Site icon Vistara News

Actor Akshay Kumar : ಅಮ್ಮನನ್ನು ನೆನೆದು ಕಣ್ಣೀರಿಟ್ಟ ನಟ ಅಕ್ಷಯ್ ಕುಮಾರ್

#image_title

ಮುಂಬೈ: ಬಾಲಿವುಡ್ ನಟ ಅಕ್ಷಯ್ ಕುಮಾರ್ (Actor Akshay Kumar) ಅವರ ‘ಸೆಲ್ಫಿ’ ಸಿನಿಮಾ ಇಂದು ಬಿಡುಗಡೆಯಾಗಿದೆ. ಕಳೆದ ಕೆಲ ತಿಂಗಳುಗಳಿಂದ ಹಿಟ್ ಸಿನಿಮಾ ನೀಡಲಾಗದೆ ಒದ್ದಾಡಿರುವ ಅಕ್ಷಯ್ ಅವರಿಗೆ ಈ ಸಿನಿಮಾದ ಯಶಸ್ಸು ಒಂದು ರೀತಿಯಲ್ಲಿ ಅತ್ಯವಶ್ಯಕ ಎಂದೇ ಹೇಳಬಹುದು. ಈ ನಡುವೆ ಖಾಸಗಿ ವಾಹಿನಿಯೊಂದರ ಜತೆ ಸಂದರ್ಶನದಲ್ಲಿ ಮಾತನಾಡಿರುವ ಅಕ್ಷಯ್ ತಮ್ಮ ತಾಯಿಯನ್ನು ನೆನೆದು ಕಣ್ಣೀರಿಟ್ಟಿದ್ದಾರೆ.

ಇದನ್ನೂ ಓದಿ: Selfiee Twitter Review: ಅಕ್ಷಯ್ ಕುಮಾರ್, ಇಮ್ರಾನ್ ಹಶ್ಮಿ ಅಭಿನಯದ ʻಸೆಲ್ಫಿʼ ಸಿನಿಮಾಗೆ ಮಿಶ್ರ ಪ್ರತಿಕ್ರಿಯೆ: ಇಲ್ಲಿದೆ ಟ್ವೀಟರ್‌ ವಿಮರ್ಶೆ
ಆಜ್ ತಕ್ ವಾಹಿನಿಯು ಇತ್ತೀಚೆಗೆ ಅಕ್ಷಯ್ ಅವರ ಸಂದರ್ಶನ ನಡೆಸಿದೆ. ಅದರಲ್ಲಿ ಮಾತನಾಡಿರುವ ನಟ ತಮ್ಮ ತಾಯಿಯ ನೆನಪನ್ನು ಮಾಡಿಕೊಂಡಿದ್ದಾರೆ. ಶೂಟಿಂಗ್ ಮುಗಿಸಿದ ತಕ್ಷಣ ನಾನು ಮನೆಗೆ ತೆರಳಿ, ಅಮ್ಮನ ಕೋಣೆಗೆ ಹೋಗುತ್ತಿದ್ದೆ. ಜೀವನದಲ್ಲಿ ಏನೇ ಸಮಸ್ಯೆ ಇದ್ದರೂ ಅಮ್ಮ ನನಗೆ ಸಮಾಧಾನ ಮಾಡುತ್ತಿದ್ದರು. “ಯೋಚಿಸಬೇಡ ಮಗನೇ, ದೇವರು ನಿನ್ನ ಜತೆ ಇದ್ದಾನೆ” ಎನ್ನುತ್ತಿದ್ದರು. ಆ ನೆನಪೂ ಎಂದೆಂದಿಗೂ ನನ್ನೊಂದಿಗೆ ಇರುತ್ತದೆ ಎಂದು ಹೇಳಿರುವ ಅಕ್ಷಯ್ ಕಣ್ಣೀರು ಸುರಿಸಿದ್ದಾರೆ.

ಅಕ್ಷಯ್ ಅವರ ತಾಯಿ ಅರುಣಾ ಭಾಟಿಯಾ ಅವರು 2021ರ ಸೆಪ್ಟೆಂಬರ್ 8ರಂದು ನಿಧನರಾಗಿದ್ದಾರೆ.
ಅಕ್ಷಯ್ ಕುಮಾರ್ ಅವರ ಸೆಲ್ಫಿ ಸಿನಿಮಾದಲ್ಲಿ ನಟ ಇಮ್ರಾನ್ ಹಶ್ಮಿ ಕೂಡ ನಟಿಸಿದ್ದಾರೆ. ಈ ಚಿತ್ರವು ಮಲಯಾಳಂನ ಡ್ರೈವಿಂಗ್ ಲೈಸೆನ್ಸ್ ಚಿತ್ರದ ರಿಮೇಕ್ ಆಗಿದೆ. ಇದನ್ನು ರಾಜ್ ಮೆಹ್ತಾ ನಿರ್ದೇಶಿಸಿದ್ದಾರೆ.

Exit mobile version