ವಾಷಿಂಗ್ಟನ್: ಬಾಲಿವುಡ್ ನಟ ಅಕ್ಷಯ್ ಕುಮಾರ್ (Actor Akshay Kumar) ಸದ್ಯ ಅಮೆರಿಕದಲ್ಲಿ ಮನೋರಂಜನಾ ಪ್ರವಾಸ ಮಾಡುತ್ತಿದ್ದಾರೆ. ನಟಿ ನೋರಾ ಫತೇಹಿ ಕೂಡ ಅವರೊಂದಿಗೆ ಪ್ರವಾಸದಲ್ಲಿದ್ದು, ಈ ಜೋಡಿ ಅಟ್ಲಾಂಟಾದಲ್ಲಿ ಮೊದಲ ನೃತ್ಯ ಪ್ರದರ್ಶನ ನೀಡಿದೆ. ಈ ಪ್ರದರ್ಶನದ ವಿಡಿಯೊ ಒಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಇದನ್ನೂ ಓದಿ: Akshay Kumar: ಈ ಸೋಲುಗಳು ನನಗೆ ಹೊಸದಲ್ಲ: ಬದಲಾಯಿಸಿಕೊಳ್ಳುವ ಸಮಯ ಎಂದ ಅಕ್ಷಯ್ ಕುಮಾರ್
ಅಕ್ಷಯ್ ಕುಮಾರ್ ಹಾಗೂ ನೋರಾ ಫತೇಹಿ, ಅಕ್ಷಯ್ ಅವರ ಹೊಸ ಸಿನಿಮಾವಾದ ʼಸೆಲ್ಫೀʼಯ ಹಾಡಾಗಿರುವ ʼಮೇ ಕಿಲಾಡಿʼ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಅದರಲ್ಲಿ ಅಕ್ಷಯ್ ಮೊದಲಿಗೆ ಕೆಂಪು ಬಣ್ಣದ ಲೆಹೆಂಗಾ ಸ್ಕರ್ಟ್ ತೊಟ್ಟಿರುತ್ತಾರೆ. ಅದರ ಮೇಲೆ ಕಪ್ಪು ಬಣ್ಣದ ಕೋಟ್ ಹಾಕಿರುತ್ತಾರೆ. ನೋರಾ ಫತೇಹಿ ವೇದಿಕೆ ಮೇಲೆ ಬಂದು ಒಂದೆರೆಡು ಸ್ಟೆಪ್ ಹಾಕುತ್ತಿದ್ದಂತೆಯೇ ಅಕ್ಷಯ್ ಸ್ಕರ್ಟ್ ಬಿಚ್ಚುತ್ತಾರೆ. ಕಪ್ಪು ಕೋಟ್ ಮತ್ತು ಕಪ್ಪು ಪ್ಯಾಂಟ್ ಧರಿಸಿದ್ದ ಅವರು ನೋರಾರೊಂದಿಗೆ ಹೆಜ್ಜೆ ಹಾಕಲಾರಂಭಿಸುತ್ತಾರೆ.
ಈ ವಿಡಿಯೊವನ್ನು ಬಾಲಿವುಡ್ ಮಾಧ್ಯಮಗಳು ತಮ್ಮ ಸಾಮಾಜಿಕ ಜಾಲತಾಣಗಳ ಖಾತೆಗಳಲ್ಲಿ ಹಂಚಿಕೊಂಡಿದ್ದಾರೆ. ವಿಡಿಯೊ ಎಲ್ಲೆಡೆ ಹರಿದಾಡಿದ್ದು, ಭಾರೀ ವೈರಲ್ ಆಗಿದೆ.
ಅಕ್ಷಯ್ ಅವರ ಜತೆ ಮೌನಿ ರಾಯ್, ಸೋನಂ ಬಜ್ವಾ, ದಿಶಾ ಪಟ್ನಿ ಮತ್ತು ಅಪರ್ಶಕ್ತಿ ಕುರಾನಾ ಕೂಡ ಅಮೆರಿಕ ಪ್ರವಾಸ ಮಾಡುತ್ತಿದ್ದಾರೆ. ಇವರೆಲ್ಲರೂ ಅಕ್ಷಯ್ ಅವರೊಂದಿಗೆ ಗಾಯತ್ರಿ ಮಂತ್ರ ಪಠಿಸಿ, ಅಮೆರಿಕ ಪ್ರವಾಸ ಆರಂಭಿಸಿದ ವಿಡಿಯೊವನ್ನು ಇತ್ತೀಚೆಗೆ ಅಕ್ಷಯ್ ಅವರು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದರು. ಅದೂ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.