Site icon Vistara News

Actor Adivi Sesh | ಪೂಜಾ ಹೆಗ್ಡೆ ಜತೆ ಕಿಸ್‌ ಮಾಡಲ್ಲ: ನಟ ಅಡವಿ ಶೇಷ್‌!

Actor Adivi Sesh

ಬೆಂಗಳೂರು : ʻಮೇಜರ್‌ʼ ಸಿನಿಮಾ ಮೂಲಕ ಖ್ಯಾತಿ ಪಡೆದಿರುವ ಅಡವಿ ಶೇಷ್‌ (Actor Adivi Sesh) ಅವರು ನಂದಮೂರಿ ಬಾಲಕೃಷ್ಣ ನಡೆಸಿಕೊಡುತ್ತಿರುವ ʻಅನ್‌ಸ್ಟಾಪೆಬಲ್‌ʼ ಶೋನಲ್ಲಿ ನಟಿ ಪೂಜಾ ಹೆಗ್ಡೆ ಕುರಿತು ವಿವಾದಾತ್ಮಕ ಹೇಳಿಕೆಯೊಂದನ್ನು ನೀಡಿದ್ದಾರೆ. ಕಾರ್ಯಕ್ರಮದಲ್ಲಿ ಅಡವಿ ಶೇಷ್‌ ಮತ್ತು ʻಒಕೆ ಒಕ ಜೀವಿತಂ’ ಖ್ಯಾತಿಯ ಶರ್ವಾನಂದ್‌ ಭಾಗಿ ಆಗಿದ್ದಾರೆ. ನಿರೂಪಕರು ʻಕಿಸ್‌ ಮಾಡಲು ಯಾವ ನಟಿ ಜತೆ ಹಿಂಜರಿಯುತ್ತೀರಿʼ ಎಂದು ಅಡವಿ ಶೇಷ್‌ ಅವರಿಗೆ ಪ್ರಶ್ನೆ ಕೇಳಿದ್ದಾರೆ. ಪೂಜಾ ಹೆಗ್ಡೆ ಎಂದು ಅಡವಿ ಶೇಷ್‌ ತಕ್ಷಣವೇ ಉತ್ತರಿಸಿದ್ದಾರೆ. ವಿಡಿಯೊ ನೋಡಿ ನೆಟ್ಟಿಗರು ಗರಂ ಆಗಿದ್ದು, ಕಮೆಂಟ್‌ ಮೂಲಕ ಅಡಿವಿ ಶೇಷ್‌ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ.

ಮೇಜರ್‌ ಸಿನಿಮಾಗೆ ನಟಿ ಪೂಜಾ ಹೆಗ್ಡೆ ನಾಯಕಿಯಾಗಿ ನಟಿಸಬೇಕಿತ್ತು. ಅನಂತರ ಪೂಜಾ ಹೆಗ್ಡೆ ಸಿನಿಮಾದಿಂದ ಆಚೆ ಬಂದರು. ನಟಿ 2 ಕೋಟಿ ರೂ. ಸಂಭಾವನೆ ಕೇಳಿದ್ದರು ಎಂದು ಸುದ್ದಿ ಹರಿದಾಡಿತ್ತು. ಸಂಭಾವನೆ ಕಾರಣದಿಂದ ಪೂಜಾ ಹೆಗ್ಡೆ ಸಿನಿಮಾ ಮಾಡಿಲ್ಲ ಎಂದು ಗಾಸಿಪ್‌ಗಳು ಹರಿದಾಡಿದ್ದವು.

ಇದನ್ನೂ ಓದಿ | Kantara Movie | ಕಾಂತಾರ ಸಿನಿಮಾ ನೋಡಿ ಥ್ರಿಲ್‌ ಆದ ಪೂಜಾ ಹೆಗ್ಡೆ, ಆಕೆ ಹೇಳಿದ್ದೇನು?

ವರದಿ ಪ್ರಕಾರ ಅಡವಿ ಶೇಷ್‌ ಅವರ ಜತೆ ಪೂಜಾ ಹೆಗ್ಡೆ ನಟಿಸಲು ಇಷ್ಟವಿಲ್ಲದ ಕಾರಣ ಸಿನಿಮಾದಿಂದ ಆಚೆ ಬಂದಿದ್ದಾರೆ ಎನ್ನಲಾಗುತ್ತಿದೆ. ಈ ಕಾರಣಕ್ಕಾಗಿಯೇ ಅಡವಿ ಶೇಷ್‌ ಟಾಕ್ ಶೋ ನಲ್ಲಿ ಪೂಜಾ ಹೆಗ್ಡೆ ವಿರುದ್ಧ ಸೇಡು ತೀರಿಸಿಕೊಂಡಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಈ ಬಗ್ಗೆ ಸೋಷಿಯಲ್‌ ಮೀಡಿಯಾದಲ್ಲಿ ಭಾರಿ ಚರ್ಚೆಗಳು ಆಗುತ್ತಿದ್ದು, ಅಡವಿ ಶೇಷ್‌ ಅವರಿಗೆ ʻʻನೀವು ಹೀರೋನಾ?ʼʼಎಂದು ನೆಟ್ಟಿಗರು ಪ್ರಶ್ನಿಸಿದ್ದಾರೆ. ನಂದಮೂರಿ ಬಾಲಕೃಷ್ಣ ನಡೆಸಿಕೊಡುತ್ತಿರುವ ಅನ್‌ಸ್ಪಾಪೆಬಲ್‌ ಶೋ ತೆಲುಗು ಒಟಿಟಿ ‘ಆಹಾ’ದಲ್ಲಿ ಪ್ರಸಾರವಾಗುತ್ತಿದೆ.

ಇದನ್ನೂ ಓದಿ | Kabza Movie | ರಿಯಲ್‌ ಸ್ಟಾರ್‌ ಉಪೇಂದ್ರ ನಟನೆಯ ಕಬ್ಜ ಚಿತ್ರದ ರಿಲೀಸ್‌ ಡೇಟ್‌ಗಾಗಿ ಹೆಚ್ಚಾಗಿದೆ ಕಾತರ!

Exit mobile version