ಬೆಂಗಳೂರು:`‘ಖುದಾ ಹಾಫಿಜ್’ ಸಿನಿಮಾ ನಟಿ ಶಿವಲೀಕಾ ಒಬೆರಾಯ್ (Shivaleeka Oberoi) ಮತ್ತು ದೃಶ್ಯಂ-2 ನಿರ್ದೇಶಕ ಅಭಿಷೇಕ್ ಪಾಠಕ್ (Abhishek Pathak) ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಫೆಬ್ರವರಿ 9, ಗುರುವಾರ ಗೋವಾದಲ್ಲಿ ಜೋಡಿ ಹಸೆಮಣೆ ಏರಿದೆ. ವಧು ಮತ್ತು ವರನ ಬಟ್ಟೆಗಳನ್ನು ಮನೀಶ್ ಮಲ್ಹೋತ್ರಾ ಅವರು ಕೆಲವು ವಿಶೇಷ ಕಸ್ಟಮೈಸೇಶನ್‌ಗಳೊಂದಿಗೆ ವಿನ್ಯಾಸಗೊಳಿಸಿದ್ದಾರೆ. ಶಿವಲೀಕಾ ಮತ್ತು ಅಭಿಷೇಕ್ ತಮ್ಮ ಮದುವೆಯ ಫೋಟೊಗಳನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ.
ಅಜಯ್ ದೇವಗನ್, ಅಮನ್ ದೇವಗನ್, ಕಾರ್ತಿಕ್ ಆರ್ಯನ್, ಸನ್ನಿ ಸಿಂಗ್, ಭೂಷಣ್ ಕುಮಾರ್, ನಿರ್ದೇಶಕ ಲವ್ ರಂಜನ್, ಇಶಿತಾ ರಾಜ್ ಶರ್ಮಾ ಮತ್ತು ಇನ್ನೂ ಅನೇಕರು ಮದುವೆಯಲ್ಲಿ ಭಾಗವಹಿಸಿದ್ದರು. ಫೆಬ್ರವರಿ 8 ರಂದು ಪ್ರಿ ವೆಡ್ಡಿಂಗ್ ಕಾರ್ಯಕ್ರಮಗಳು ನಡೆದಿದ್ದವು.
ಇದನ್ನೂ ಓದಿ: Sidharth Kiara Wedding: ವೈವಾಹಿಕ ಜೀವನಕ್ಕೆ ಕಾಲಿಟ್ಟ ಸಿದ್ಧಾರ್ಥ್ ಮಲ್ಹೋತ್ರಾ- ಕಿಯಾರಾ ಆಡ್ವಾಣಿ
ʻʻ9ನೇ ಫೆಬ್ರವರಿ 2023 ರ ಸಂಜೆ, ನಮ್ಮ ಪ್ರೀತಿಪಾತ್ರರ ಮುಂದೆ ನಾವು ಮದುವೆಯಾದೆವು. ನಮ್ಮ ಜೀವನದ ಅತ್ಯಮೂಲ್ಯ ಕ್ಷಣವಾಗಿದೆ. ನಿಮ್ಮ ಪ್ರೀತಿ ಮತ್ತು ಆಶೀರ್ವಾದ ನಮ್ಮ ಮೇಲೆ ಇರಲಿʼʼಎಂದು ಬರೆದುಕೊಂಡಿದ್ದಾರೆ.
ಇದನ್ನೂ ಓದಿ: Masaba Gupta: ವೈವಾಹಿಕ ಜೀವನಕ್ಕೆ ಕಾಲಿಟ್ಟ ನೀನಾ ಗುಪ್ತಾ ಪುತ್ರಿ ಮಸಾಬಾ ಗುಪ್ತಾ, ವರ ಯಾರು?
2022ರಲ್ಲಿ ಅಭಿಷೇಕ್ ಪಾಠಕ್ ನಿರ್ದೇಶನದ ದೃಶ್ಯಂ-2 ಸಿನಿಮಾ ಯಶಸ್ವಿ ಪ್ರದರ್ಶನ ಕಂಡಿತು. ಇದರಲ್ಲಿ ಅಜಯ್ ದೇವಗನ್, ಶ್ರಿಯಾ ಸರನ್, ಟಬು, ಅಕ್ಷಯ್ ಖನ್ನಾ ಮತ್ತು ಇಶಿತಾ ದತ್ತಾ ಕಾಣಿಸಿಕೊಂಡಿದ್ದರು. ಈ ಚಿತ್ರವು ನಿಶಿಕಾಂತ್ ಕಾಮತ್ ಅವರ 2015ರ ಚಿತ್ರ, ದೃಶ್ಯಂ-1ರ ಮುಂದುವರಿದ ಭಾಗವಾಗಿದೆ. ಮತ್ತೊಂದೆಡೆ, ಶಿವಲೀಕಾ ಒಬೆರಾಯ್ ‘ಖುದಾ ಹಾಫಿಜ್’ ಸಿನಿಮಾದ ಎರಡು ಕಂತುಗಳಲ್ಲಿ ನಾಯಕಿಯಾಗಿ ಕಾಣಿಸಿಕೊಂಡಿದ್ದರು. ಅಭಿಷೇಕ್ ಪಾಠಕ್ ಖುದಾ ಹಾಫಿಜ್ ಚಿತ್ರಕ್ಕೆ ನಿರ್ಮಾಪಕರಾಗಿದ್ದರು, ಈ ವೇಳೆ ಇಬ್ಬರ ನಡುವೆ ಆತ್ಮೀಯತೆ ಬೆಳೆದಿತ್ತು ಎನ್ನಲಾಗಿದೆ.