Site icon Vistara News

Actor Allu Arjun : ಪುಷ್ಪಾ 2 ಸಿನಿಮಾಗೆ ಅಲ್ಲು ಅರ್ಜುನ್‌ ಕೇಳಿದ್ದು 100 ಕೋಟಿ ರೂ.ಗೆ ಹೆಚ್ಚು!

#image_title

ಹೈದರಾಬಾದ್‌: ದಕ್ಷಿಣ ಭಾರತದ ಸಿನಿಮಾಗಳು ಪ್ಯಾನ್‌ ಇಂಡಿಯಾ ಸಿನಿಮಾಗಳಾಗಿ ಮಿಂಚುತ್ತಿವೆ. ಆ ರೀತಿ ಮಿಂಚಿರುವುದರಲ್ಲಿ ಅಲ್ಲು ಅರ್ಜುನ್‌ (Actor Allu Arjun) ನಟನೆಯ ಪುಷ್ಪಾ ಸಿನಿಮಾ ಕೂಡ ಒಂದು. ಆ ಸಿನಿಮಾದ ಯಶಸ್ಸಿನ ಬೆನ್ನಲ್ಲೇ ಸಿನಿಮಾ ತಂಡ ʼಪುಷ್ಪಾ 2ʼ ಸಿನಿಮಾ ಚಿತ್ರೀಕರಣವನ್ನು ಆರಂಭಿಸಿಕೊಂಡಿದೆ. ಅಂದ ಹಾಗೆ ಈ ಸಿನಿಮಾದಲ್ಲಿ ನಟಿಸುವುದಕ್ಕೆ ಅಲ್ಲು ಅವರು ಕೇಳಿದ ಮೊತ್ತ ಕೇಳಿದರೆ ನೀವೂ ಗಾಬರಿಯಾಗಿಬಿಡುತ್ತೀರಿ.

ಇದನ್ನೂ ಓದಿ: Actress Samantha: ಪುಷ್ಪಾ 2 ಸಿನಿಮಾದಲ್ಲಿ ಸಮಂತಾ ನಟಿಸಲ್ಲ ಎನ್ನುವರಿಗೆ ಚಿತ್ರತಂಡ ನೀಡಿದ ಸ್ಪಷ್ಟನೆ ಏನು?
ಇತ್ತೀಚೆಗೆ ಅಲ್ಲು ಅರ್ಜುನ್‌ ಅವರ ನಟನೆಯ ಎಲ್ಲ ಸಿನಿಮಾಗಳು ಹಿಟ್‌ ಲಿಸ್ಟ್‌ ಸೇರುತ್ತಿರುವ ಹಿನ್ನೆಲೆ ನಟ ತನ್ನ ಸಂಭಾವನೆಯನ್ನು ಭಾರೀ ಪ್ರಮಾಣದಲ್ಲಿ ಹೆಚ್ಚಿಸಿಕೊಂಡಿದ್ದಾರೆ. ಹಾಗೆಯೇ ಪುಷ್ಪಾ 2 ಸಿನಿಮಾದಲ್ಲಿ ನಟಿಸುವುದಕ್ಕೆ ಬರೋಬ್ಬರಿ 150 ಕೋಟಿ ರೂ. ಕೊಡಬೇಕು ಎಂದು ಚಿತ್ರತಂಡವನ್ನು ಕೇಳಿದ್ದಾರೆ. ಆದರೆ ಚಿತ್ರತಂಡ ಮತ್ತು ನಟ ಕುಳಿತು ಚರ್ಚೆ ನಡೆಸಿದ್ದು, 125 ಕೋಟಿ ರೂ. ಅನ್ನು ಕೊಡಲು ಒಪ್ಪಿಕೊಳ್ಳಲಾಗಿದೆ ಎಂದು ವರದಿಯಿದೆ. ಪುಷ್ಪಾ 2 ಸಿನಿಮಾ ತಂಡವು ಎಲ್ಲ ಭಾಷೆಗಳಲ್ಲಿ ಸಿನಿಮಾ ತೆರೆಯ ಹಕ್ಕು ಕಾಯ್ದಿರಿಸಿಕೊಳ್ಳಲು ಒಟ್ಟು 1000 ಕೋಟಿ ರೂ. ಕೇಳಿತ್ತು ಎಂದು ಈ ಹಿಂದೆ ವರದಿಯಾಗಿತ್ತು.

ಪುಷ್ಪಾ 2 ಸಿನಿಮಾ ಗೆದ್ದೇ ಗೆಲ್ಲುತ್ತದೆ ಎನ್ನುವ ನಂಬಿಕೆಯಲ್ಲಿ ಚಿತ್ರತಂಡ ಮತ್ತು ನಟ ಅಲ್ಲು ಅರ್ಜುನ್‌ ಇದ್ದಾರೆ. ಈ ಸಿನಿಮಾ ಬಾಹುಬಲಿ ಮತ್ತು ಕೆಜಿಎಫ್‌ 2 ಸಿನಿಮಾದ ದಾಖಲೆಗಳನ್ನೂ ಮುರಿಯಲಿದೆ ಎನ್ನುವ ವಿಶ್ವಾಸವನ್ನು ಅಲ್ಲು ಇಟ್ಟುಕೊಂಡಿದ್ದಾರೆ ಎಂದು ಹೇಳಲಾಗಿದೆ.

ಇದನ್ನೂ ಓದಿ: Actor Ram Charan : ಶಾರುಖ್‌ ಖಾನ್‌ ʼಜವಾನ್‌ʼ ಸಿನಿಮಾದಲ್ಲಿ ಅಲ್ಲು ಬದಲು ರಾಮ್‌ ಚರಣ್‌ ನಟನೆ?
ಈ ಮಧ್ಯೆ ಅಲ್ಲು ಅರ್ಜುನ್‌ ಅವರು ನಿರ್ಮಾಪಕ ಸಂದೀಪ್‌ ರೆಡ್ಡಿ ವಂಗಾ ಮತ್ತು ಭೂಷಣ್‌ ಕುಮಾರ್‌ ಅವರ ದೊಡ್ಡ ಬಜೆಟ್‌ ಸಿನಿಮಾವೊಂದರಲ್ಲಿಯೂ ನಟಿಸುವುದಕ್ಕೆ ಸಿದ್ಧವಾಗಿದ್ದಾರೆ.

Exit mobile version