Site icon Vistara News

Raghu Ramappa : ವೈವಾಹಿಕ ಜೀವನಕ್ಕೆ ಕಾಲಿಟ್ಟ ಪ್ಯಾಟೆ ಮಂದಿ ಕಾಡಿಗ್ ಬಂದ್ರು ಖ್ಯಾತಿಯ ರಘು ರಾಮಪ್ಪ

Actor raghu ramappa wedding

ಬೆಂಗಳೂರು: ‘ಪ್ಯಾಟೆ ಮಂದಿ ಕಾಡಿಗ್ ಬಂದ್ರು’ (Pyate Mandhi Kadig Bandru) ರಿಯಾಲಿಟಿ ಶೋ ಮೂಲಕ ಖ್ಯಾತಿ ಪಡೆದ ರಘು ರಾಮಪ್ಪ (Raghu Ramappa) ಅವರು ಮೇ 12ರಂದು ವೈವಾಹಿಕ (Wedding) ಜೀವನಕ್ಕೆ ಕಾಲಿಟ್ಟಿದ್ದಾರೆ. ಮಸಲ್‌ ಮೇನಿಯಾ ಇಂಡಿಯಾ ಲೈಟ್‌ವೇಟ್ ಚಾಂಪಿಯನ್‌ಶಿಪ್‌ನ ಮಾಜಿ ವಿಜೇತ, ನಟ, ಬಾಡಿಬಿಲ್ಡರ್ ಮತ್ತು ಫಿಟ್‌ನೆಸ್ ಸಲಹೆಗಾರ ಕೂಡ ಆಗಿದ್ದರು.

ಇದೀಗ ಗುರುಹಿರಿಯರ ಸಮ್ಮುಖದಲ್ಲಿ ಸರಳವಾಗಿ ಮದುವೆಯಾಗಿದ್ದಾರೆ. ಬಹುಕಾಲದ ಗೆಳತಿ ಅಶ್ವಿನಿ ಜತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಕುಟುಂಬಸ್ಥರು, ಆಪ್ತರು ಸಮ್ಮುಖದಲ್ಲಿ ರಘು ರಾಮಪ್ಪ ಮದುವೆಯಾಗಿದ್ದಾರೆ. ರಘು ಮದುವೆ ಸಂಭ್ರಮದಲ್ಲಿ ‘ಗಾಳಿಪಟ’ ನಟಿ ನೀತು, ನಟ ಜಗ್ಗೇಶ್ ದಂಪತಿ ಸೇರಿದಂತೆ ಹಲವರು ಭಾಗಿಯಾಗಿದ್ದಾರೆ. ರಘು ರಾಮಪ್ಪ ಅವರು ಫಿಟ್‌ನೆಸ್ ಪ್ರಿಯರಾಗಿದ್ದಾರೆ. ಕೆಲವು ಸಿನಿಮಾಗಳಿಗೂ ಬಣ್ಣ ಹಚ್ಚಿದ್ದಾರೆ.

ರಘು ರಾಮಪ್ಪ ಪೋಸ್ಟ್‌

ಇದನ್ನೂ ಓದಿ: Astrology Answers : ವೈವಾಹಿಕ ಜೀವನದಲ್ಲಿ ನೆಮ್ಮದಿ ಇಲ್ಲ ಗುರೂಜಿ, ದಾರಿ ತೋರಿಸಿ

ಜಸ್ಟ್ ಪಾಸ್ (2010) ಮತ್ತು ಶತಾಯಗತಾಯ (2018) ಹೀಗೆ ಹಲವು ಸಿನಿಮಾಗಳಲ್ಲಿ ಬಣ್ಣ ಹಚ್ಚಿದ್ದಾರೆ. ರಘು ರಾಮಪ್ಪರವರು ರಾಷ್ಟ್ರಮಟ್ಟದ ಹಲವು ಬಾಡಿ ಬಿಲ್ಡಿಂಗ್ ಸ್ಪರ್ದೆಗಳಲ್ಲಿ ಗೆದ್ದು ರಾಷ್ಟ್ರಮಟ್ಟದ ಕಿರೀಟವನ್ನು ನಮ್ಮ ಮುಡಿಗೇರಿಸಿಕೊಂಡಿದ್ದಾರೆ. ಟಿವಿ ಶೋಗಳು, ಎರಡು ಚಿಲನಚಿತ್ರ, ಬಾಡಿಬಿಲ್ಡಿಂಗ್ ಜತೆಗೆ ವ್ಯಂಗ್ಯಚಿತ್ರಕಾರ ಕೂಡ ಆಗಿದ್ದಾರೆ ರಘು ರಾಮಪ್ಪ.

Exit mobile version