Abhishek-Aviva: ಅಭಿಷೇಕ್-ಅವಿವ ಬೀಗರೂಟ ತಯಾರಿ ಭರ್ಜರಿ: ಹೇಗಿದೆ ನೋಡಿ ಔತಣ! Yashaswi Devadiga 2 ವರ್ಷಗಳು ago ಅಭಿಷೇಕ್ ಅಂಬರೀಷ್ ಮತ್ತು ಅವಿವ ಜೋಡಿಯ (Abhishek-Aviva) ಬೀಗರ ಔತಣಕೂಟಕ್ಕೆ ಜೂನ್ 16ರಂದು ಭರ್ಜರಿ ಸಿದ್ದತೆ ನಡೆಯುತ್ತಿದೆ. ಮದ್ದೂರಿನ ಗೆಜ್ಜಲಗೆರೆ ಬಳಿ ಬೃಹತ್ ಜರ್ಮನ್ ಶೆಡ್ ನಿರ್ಮಾಣವಾಗಿದೆ. ಜತೆಗೆ ಬೀಗರ ಔತಣಕೂಟದ ಮುಂಭಾಗದಲ್ಲಿ ಅಂಬಿ ಪೋಟೊ ಅಳವಡಿಕೆ ಮಾಡಲಾಗಿದೆ. ಕಾರ್ಯಕ್ರಮಕ್ಕೆ ಬರುವ ಅಭಿಮಾನಿಗಳು ಮೊದಲು ಅಂಬಿ ನಮಿಸಿ ಬರುವಂತೆ ವ್ಯವಸ್ಥೆ ಆಗಿದೆ. ವೆಸ್ಟರ್ನ್ ಬೆಡ್ ಶೈಲಿಯಲ್ಲಿ ಪ್ಲವರ್ ಡೆಕೊರೇಷನ್ ಕೂಡ ಇದೆ. ಮದುವೆಯಷ್ಟೆ ಅದ್ಧೂರಿಯಾಗಿ ಬೀಗರೂಟ ಕಾರ್ಯಕ್ರಮ ಆಯೋಜಿತವಾಗಿದ್ದು ಭಾರಿ ಸಂಖ್ಯೆಯ ಜನರಿಗೆ ಭರ್ಜರಿ ಮಾಂಸದೂಟ ಹಾಕಿಸಲು ತಯಾರಿ ಜೋರಾಗಿದೆ. ಇನ್ನೇನು ಕೆಲವೇ ಹೊತ್ತಿನಲ್ಲಿ ಊಟ ಆರಂಭ ಆಗಲಿದೆ. ಸಾವಿರಾರು ಮಂದಿ ಊಟ ಸವಿಯಲಿದ್ದಾರೆ. ಸುಮಾರು ಐವತ್ತು ಸಾವಿರ ಜನರಿಗೆ ಭೋಜನ ವ್ಯವಸ್ಥೆಯನ್ನು ಮಾಡಿಸಲಾಗಿದ್ದು, ವಿಐಪಿ ಹಾಗೂ ಸಾಮಾನ್ಯರಿಗಾಗಿ ಎರಡು ಕೌಂಟರ್ಗಳನ್ನು ಮಾಡಲಾಗಿದೆ. ಬೀಗರೂಟಕ್ಕೆ 7 ಟನ್ ಮಟನ್ ಹಾಗೂ 7 ಟನ್ ಚಿಕನ್ ಬಳಸಿ ಬೀಗರೂಟ ತಯಾರು ಮಾಡಲಾಗಿದೆ. ಮೆನುವಿನಲ್ಲಿ ರಾಗಿ ಮುದ್ದೆ, ಬೋಟಿ ಗೊಜ್ಜು, ಮೊಟ್ಟೆ, ಮಟನ್, 2 ತರ ಚಿಕನ್, ಗೀ ರೈಸ್, ಅನ್ನ, ತಿಳಿ ಸಾಂಬಾರ್, ಮಜ್ಜಿಗೆ, ಬಾಳೆಹಣ್ಣು, ಬೀಡಾ ನಂದಿನಿ ಐಸ್ ಕ್ರೀಂ, ವಾಟರ್ ಬಾಟಲ್ಗಳು ಇರಲಿವೆ. ಸುಮಾರು 15 ಎಕರೆ ಪ್ರದೇಶದಲ್ಲಿ ಜರ್ಮನ್ ಟೆಂಟ್ಗಳನ್ನು ಹಾಕಲಾಗಿದ್ದು, ಎಲ್ಲರಿಗೂ ನೆರಳಿನಲ್ಲಿ ಕುಳಿತು ಆರಾಮದಿಂದ ಊಟ ಸೇವಿಸುವಂತೆ ವ್ಯವಸ್ಥೆ ಮಾಡಲಾಗಿದೆ. ಜೂನ್ 5ರಂದು ನಟ ಅಭಿಷೇಕ್ ಅಂಬರೀಶ್ ಮತ್ತು ಅವಿವ ಬಿಡಪ ವಿವಾಹ ನೆರವೇರಿತ್ತು. ಹೀಗಾಗಿ ಬುಧವಾರ ಆರತಕ್ಷತೆ ಹಮ್ಮಿಕೊಳ್ಳಲಾಗಿತ್ತು. ಈಗಾಗಲೇ ಬೆಂಗಳೂರಿನ ನಿವಾಸದಿಂದ ಅವಿವ-ಅಭಿಷೇಕ್ ದಂಪತಿ ಮಂಡ್ಯ ಕಡೆ ಪ್ರಯಾಣ ಬೆಳೆಸಿದೆ. ಇದನ್ನೂ ಓದಿ: Abhishek-Aviva: ಅಂಬಿ ಮಗನ ಬೀಗರೂಟ ಇಂದು; 15 ಎಕರೆ ಪ್ರದೇಶದಲ್ಲಿ ಭರ್ಜರಿ ಸಿದ್ಧತೆ! ಮದುವೆಯಷ್ಟೆ ಅದ್ಧೂರಿಯಾಗಿ ಬೀಗರೂಟ ಕಾರ್ಯಕ್ರಮ ಆಯೋಜಿತವಾಗಿದ್ದು ಭಾರಿ ಸಂಖ್ಯೆಯ ಜನರಿಗೆ ಭರ್ಜರಿ ಮಾಂಸದೂಟ ಹಾಕಿಸಲು ತಯಾರಿ ಜೋರಾಗಿದೆ.