Site icon Vistara News

Aishwarya Rai: ಆರಾಧ್ಯಳನ್ನು ಹೊಗಳಿದ ಬೆನ್ನಲ್ಲೆ ಐಶ್ವರ್ಯಾ ರೈ ಮೆಚ್ಚಿದ ನೆಟ್ಟಿಗರು!

Abhishek Bachchan Holds Aishwarya Rai Close, Helps Her Mother In New

ಬೆಂಗಳೂರು: ಐಶ್ವರ್ಯಾ ರೈ ಮತ್ತು ಅಭಿಷೇಕ್ ಬಚ್ಚನ್ ಧೀರೂಬಾಯಿ ಅಂಬಾನಿ ಇಂಟರ್‌ನ್ಯಾಶನಲ್ ಸ್ಕೂಲ್‌ನ ವಾರ್ಷಿಕ ದಿನದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಮಗಳು ಆರಾಧ್ಯ ಅಲ್ಲಿಯ ವಿದ್ಯಾರ್ಥಿನಿ. ಆರಾಧ್ಯ ಕೂಡ ವೇದಿಕೆಯಲ್ಲಿ ಉತ್ತಮ ಪ್ರದರ್ಶನ ನೀಡಿ ಸೈ ಎನಿಸಿಕೊಂಡರು. ಇದರ ಜತೆಗೆ ಐಶ್ವರ್ಯಾ (Aishwarya Rai) ಅವರು ಕೂಡ ಭೇಷ್‌ ಎನಿಸಿಕೊಂಡಿದ್ದಾರೆ. ಐಶ್ವರ್ಯಾ ತನ್ನ ತಾಯಿಯ ಕೈಯನ್ನು ಹಿಡಿದಿ ಕಾರಿನ ಕಡೆಗೆ ನಡೆಯಲು ಸಹಾಯ ಮಾಡುತ್ತಿರುವ ವಿಡಿಯೊಗೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಐಶ್ವರ್ಯಾ ರೈ ಜತೆಗೆ ಅಭಿಷೇಕ್ ಬಚ್ಚನ್ ಕೂಡ ಇದ್ದರು.

ಐಶ್ವರ್ಯಾ ತನ್ನ ತಾಯಿಯ ಕೈಯನ್ನು ಹಿಡಿದಿರುವುದು ಕಂಡುಬಂದರೆ, ಅಭಿಷೇಕ್ ಕೂಡ ಅವರ ಹಿಂದೆ ನಿಂತಿದ್ದರು. ಈವೆಂಟ್‌ಗಾಗಿ, ಐಶ್ವರ್ಯಾ ಕಪ್ಪು ಸಲ್ವಾರ್‌ನಲ್ಲಿ ಕಂಡು ಬಂದರೆ. ಮತ್ತೊಂದೆಡೆ ಅಭಿಷೇಕ್ ನೀಲಿ ಬಣ್ಣದ ಶರ್ಟ್‌ನಲ್ಲಿ ಕಂಡರು. ಮತ್ತೊಂದು ವಿಡಿಯೊದಲ್ಲಿ ದಂಪತಿ ಒಟ್ಟಿಗೆ ಓಂ ಧಂತಿ ಓಂ ಎಂಬ ಹಿಟ್ ಹಾಡಿಗೆ ನೃತ್ಯ ಮಾಡಿದ್ದಾರೆ. ಅಮಿತಾಭ್‌ ಬಚ್ಚನ್, ಶಾರುಖ್ ಖಾನ್, ಸುಹಾನಾ ಖಾನ್ ಮತ್ತು ಕರಣ್ ಜೋಹರ್ ಕೂಡ ವಿಡಿಯೊದಲ್ಲಿ ಕಾಣಿಸಿಕೊಂಡಿದ್ದಾರೆ.

ಅಮಿತಾಭ್ ಬಚ್ಚನ್ ಮನೆಯಿಂದ ಹೊರ ಬಂದ ಐಶ್ವರ್ಯಾ ರೈ?

ಹೊಸ ಸುದ್ದಿಯ ಪ್ರಕಾರ, ಐಶ್ವರ್ಯ ರೈ ಬಚ್ಚನ್ (Aishwarya Rai) ಅವರು ತಮ್ಮ ಅತ್ತೆ-ಮಾವನ ಮನೆಯಿಂದ ಹೊರ ಬಂದಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ. “ಅಭಿಷೇಕ್ (Abhishek Bachchan) ಮತ್ತು ಐಶ್ವರ್ಯ ತಮ್ಮ ಮಗುವಿನ ಸಲುವಾಗಿ ಪ್ರತ್ಯೇಕವಾಗಿ ಒಟ್ಟಿಗೆ ಇರಲಿದ್ದಾರೆ. ಅವರು ಬಹಳ ಸಮಯದಿಂದ ಸಮಸ್ಯೆಗಳನ್ನು ಎದುರಿಸುತ್ತಿದ್ದರು ಮತ್ತು ಈಗ ಎಲ್ಲ ವಿಷಯಗಳು ನಿರ್ಧಾರವಾಗುವ ಹಂತಕ್ಕೆ ಬಂದು ತಲುಪಿವೆ, ” ಎಂದು ಬಚ್ಚನ್ ಕುಟುಂಬದ ಹತ್ತಿರದ ಮೂಲಗಳನ್ನು ಉಲ್ಲೇಖಿಸಿ ಮಾಧ್ಯಮಗಳು ವರದಿ ಮಾಡಿವೆ. ಇದಕ್ಕೂ ಮೊದಲು ಅಮಿತಾಭ್ ಬಚ್ಚನ್ ಅವರು ಐಶ್ವರ್ಯಾ ಅವರ ಇನ್‌ಸ್ಟಾ ಅನ್ ಫಾಲೋ ಮಾಡಿದ ಬೆನ್ನಲ್ಲೇ, ಐಶ್ವರ್ಯಾ ಮತ್ತು ಅಭಿಷೇಕ್ ಡಿವೋರ್ಸ್ ಆಗಲಿದ್ದಾರೆಂಬ ಸುದ್ದಿ ಹರಡಿತ್ತು.

ಇದನ್ನೂ ಓದಿ: Aishwarya Rai: ಅಮ್ಮನನ್ನು ಹೊಗಳಿದ ಆರಾಧ್ಯಾ; ಮಾತು ಕೇಳಿ ಖುಷಿಯಾದ ಐಶ್ವರ್ಯಾ ರೈ!

ಟೈಮ್ಸ್ ನೌ ವರದಿಯ ಪ್ರಕಾರ, ಐಶ್ವರ್ಯಾ ಬಚ್ಚನ್ ನಿವಾಸದಿಂದ ಹೊರಬಂದಿದ್ದಾರೆ. ಅವರು ಈಗ ತಮ್ಮ ಹೆಚ್ಚಿನ ಸಮಯವನ್ನು ತಮ್ಮ ತಾಯಿಯ ಮನೆಯಲ್ಲಿ ಕಳೆಯುತ್ತಾರೆ. ಒಂದೊಮ್ಮೆ ಬಚ್ಚನ್‌ ಅವರ ನಿವಾಸಕ್ಕೆ ಬಂದರೆ, ಅಲ್ಲಿ ಅತ್ತೆ-ಮಾವನಿಂದ ಸಂಪೂರ್ಣವಾಗಿ ದೂರವಾಗಿ ಪ್ರತ್ಯೇಕವಾಗಿ ಗಂಡನ ಜತೆ ವಾಸಿಸುತ್ತಿದ್ದಾರೆ.

Exit mobile version