Abhishek-Aviva: ಅಭೀಷೇಕ್-ಅವಿವಗೆ ಸಿಕ್ತು ಸ್ಪೆಷಲ್ ಗಿಫ್ಟ್; ಬೀಗರ ಔತಣಕೂಟದ ಸಣ್ಣ ಝಲಕ್! Yashaswi Devadiga 2 ವರ್ಷಗಳು ago ಅಭಿಷೇಕ್ ಅಂಬರೀಷ್ ಮತ್ತು ಅವಿವ ಜೋಡಿಯ (Abhishek-Aviva) ಬೀಗರ ಔತಣಕೂಟ ಭರ್ಜರಿಯಾಗಿ ಏರ್ಪಟ್ಟಿತು. ಅಭೀಷೇಕ್ ಅಂಬರೀಷ್ ಅವರಿಗೆ ಹಾಗೂ ಅವಿವ ಅವರಿಗೆ ವಿಶೇಷವಾದ ಒಂದು ಗಿಫ್ಟ್ ಸಿಕ್ಕಿದೆ. ಅಂಬರೀಷ್ ಅವರ ಪುತ್ರನ ಮದುವೆಯಲ್ಲಿ ಅಭಿಮಾನಿಯೊಬ್ಬರು ಸ್ಪೆಷಲ್ ಆಗಿರುವ ಗಿಫ್ಟ್ ಕೊಟ್ಟಿದ್ದಾರೆ. ಎತ್ತಿನ ಮೇಲೆ ನವಜೋಡಿಯ ಫೋಟೊವನ್ನು ಚಿತ್ರಿಸಲಾಗಿದೆ. ಎತ್ತಿನ ಮುಖದಲ್ಲಿ ಮುಂಭಾಗ ಅಂಬರೀಷ್ ಹಾಗೂ ಸುಮಲತಾ ಅವರ ಫೋಟೊ ಹಾಕಿ ಸುಂದರವಾಗಿ ಅಲಂಕರಿಸಲಾಗಿತ್ತು. ಎತ್ತಿನ ಜತೆ ನಿಂತು ನವಜೋಡಿ ಹಾಗೂ ಸುಮಲತಾ ಪೋಸ್ ಕೊಟ್ಟಿದ್ದಾರೆ. ಅವಿವ ಅವರು ಗೋಲ್ಡನ್ ಕಲರ್ ಬ್ಲೌಸ್ ಹಾಗೂ ಗುಲಾಬಿ ಬಣ್ಣದ ಸುಂದರವಾದ ಸೀರೆ ಉಟ್ಟಿದ್ದರು. ಅಭಿಷೇಕ್ ಅಂಬರೀಷ್ ಅವರು ಬಿಳಿ ಪಂಚೆ ಹಾಗೂ ಶರ್ಟ್ ಧರಿಸಿದ್ದರು. 7 ಟನ್ ಮಟನ್ ಹಾಗೂ 7 ಟನ್ ಚಿಕನ್ ಬಳಸಿ ಬೀಗರೂಟ ತಯಾರು ಮಾಡಲಾಗಿದೆ. ಬೀಗರೂಟದ ಸ್ಥಳದಲ್ಲಿ ಅಂಬಿ ಕುಟುಂಬಸ್ಥರೂ ಆಗಮಿಸಿದ್ದರು. ಜೂನ್ 5ರಂದು ನಟ ಅಭಿಷೇಕ್ ಅಂಬರೀಶ್ ಮತ್ತು ಅವಿವ ಬಿಡಪ ವಿವಾಹ ನೆರವೇರಿತ್ತು. ಹೀಗಾಗಿ ಬುಧವಾರ ಆರತಕ್ಷತೆ ಹಮ್ಮಿಕೊಳ್ಳಲಾಗಿತ್ತು.