲಿ (9:30-10:30) ಇಬ್ಬರೂ ಹಸೆಮಣೆ ಏರಿದರು. ಬೆಂಗಳೂರಿನ ಮಾಣಿಕ್ಯ ಚಾಮರ ವಜ್ರದ ಕಲ್ಯಾಣಮಂಟಪದಲ್ಲಿ ಮದುವೆ ಗೌಡರ ಸಂಪ್ರದಾಯದಲ್ಲಿ ಅದ್ಧೂರಿಯಾಗಿ ನೆರವೇರಿತು. ಅವಿವ ಬಿಡಪ ಅವರಿಗೆ ಮಾಂಗಲ್ಯ ಧಾರಣೆ ಮಾಡುವ ವಿಡಿಯೊ ಇದೀಗ ವೈರಲ್‌ ಆಗಿದೆ.

ಅಂಬರೀಷ್ ಅವರ ಮನೆ ಮುಂದೆ ಹಸಿರು ಚಪ್ಪರ ಹಾಕಲಾಗಿದೆ. ತಳಿರು ತೋರಣಗಳಿಂದ ಮನೆಯನ್ನು ಸಿಂಗರಿಸಲಾಗಿದೆ. ವಿದ್ಯುತ್ ದೀಪಗಳಿಂದ ಇಡೀ ಮನೆ ಅಲಂಕಾರಗೊಂಡಿದೆ. ಕುಟುಂಬದವರು, ಆಪ್ತರು ಹಾಗೂ ಗಣ್ಯರ ಸಮ್ಮುಖದಲ್ಲಿ ಮದುವೆ ನೆರವೇರಿದೆ. ಜೂನ್ 7ಕ್ಕೆ ಬೆಂಗಳೂರಿನ ಪ್ಯಾಲೇಸ್​ ಗ್ರೌಂಡ್​ನ ತ್ರಿಪುರ ವಾಸಿನಿಯಲ್ಲಿ ಆರತಕ್ಷತೆ ಕಾರ್ಯಕ್ರಮ ನಡೆಯಲಿದೆ. ಜೂನ್ 16ರಂದು ಮಂಡ್ಯದಲ್ಲಿ ಬೀಗರ ಊಟ ನಡೆಯಲಿದೆ.

ಇದನ್ನೂ ಓದಿ: Abhishek Ambareesh Wedding: ಅಭಿಷೇಕ್ ಅಂಬರೀಶ್‌ ಕೈಯಲ್ಲಿ ಮೆಹೆಂದಿ; ಪ್ರೀತಿಯಿಂದ ಬರೆಸಿಕೊಂಡ ಹೆಸರು ಇವು!

ಖ್ಯಾತ ಫ್ಯಾಷನ್​ ಡಿಸೈನರ್​ ಪ್ರಸಾದ್​ ಬಿಡಪ ಅವರ ಪುತ್ರಿ ಆಗಿರುವ ಅವಿವ ಬಿಡಪ (Aviva Bidapa) ಹಾಗೂ ಅಭಿಷೇಕ್​ ಅಂಬರೀಷ್​ ನಡುವೆ ಇತ್ತೀಚಿನ ವರ್ಷಗಳಲ್ಲಿ ಪರಿಚಯ ಬೆಳೆದಿತ್ತು. ಪರಿಚಯ ಪ್ರೀತಿಗೆ ತಿರುಗಿತು. ಕುಟುಂಬದ ಒಪ್ಪಿಗೆ ಪಡೆದು ಇಬ್ಬರೂ ನಿಶ್ಚಿತಾರ್ಥ ಮಾಡಿಕೊಂಡರು. ಈಗ ಇಬ್ಬರೂ ಹೊಸ ಜೀವನಕ್ಕೆ ಕಾಲಿಟ್ಟಿದ್ದಾರೆ. ನಾಲ್ಕು ವರ್ಷಗಳಿಂದ ಅಭಿಷೇಕ್ ಮತ್ತು ಅವಿವ ಬಿಡಪ ಪ್ರೀತಿಸುತ್ತಿದ್ದರು. ಅವಿವ ಬಿಡಪ ಫ್ಯಾಷನ್‌ ಲೋಕದಲ್ಲಿ ತೊಡಗಿಸಿಕೊಂಡಿದ್ದಾರೆ. ತಮ್ಮದೇ ಸ್ವಿಮ್ ಸೂಟ್‌ ಬ್ರ್ಯಾಂಡ್‌ನ ಲಾಂಚ್ ಮಾಡಿದ್ದಾರೆ.

Exit mobile version