Site icon Vistara News

Actor Bala:  ಮಲಯಾಳಂ ನಟ ಬಾಲಾ ಆಸ್ಪತ್ರೆಗೆ ದಾಖಲು

Actor Bala hospitalised due to liver-related illness.

ಬೆಂಗಳೂರು: ಮಲಯಾಳಂ ನಟ ಬಾಲಾ (Actor Bala) ಅವರು ಲಿವರ್‌ ಸಂಬಂಧಿತ ಕಾಯಿಲೆಯಿಂದ ಬಳಲುತ್ತಿದ್ದು ಕೊಚ್ಚಿಯ ಆಸ್ಪತ್ರೆಗೆ ದಾಖಲಾಗಿದ್ದಾರೆ. ವರದಿಗಳ ಪ್ರಕಾರ, ಅವರು ಕೆಲವು ದಿನಗಳಿಂದ ಅನಾರೋಗ್ಯದಿಂದಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪತ್ನಿ ಮತ್ತು ಸಂಬಂಧಿಕರು ಈಗಾಗಲೇ ಅವರೊಂದಿಗೆ ಇದ್ದು, ಅವರ ಆರೋಗ್ಯವನ್ನು ವಿಚಾರಿಸಿಕೊಳ್ಳುತ್ತಿದ್ದಾರೆ. ಬಾಲಾ ಇತ್ತೀಚೆಗೆ ಮಲಯಾಳಂ ʻಶೆಫೀಕ್ಕಿಂಟೆ ಸಂತೋಷಂʼನಲ್ಲಿ (Shefeekkinte Santhosham) ಕಾಣಿಸಿಕೊಂಡಿದ್ದರು.

ಮಲಯಾಳಂ ಚಲನಚಿತ್ರೋದ್ಯಮದಲ್ಲಿ ಖ್ಯಾತಿ ಗಳಿಸಿರುವ ನಟ ಅಪಾರ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಈ ಹಿಂದೆಯೂ ನಟ ಆಸ್ಪತ್ರೆಗೆ ದಾಖಲಾಗಿದ್ದರು. ಇತ್ತೀಚೆಗೆ ʻಶೇಫೀಕ್ಕಿಂತೆ ಸಂತೋಷಂʼ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ಈ ಚಿತ್ರವನ್ನು ಅನು ಪಂದಳಂ ಅವರು ನಿರ್ದೇಶಿಸಿದ್ದಾರೆ. ಇದು 2022ರಲ್ಲಿ ತೆರೆ ಕಂಡಿತು. ಸಿನಿಮಾದಲ್ಲಿ ಉಮ್ಮಿ ಮುಕುಂದನ್ ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಇದನ್ನೂ ಓದಿ: Sonia Gandhi: ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿಗೆ ಮತ್ತೆ ಅನಾರೋಗ್ಯ; ಆಸ್ಪತ್ರೆಗೆ ದಾಖಲು

ಇದಕ್ಕೂ ಮುನ್ನ ಅವರು ರಜನಿಕಾಂತ್ ಸಿನಿಮಾದ ʻಅಣ್ಣಾತ್ತೆʼಯಲ್ಲಿ (Annaatthe) ಕಾಣಿಸಿಕೊಂಡಿದ್ದರು. ಪ್ರಸ್ತುತ ಬಾಲಾ ಅವರು ʻಬಿಲಾಲ್ʼ ಮತ್ತು ʻಸ್ಥಲಂʼ (Bilal and Sthalam) ಚಿತ್ರಗಳಲ್ಲಿ ಬ್ಯಸಿಯಾಗಿದ್ದಾರೆ.

Exit mobile version