Site icon Vistara News

Actor Chiranjeevi | ಟಾಲಿವುಡ್‌ ಸ್ಟಾರ್‌ ಚಿರಂಜೀವಿ ಕಿರಿಯ ಮಗಳಿಗೆ ಮೂರನೇ ಮದುವೆ?

Actor Chiranjeevi

ಬೆಂಗಳೂರು : ಮೆಗಾಸ್ಟಾರ್‌ ಚಿರಂಜೀವಿ (Actor Chiranjeevi) ಮಗಳು ಶ್ರೀಜಾ ಹಸೆಮಣೆ ಏರಲಿದ್ದಾರೆ ಎಂದು ವರದಿ ಆಗಿದೆ. ಹೊಸ ವರ್ಷದ ಹಿನ್ನೆಲೆಯಲ್ಲಿ ಅವರ ಇನ್‌ಸ್ಟಾ ಪೋಸ್ಟ್, ಮೂರನೇ ಮದುವೆಯ ಸುದ್ದಿಗೆ ಪುಷ್ಟಿ ನೀಡಿದೆ. 2016ರಲ್ಲಿ ಶ್ರೀಜಾ ಉದ್ಯಮಿ ಕಲ್ಯಾಣ್‌ ದೇವ್‌ ಅವರೊಂದಿಗೆ ಎರಡನೇ ಮದುವೆಯಾಗಿದ್ದರು. ಇದೀಗ ಕಲ್ಯಾಣ್‌ ದೇವ್‌ ಅವರೂ ಡೈವೋರ್ಸ್ ಖಚಿತಪಡಿಸಿರುವ ಇನ್‌ಸ್ಟಾ ಪೋಸ್ಟ್‌ನಿಂದಾಗಿ ಸೋಷಿಯಲ್‌ ಮೀಡಿಯಾದಲ್ಲಿ ಗಾಸಿಪ್‌ಗಳು ಹರಿದಾಡುತ್ತಿವೆ.

ಶ್ರೀಜಾ 2007ರಲ್ಲಿ ಶಿರಿಜ್‌ ಭಾರದ್ವಾಜ್‌ ಅವರ ಜತೆ ಮದುವೆಯಾಗಿದ್ದರು. ಬಳಿಕ 2011ರಲ್ಲಿ ಶಿರಿಶ್‌ ಅವರಿಗೆ ವಿಚ್ಛೇದನ ನೀಡಿದರು. 2016ರಲ್ಲಿ ಶ್ರೀಜಾ ಉದ್ಯಮಿ ಕಲ್ಯಾಣ್‌ ದೇವ್‌ ಅವರನ್ನು ಮದುವೆಯಾಗಿದ್ದರು. ಕಲ್ಯಾಣ್‌ ದೇವ್‌ ಈಗಾಗಲೇ ಇನ್‌ಸ್ಟಾ ಪೋಸ್ಟ್‌ನಲ್ಲಿ ಸಂಬಂಧ ಕಳೆದುಕೊಳ್ಳುವುದಾಗಿ ಪೋಸ್ಟ್‌ ಮಾಡಿದ್ದಾರೆ.

ಇದನ್ನೂ ಓದಿ | Karunada Sambhrama 2022 | ಡಿ. 10,11ರಂದು ಕರುನಾಡ ಸಂಭ್ರಮ : ಚಿರಂಜೀವಿ ಸರ್ಜಾಗೆ ಮರಣೋತ್ತರ ಕನ್ನಡ ಕಲಾಭೂಷಣ ಪ್ರಶಸ್ತಿ

ಪೊಸ್ಟ್‌ನಲ್ಲಿ ಶ್ರೀಜಾ ಅವರು, ʻʻ2022 ನನಗೆ ಒಬ್ಬ ಅದ್ಭುತ ವ್ಯಕ್ತಿಯನ್ನು ಪರಿಚಯ ಮಾಡಿಕೊಟ್ಟಿದೆ. ನನ್ನನ್ನು ಅತಿಯಾಗಿ ಪ್ರೀತಿ ಮತ್ತು ಕಾಳಜಿ ತೋರಿಸುವ ವ್ಯಕ್ತಿಯನ್ನು ಪರಿಚಯಿಸಿದೆʼʼಎಂದು ಪೊಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ. ಹೀಗಾಗಿ ಶ್ರೀಜಾ ಮೂರನೇ ಮದುವೆಯ ತಯಾರಿಯಲ್ಲಿದ್ದಾರೆ ಎನ್ನಲಾಗುತ್ತಿದೆ. ಆದರೆ ಈ ಬಗ್ಗೆ ಅವರು ಸ್ಪಷ್ಟನೆಯನ್ನು ಎಲ್ಲಿಯೂ ನೀಡಿಲ್ಲ. ಶ್ರೀಜಾ ಅವರಿಗೆ ಮೊದಲ ಗಂಡನಿಂದ ಒಂದು ಮಗು, ಎರಡನೇ ಗಂಡನಿಂದ ಒಂದು ಮಗು ಇದೆ.

ಇದನ್ನೂ ಓದಿ | Chiranjeevi | ʻರೇಮೊʼ ನಟ ಇಶಾನ್‌ಗೆ ಮೆಗಾ ಸ್ಟಾರ್ ಚಿರಂಜೀವಿ ಸಾಥ್‌!

Exit mobile version