ಬೆಂಗಳೂರು: ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ (Dhruva Sarja) ದಂಪತಿ ಮತ್ತೆ ಸುದ್ದಿಯಲ್ಲಿದ್ದಾರೆ. ಇತ್ತೀಚೆಗಷ್ಟೇ ಧ್ರುವ ಪತ್ನಿ ಪ್ರೇರಣಾರ ಬೇಬಿ ಬಂಪ್ ಫೋಟೋ-ವಿಡಿಯೊಗಳು ವೈರಲ್ ಆಗಿತ್ತು. ಈಗ ಸೀಮಂತದ ವಿಡಿಯೊವನ್ನು ಧ್ರುವ ಸರ್ಜಾ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದು, ಸಖತ್ ವೈರಲ್ ಆಗಿದೆ.
ಆಪ್ತರು ಹಾಗೂ ಕುಟುಂಬದವರ ಸಮ್ಮುಖದಲ್ಲಿ ಸೀಮಂತ ಕಾರ್ಯಕ್ರಮ ನಡೆದಿತ್ತು. ಇದರ ಸುಂದರ ಕ್ಷಣಗಳುಳ್ಳ, ಮನೆ ಮಂದಿಯ ಸಂಭ್ರಮ ಇರುವ ವಿಡಿಯೊವನ್ನು ಧ್ರುವ ಹಂಚಿಕೊಂಡಿದ್ದು, ಅಭಿಮಾನಿಗಳು ಸಹ ಕಮೆಂಟ್ ಮೂಲಕ ಶುಭ ಹಾರೈಸಿದ್ದಾರೆ.
ಈ ಹಿಂದೆ ಬೇಬಿ ಬಂಪ್ ಪೋಟೋವನ್ನು ಹಂಚಿಕೊಡಿದ್ದ ಧ್ರುವ, ‘ನಾವು ಜೀವನದ ಹೊಸ ಹಂತಕ್ಕೆ ಏರುತ್ತಿದ್ದೇವೆ. ಅದೊಂದು ದೈವತ್ವದ ಹಂತ. ಶೀಘ್ರದಲ್ಲೇ ಬರುತ್ತಿರುವ ಮಗುವಿಗೆ ನಿಮ್ಮೆಲ್ಲರ ಆಶೀರ್ವಾದ ಇರಲಿ, ಜೈ ಹನುಮಾನ್’ ಎಂದು ಅಡಿಬರಹದ ಮೂಲಕ ಗಮನ ಸೆಳೆದಿದ್ದರು.
ಇದನ್ನೂ ಓದಿ | Dhruva Sarja : ಜಿಮ್ನಲ್ಲಿ ಧ್ರುವ ಸರ್ಜಾ ವರ್ಕೌಟ್
ಧ್ರುವ ಸರ್ಜಾ ಮತ್ತು ಪ್ರೇರಣಾ ವಿವಾಹ 2019ರ ನವೆಂಬರ್ನಲ್ಲಿ ನಡೆದಿತ್ತು. ಬಾಲ್ಯದಿಂದಲೂ ಸ್ನೇಹಿತರಾಗಿದ್ದ ಇವರು, ಪ್ರೀತಿಸಿ ವಿವಾಹವಾಗಿದ್ದಾರೆ. ಪ್ರೇರಣಾ ಬೆಂಗಳೂರಿನ ಕಾಲೇಜೊಂದರಲ್ಲಿ ಅಧ್ಯಾಪಕಿ. ಇವರಿಬ್ಬರ ಮದುವೆಯಾಗಿ ಎರಡು ವರ್ಷ ಕಳೆದಿದ್ದು, ಈಗ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಇದೇ ಸೆಪ್ಟೆಂಬರ್ ತಿಂಗಳಲ್ಲೇ ಪ್ರೇರಣಾಗೆ ಹೆರಿಗೆಯಾಗಲಿದೆ ಎಂದು ಹೇಳಲಾಗಿದೆ.
ಅತ್ತಿಗೆ ಮೇಘನಾ ರಾಜ್ ವಿಶ್
ಧ್ರುವ ಸರ್ಜಾ ನನ್ನ ತಮ್ಮನಿದ್ದಂತೆ ಎಂದು ಮೇಘನಾ ರಾಜ್ ಸರ್ಜಾ ಯಾವಾಗಲೂ ಹೇಳುತ್ತಿರುತ್ತಾರೆ. ಇದೀಗ ಮೈದುನ ಕೊಟ್ಟ ಖುಷಿಯ ಸುದ್ದಿಗೆ ಅವರೂ ಕಮೆಂಟ್ ಮಾಡಿ ಸಂತಸ ವ್ಯಕ್ತಪಡಿಸಿದ್ದಾರೆ. ‘ಮನಸಿಗೆ ತುಂಬ ಹಿತ ಎನ್ನಿಸುವ ಸುದ್ದಿ ಕೊಟ್ಟಿದ್ದೀರಿ. ನಿಮ್ಮನ್ನು ದೇವರು ಆಶೀರ್ವದಿಸಲಿ. ಬರಲಿರುವ ಪುಟ್ಟ ಮಗುವಿನ ಮೇಲೆ ನನಗೀಗಲೇ ಪ್ರೀತಿ ಶುರುವಾಗಿದೆ’ ಎಂದು ಬರೆದುಕೊಂಡಿದ್ದಾರೆ.
ಇದನ್ನೂ ಓದಿ | Video: ಅಪ್ಪನಾಗ್ತಿದ್ದಾರೆ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ; ಪತ್ನಿ ಪ್ರೇರಣಾರ ಬೇಬಿ ಬಂಪ್ ವಿಡಿಯೋ ಹಂಚಿಕೊಂಡ ನಟ