Site icon Vistara News

Actor Allu Arjun : ಶಾರುಖ್‌ ಖಾನ್‌ ಜತೆ ನಟಿಸುವುದಕ್ಕೆ ನೋ ಎಂದ ಅಲ್ಲು! ಕಾರಣವೇನು ಗೊತ್ತಾ?

#image_title

ಹೈದರಾಬಾದ್:‌ ಬಾಲಿವುಡ್‌ ನಟ ಶಾರುಖ್‌ ಖಾನ್‌ ಅವರ ಪಠಾಣ್‌ ಸಿನಿಮಾ ವಿಶ್ವಾದ್ಯಂತ ಭರ್ಜರಿ ಪ್ರದರ್ಶನವನ್ನು ಮುಂದುವರಿಸಿದೆ. ಅದರ ಬೆನ್ನಲ್ಲೇ ನಟ ʼಜವಾನ್‌ʼ ಸಿನಿಮಾ ಚಿತ್ರೀಕರಣದಲ್ಲೂ ಬಿಜಿ ಆಗಿದ್ದಾರೆ. ಈ ಸಿನಿಮಾದಲ್ಲಿ ಶಾರುಖ್‌ ಜತೆಯಲ್ಲಿ ನಟಿಸುವುದಕ್ಕೆ ದಕ್ಷಿಣ ಭಾರತದ ಪ್ರಸಿದ್ಧ ನಟ ಅಲ್ಲು ಅರ್ಜುನ್‌ (Actor Allu Arjun) ಅವರನ್ನು ಕೇಳಲಾಗಿತ್ತು. ಆದರೆ ಅಲ್ಲು ಅವರು ಈ ಸಿನಿಮಾದಲ್ಲಿ ನಟಿಸುವುದಕ್ಕೆ ಒಪ್ಪಿಲ್ಲ ಎಂದು ಪಿಂಕ್‌ವಿಲ್ಲಾ ಮಾಧ್ಯಮ ಸಂಸ್ಥೆ ವರದಿ ಮಾಡಿದೆ.

ಇದನ್ನೂ ಓದಿ: Jawan Movie: ಶಾರುಖ್‌ ಅಭಿನಯದ `ಜವಾನ್‌’ ಸಿನಿಮಾಗೆ ಎಂಟ್ರಿ ಕೊಡಲಿದ್ದಾರೆ ಅಲ್ಲು ಅರ್ಜುನ್‌?
ಅಲ್ಲು ಅರ್ಜುನ್‌ ಅವರು ತಮ್ಮ ಪುಷ್ಪಾ ಸಿನಿಮಾದ ಎರಡನೇ ಭಾಗವಾದ ʼಪುಷ್ಪಾ: ದಿ ರೂಲ್‌ʼ ಚಿತ್ರೀಕರಣದಲ್ಲಿ ಬಿಜಿ ಇದ್ದಾರೆ. ವೈಜಾಗ್‌ ಮತ್ತು ಹೈದರಾಬಾದ್‌ ನಗರಗಳಲ್ಲಿ ಈ ಚಿತ್ರದ ಚಿತ್ರೀಕರಣ ಬರದಿಂದ ಸಾಗುತ್ತಿದೆ. ಹೀಗಿರುವಾಗ ಜವಾನ್‌ ಸಿನಿಮಾಕ್ಕೆ ಸಮಯ ಮಾಡಿಕೊಂಡು ನಟಿಸುವುದು ಕಷ್ಟವೆಂದು ನಟ ಜವಾನ್‌ ಚಿತ್ರತಂಡಕ್ಕೆ ನೋ ಎಂದಿದ್ದಾರಂತೆ.‌

ಅಲ್ಲು ಅರ್ಜುನ್‌ ಅವರಿಗೆ ಜವಾನ್‌ ಚಿತ್ರತಂಡ ಕಥೆಯನ್ನು ವಿವರಿಸಿತ್ತು. ಅದಾದ ನಂತರ ಅಲ್ಲು ಅವರು ಸ್ವಲ್ಪ ಕಾಲಾವಕಾಶ ತೆಗೆದುಕೊಂಡು, ಸಿನಿಮಾ ಮಾಡಲು ಸಮಯ ಸಿಗುವುದಿಲ್ಲ ಎಂದು ಹೇಳಿದ್ದಾರೆ ಎಂದು ಮಾಧ್ಯಮವು ವರದಿ ಮಾಡಿದೆ.

ಇದನ್ನೂ ಓದಿ: Allu Arjun: ವೈಜಾಗ್‌ನಲ್ಲಿ ಶೂಟಿಂಗ್‌ ಮುಗಿಸಿದ ಪುಷ್ಪ 2, ಪೋಸ್ಟ್‌ ಹಂಚಿಕೊಂಡ ಅಲ್ಲು ಅರ್ಜುನ್‌
ಅಲ್ಲು ಅರ್ಜುನ್‌ ಮತ್ತು ರಶ್ಮಿಕಾ ಮಂದಣ್ಣ ಅಭಿನಯದ ಪುಷ್ಪಾ 2 ಸಿನಿಮಾದ ಚಿತ್ರೀಕರಣ ನಡೆಯುತ್ತಿದೆ. ಇತ್ತೀಚೆಗೆ ವಿಶಾಖಪಟ್ಟಣಂನಲ್ಲಿ ಅಲ್ಲು ಅರ್ಜುನ್‌ ಅವರ ಇಂಟ್ರಡಕ್ಷನ್‌ ಹಾಡಿನ ಚಿತ್ರೀಕರಣ ನಡೆದಿದ್ದಾಗಿ ವರದಿಯಾಗಿತ್ತು.

Exit mobile version