ಮುಂಬೈ: ಬಾಲಿವುಡ್ ನಟ ಅಕ್ಷಯ್ ಕುಮಾರ್ (Actor Akshay Kumar) ಸಿನಿಮಾಗಳ ಮೂಲಕ ಜನರಿಗೆ ಹತ್ತಿರವಾದವರು. ಆದರೆ ಅವರ ಬಗ್ಗೆ ಈಗಲೂ ಕೆಲವರಿಗೆ ಅಸಮಾಧಾನವಿದೆ. ಭಾರತದ ನೆಲದಲ್ಲಿ ಬೆಳೆದಿರುವ ಅವರು ಭಾರತದ ಪೌರತ್ವ ಪಡೆಯದೆ ಕೆನಡಾದ ಪ್ರಜೆಯಾಗಿದ್ದಾರೆ ಎಂದು ಅಸಮಾಧಾನವನ್ನು ಆಗಾಗ ಹೊರಹಾಕುತ್ತಿರುತ್ತಾರೆ. ಇದೀಗ ಇದೇ ವಿಚಾರದಲ್ಲಿ ಅಕ್ಷಯ್ ಅವರು ಮಾತನಾಡಿದ್ದಾರೆ.
ಇದನ್ನೂ ಓದಿ: Viral Video: ಹಿಜಾಬ್ ಧರಿಸಿಲ್ಲ ಎನ್ನುವ ಕಾರಣಕ್ಕೆ ಬಾಲಕಿಗೆ ರಕ್ತ ಬರುವಂತೆ ಹೊಡೆದ ಮಹಿಳೆ! ವೈರಲ್ ಆಯ್ತು ವಿಡಿಯೊ
ಖಾಸಗಿ ಮಾಧ್ಯಮವೊಂದರ ಸಂದರ್ಶನದಲ್ಲಿ ಮಾತನಾಡಿರುವ ಅಕ್ಷಯ್ ಕುಮಾರ್, “ನನಗೆ ಭಾರತವೇ ಎಲ್ಲವೂ. ಇದೇ ಭೂಮಿ ನನ್ನನ್ನು ರೂಪಿಸಿದೆ. ಈ ಭೂಮಿಗೆ ವಾಪಸಾಗಿ ಏನಾದರೂ ಮಾಡಲು ಸಾಧ್ಯವಾಗುತ್ತಿರುವುದು ನನ್ನ ಅದೃಷ್ಟ. ಆದರೆ ನನ್ನ ಬಗ್ಗೆ ಜನರು ಋಣಾತ್ಮಕವಾಗಿ ಮಾತನಾಡಿದಾಗ ನೋವಾಗುತ್ತದೆ” ಎಂದಿದ್ದಾರೆ.
ಹಾಗೆಯೇ, “90ರ ದಶಕದ ಅಂತ್ಯ ಮತ್ತು 20ರ ದಶಕದ ಆರಂಭದ ಕಾಲವದು. ನನ್ನ ಸುಮಾರು 15 ಸಿನಿಮಾಗಳು ಫೇಲ್ ಆದವು. ಆಗ ಕೆನಡಾದಲ್ಲಿದ್ದ ನನ್ನ ಸ್ನೇಹಿತ ಇಲ್ಲಿಗೆ ಬಂದು ದುಡಿಮೆ ಮಾಡು ಎಂದು ಸಲಹೆ ನೀಡಿದ. ಅದರಂತೆ ನಾನು ಅಲ್ಲಿ ತೆರಳಿ ಅಲ್ಲಿನ ಪೌರತ್ವ ಪಡೆದೆ. ಆಗ ನನ್ನ ಎರಡು ಸಿನಿಮಾಗಳು ಬಿಡುಗಡೆಗೆ ಬಾಕಿಯಿದ್ದವು. ನನ್ನ ಅದೃಷ್ಟಕ್ಕೆ ಅವೆರೆಡೂ ಸಿನಿಮಾಗಳು ಹಿಟ್ ಆದವು. ಆ ನಂತರ ಮತ್ತೆ ಇಲ್ಲಿಗೆ ಬಂದು ಸಿನಿಮಾಗಳಲ್ಲಿ ಕೆಲಸ ಮಾಡಲು ಆರಂಭಿಸಿದೆ. ಕೆನಡಾದ ಪ್ರಜೆ ನಾನು ಎನ್ನುವುದೂ ನನಗೆ ಮರೆತೇ ಹೋಗಿತ್ತು. ಈಗ ನಾನು ಭಾರತದ ನಾಗರಿಕತೆ ಪಡೆಯಲು ಯತ್ನಿಸುತ್ತಿದ್ದೇನೆ” ಎಂದು ಅವರು ತಿಳಿಸಿದ್ದಾರೆ.