Site icon Vistara News

Jaya Bachchan birth day: ಅಮ್ಮನ ಅಪ್ಪುಗೆಯ ವಿಶೇಷ ಫೋಟೊ ಹಂಚಿಕೊಂಡು ಶುಭ ಹಾರೈಸಿದ ಪುತ್ರ ಅಭಿಷೇಕ್‌ ಬಚ್ಚನ್‌

Abhishek Bachchan Pens Heartfelt Note For Ma Jaya Bachchan

ಬೆಂಗಳೂರು: ನಟಿ ಮತ್ತು ರಾಜ್ಯಸಭಾ ಸದಸ್ಯೆ ಜಯಾ ಬಚ್ಚನ್ (Jaya Bachchan) ಏಪ್ರಿಲ್ 9 ಜನುಮದಿನದ ಸಂಭ್ರಮ. ಈ ಶುಭ ದಿನದಂದು ಅವರ ಪ್ರೀತಿಪಾತ್ರರು ಥ್ರೋಬ್ಯಾಕ್ ಚಿತ್ರಗಳೊಂದಿಗೆ ಸೋಷಿಯಲ್‌ ಮೀಡಿಯಾ ಮೂಲಕ ಶುಭ ಹಾರೈಸಿದ್ದಾರೆ. ಮೊಮ್ಮಗಳು ನವ್ಯಾ ನವೇಲಿ ಜಯಾ ಅವರ ಹಳೆಯ ಫೋಟೊದೊಂದಿಗೆ ವಿಶೇಷವಾಗಿ ವಿಶ್‌ ಮಾಡಿದ್ದಾರೆ. ಇದೀಗ ಮಗ ಅಭಿಷೇಕ್ ಬಚ್ಚನ್ ಅವರು ಜಯಾ ಬಚ್ಚನ್ ಅವರನ್ನು ತಬ್ಬಿಕೊಂಡ ಫೋಟೊ ಹಂಚಿಕೊಂಡು ವಿಶ್‌ ಮಾಡಿದ್ದಾರೆ.

ಅಭಿಷೇಕ್‌ ಬಚ್ಚನ್‌ ಅಮ್ಮನ ಜತೆ ಇರುವ ಫೋಟೊ ಹಂಚಿಕೊಂಡು ʻʻಉತ್ತಮ ಫೋಟೋ ಅಲ್ಲ, ನನಗೆ ಗೊತ್ತು. ಆದರೆ, ಭಾವನೆ ಸ್ಪಷ್ಟವಾಗಿದೆ!! ಯಾವುದೇ ಮಗುವಿನ ಮೊದಲ ಮತ್ತು ಶಾಶ್ವತ ಪ್ರೀತಿ ಅಂದರೆ ಅದು ಅಮ್ಮ. ಜನ್ಮದಿನದ ಶುಭಾಶಯಗಳು ಅಮ್ಮ. ನಾನು ನಿನ್ನನ್ನು ಪ್ರೀತಿಸುತ್ತೇನೆ. ನಟನಾಗಿ ಇದು ನನ್ನ ಮೊದಲ ಅಧಿಕೃತ ಸಾರ್ವಜನಿಕ ಸಮಾರಂಭದ ಫೋಟೊ. ನನ್ನ ಮೊದಲ ಚಿತ್ರ ರಿಫ್ಯೂಜಿ ಚಿತ್ರದ ಸಂಗೀತ ಬಿಡುಗಡೆ ಸಮಾರಂಭದ ಫೋಟೊʼʼಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: Jaya Bachchan: ನಟಿ ಜಯಾ ಬಚ್ಚನ್ ಜನುಮದಿನಕ್ಕೆ ವಿಶೇಷವಾಗಿ ಶುಭ ಹಾರೈಸಿದ ಮೊಮ್ಮಗಳು!

ಅಭಿಷೇಕ್ ಬಚ್ಚನ್ ಪೋಸ್ಟ್‌

ವಿಶೇಷವಾಗಿ ಶುಭ ಹಾರೈಸಿದ ಮೊಮ್ಮಗಳು!

ನವ್ಯಾ ಅವರು ಅಮಿತಾಭ್‌ ಬಚ್ಚನ್ ಮತ್ತು ಜಯಾ ಬಚ್ಚನ್ ಅವರ ಹಿರಿಯ ಪುತ್ರಿ ಶ್ವೇತಾ ಬಚ್ಚನ್ ಅವರ ಮಗಳು. ಈ ಸಂತೋಷದ ಸಂದರ್ಭದಲ್ಲಿ, ನವ್ಯಾ ಅವರು ಟೋಪಿ, ಸನ್‌ಗ್ಲಾಸ್‌ ಮತ್ತು ಬಿಂದಿಯನ್ನು ಧರಿಸಿರುವ ಜಯಾ ಬಚ್ಚನ್ ಅವರ ಹಳೆಯ ಫೋಟೊವನ್ನು ಹಂಚಿಕೊಂಡಿದ್ದಾರೆ. ಚಿತ್ರದ ಜತೆಗೆ, “ಹುಟ್ಟುಹಬ್ಬದ ಶುಭಾಶಯಗಳು ನಾನಿ. ನೀನು ನಮ್ಮ ಪವರ್‌ ಹೌಸ್‌ʼʼಎಂದು ಬರೆದುಕೊಂಡಿದ್ದಾರೆ.

ಜಯಾ ಬಚ್ಚನ್ ಮುಂದಿನ ಯೋಜನೆಯಲ್ಲಿ ರಣವೀರ್ ಸಿಂಗ್, ಆಲಿಯಾ ಭಟ್, ಶಬಾನಾ ಅಜ್ಮಿ ಮತ್ತು ಧರ್ಮೇಂದ್ರ ಅವರೊಂದಿಗೆ ಕರಣ್ ಜೋಹರ್ ಅವರ ನಿರ್ದೇಶನದ ಪ್ರಾಜೆಕ್ಟ್ ರಾಕ್ ಔರ್ ರಾಣಿ ಕಿ ಪ್ರೇಮ್ ಕಹಾನಿ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

Exit mobile version