ಬೆಂಗಳೂರು: ಜೂನ್ 5ರಂದು ವಿವಾಹ ಆಗಿದ್ದ ಅಭಿಷೇಕ್ ಅಂಬರೀಷ್ ಮತ್ತು ಅವಿವ ಬಿಡಪ (Abhishek-Aviva) ಅವರ ಸಂಗೀತ ಕಾರ್ಯಕ್ರಮ ಶನಿವಾರ (ಜೂನ್ 10) ರಾತ್ರಿ ನಡೆದಿತ್ತು. ಇದರಲ್ಲಿ ಅನೇಕ ಸೆಲೆಬ್ರಿಟಿಗಳು ಭಾಗಿ ಆಗಿದ್ದರು. ನಾಳೆ ( ಜೂನ್ 15) ಮದುವೆ ಬೀಗರೂಟ ಕಾರ್ಯಕ್ರಮವನ್ನು ಮಂಡ್ಯದಲ್ಲಿ ಆಯೋಜಿಸಲಾಗಿದೆ. ಮದುವೆಯಷ್ಟೆ ಅದ್ಧೂರಿಯಾಗಿ ಬೀಗರೂಟ ಕಾರ್ಯಕ್ರಮ ಆಯೋಜಿತವಾಗಿದ್ದು ಭಾರಿ ಸಂಖ್ಯೆಯ ಜನರಿಗೆ ಭರ್ಜರಿ ಮಾಂಸದೂಟ ಹಾಕಿಸಲು ತಯಾರಿ ಜೋರಾಗಿದೆ.
ಜೂನ್ 16ರಂದು ನಡೆಯಲಿರುವ ಬೀಗರೂಟಕ್ಕೆ ಭರ್ಜರಿ ತಯಾರಿ ಆರಂಭವಾಗಿದೆ. ನರೇಂದ್ರ ಮೋದಿಯವರ ಕಾರ್ಯಕ್ರಮ ನಡೆದಿದ್ದ ಮದ್ದೂರಿನ ಗೆಜ್ಜಲಗೆರೆಯ ಬೃಹತ್ ಮೈದಾನದಲ್ಲಿ ಬೀಗರೂಟಕ್ಕೆ ಸಿದ್ಧತೆ ಆರಂಭವಾಗಿವೆ. ಸುಮಾರು 15 ಎಕರೆ ಪ್ರದೇಶದಲ್ಲಿ ಜರ್ಮನ್ ಟೆಂಟ್ಗಳನ್ನು ಹಾಕಲಾಗುತ್ತಿದ್ದು, ಎಲ್ಲರಿಗೂ ನೆರಳಿನಲ್ಲಿ ಕುಳಿತು ಆರಾಮದಿಂದ ಊಟ ಸೇವಿಸುವಂತೆ ವ್ಯವಸ್ಥೆ ಮಾಡಲಾಗುತ್ತಿದೆ. ಸುಮಾರು ಐವತ್ತು ಸಾವಿರ ಜನರಿಗೆ ಭೋಜನ ವ್ಯವಸ್ಥೆಯನ್ನು ಮಾಡಿಸಲಾಗುತ್ತಿದ್ದು, ವಿಐಪಿ ಹಾಗೂ ಸಾಮಾನ್ಯರಿಗಾಗಿ ಎರಡು ಕೌಂಟರ್ಗಳನ್ನು ಮಾಡಲಾಗುತ್ತಿದೆ. ಬೀಗರೂಟಕ್ಕೆ 7 ಟನ್ ಮಟನ್ ಹಾಗೂ 7 ಟನ್ ಚಿಕನ್ ಬಳಸಿ ಬೀಗರೂಟ ತಯಾರು ಮಾಡಲಾಗುತ್ತಿದೆ. ಮೆನುವಿನಲ್ಲಿ ರಾಗಿ ಮುದ್ದೆ, ಬೋಟಿ ಗೊಜ್ಜು, ಮೊಟ್ಟೆ, ಮಟನ್, 2 ತರ ಚಿಕನ್, ಗೀ ರೈಸ್, ಅನ್ನ, ತಿಳಿ ಸಾಂಬಾರ್, ಮಜ್ಜಿಗೆ, ಬಾಳೆಹಣ್ಣು, ಬೀಡಾ ನಂದಿನಿ ಐಸ್ ಕ್ರೀಂ, ವಾಟರ್ ಬಾಟಲ್ಗಳು ಇರಲಿವೆ.
ಇದನ್ನೂ ಓದಿ: Abhishek Ambareesh: ಅಭಿಷೇಕ್ ಅಂಬರೀಶ್ ಮದ್ವೆಯಾದ ಅವಿವಳ ಮೊದಲ ಗಂಡ ಯಾರು? ಡಿವೋರ್ಸ್ ಆಗಿದ್ದು ಯಾವಾಗ?
ಜೂನ್ 5ರಂದು ನಟ ಅಭಿಷೇಕ್ ಅಂಬರೀಶ್ ಮತ್ತು ಅವಿವ ಬಿಡಪ ವಿವಾಹ ನೆರವೇರಿತ್ತು. ಹೀಗಾಗಿ ಬುಧವಾರ ಆರತಕ್ಷತೆ ಹಮ್ಮಿಕೊಳ್ಳಲಾಗಿತ್ತು. ಅದೇ ರೀತಿ ಚಿತ್ರ ರಂಗದ ನಟ, ನಟಿಯರು ಕಾರ್ಯಕ್ರಮಕ್ಕೆ ಆಗಮಿಸಿದ್ದರು. ತೆಲುಗು ಸ್ಟಾರ್ ನಟ ಮೆಗಾಸ್ಟಾರ್ ಚಿರಂಜೀವಿ, ನಟ, ರಾಜಕಾರಣಿ ಶತ್ರುಜ್ಞ ಸಿನ್ಹಾ, ಸ್ಯಾಂಡಲ್‌ವುಡ್ ನಟ ರವಿಚಂದ್ರನ್, ನಟಿ ರಮ್ಯಾ, ತಮಿಳು ನಟ ಪ್ರಭು ಗಣೇಶನ್, ರಾಘವೇಂದ್ರ ರಾಜಕುಮಾರ್, ನಟಿ ಖುಷ್ಬೂ ಸುಂದರ್, ಮೈಸೂರು ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ವಾಗ್ಮಿ ಚಕ್ರವರ್ತಿ ಸೂಲಿಬೆಲೆ ಸೇರಿ ಹಲವರು ಹಾಜರಾಗಿದ್ದರು. ಅದಾದ ಬಳಿಕ ಅದ್ಧೂರಿ ಸಂಗೀತ್ ಪಾರ್ಟಿಯನ್ನು ಸಹ ಅರೇಂಜ್ ಮಾಡಲಾಗಿತ್ತು