Site icon Vistara News

Actor Darshan: ಪವಿತ್ರಾ ಬಗ್ಗೆ ಗೊತ್ತಿಲ್ಲ ಆದರೆ ʻದರ್ಶನ್‌ʼ ದಾಂಪತ್ಯದಲ್ಲಿ ಹುಳಿ ಹಿಂಡಿದ್ದೇ ನಿಖಿತಾ ಎಂದ ಓಂ ಪ್ರಕಾಶ್!

Actor Darshan case om prakash say darshan life villion Nikhita

ಬೆಂಗಳೂರು: ನಟ ದರ್ಶನ್‌ (Actor Darshan) ಅವರು ರೇಣುಕಾ ಸ್ವಾಮಿ ಕೊಲೆ ಕೇಸ್‌ನಲ್ಲಿ ನ್ಯಾಯಾಂಗ ಬಂಧನಲ್ಲಿ ಇರುವುದು ಗೊತ್ತೇ ಇದೆ. ದರ್ಶನ್ (Darshan) ಜೊತೆ ಹಲವಾರು ಹಿಟ್ ಸಿನಿಮಾಗಳನ್ನು ಕೊಟ್ಟ ನಟ, ನಿರ್ದೇಶಕ, ನಿರ್ಮಾಪಕ ಓಂ ಪ್ರಕಾಶ್ ರಾವ್ (Om Prakash Rao) ಅವರು 10 ವರ್ಷಗಳಿಂದ ದರ್ಶನ್ ಅವರನ್ನು ಮಾತನಾಡಿಸಿಲ್ಲ. ಈಗ ಮಾಧ್ಯಮದ ಮುಂದೆ ದರ್ಶನ್‌ ಕುರಿತಾಗಿ ಹಲವು ವಿಚಾರಗಳನ್ನು ಶೇರ್‌ ಮಾಡಿಕೊಳ್ಳುತ್ತಿದ್ದಾರೆ. ದರ್ಶನ್‌ ದಾಂಪತ್ಯದಲ್ಲಿ ನಟಿ ನಿಖಿತಾ ತುಕ್ರಾಲ್ ಹುಳಿ ಹಿಂಡಿದ್ದರು ಎನ್ನುವ ಆರೋಪ ಕೇಳಿಬಂದಿತ್ತು. ಈ ಬಗ್ಗೆ ಇದೀಗ ನಿರ್ದೇಶಕ ಓಂ ಪ್ರಕಾಶ್ ರಾವ್ ಮಾತನಾಡಿದ್ದಾರೆ.

ಪತ್ನಿ ವಿಜಯಲಕ್ಷ್ಮಿ ಮೇಲೆ ಹಲ್ಲೆ ಮಾಡಿದ ಪ್ರಕರಣದಲ್ಲಿ ದರ್ಶನ್ 28 ದಿನಗಳ ಕಾಲ ಜೈಲು ಸೇರುವಂತಾಗಿತ್ತು.ಒಂದ್ಕಾಲದಲ್ಲಿ ದರ್ಶನ್‌ಗೆ ಓಂ ಪ್ರಕಾಶ್ ಬಹಳ ಆಪ್ತರಾಗಿದ್ದರು. ಇವರಿಬ್ಬರ ಕಾಂಬಿನೇಷನ್‌ನಲ್ಲಿ ಹಿಟ್ ಸಿನಿಮಾಗಳು ಬಂದಿತ್ತು. ನಾವಿಬ್ಬರು ದೂರಾಗಲೂ ನಿಖಿತಾ ಕಾರಣ ಎಂದಿದ್ದಾರೆ. ಮಾತ್ರವಲ್ಲ ದರ್ಶನ್‌ ಕುಟುಂಬಕ್ಕೂ ನಿಖಿತಾ ಅವರು ಹುಳಿ ಹಿಂಡಿದ್ದರು ಎಂದು ಹೇಳಿಕೊಂಡಿದ್ದಾರೆ.

ಓಂ ಪ್ರಕಾಶ್ ರಾವ್ ಮಾಧ್ಯಮವೊಂದಕ್ಕೆ ಪ್ರತಿಕ್ರಿಯೆ ನೀಡಿ ʻʻದರ್ಶನ್‌ ತುಂಬ ಒಳ್ಳೆಯ ವ್ಯಕ್ತಿ. ವಿಜಯಲಕ್ಷ್ಮಿ ಕೂಡ ಅಪ್ಪಟ ಚಿನ್ನ. ಇವರಿಬ್ಬರ ಸಂಸಾರದಲ್ಲಿ ಹುಳಿ ಹಿಂಡಬೇಡ , ಹೋಗಬೇಡಿ ಎಂದು ನಿಖಿತಾಗೆ ನಾನು ಹೇಳಿದ್ದೆ. ನೀವು ಜಾಸ್ತಿ ಮುನ್ನುಗ್ಗುತ್ತಿದ್ದೀರ ಹೋಗ್ಬೇಡಿ ಎಂದಿದ್ದೆ. ಇದೇ ತಪ್ಪಾಯ್ತು. ಇವತ್ತಿನ ಪರಿಸ್ಥಿತಿಯಲ್ಲಿ ವಿಜಯಲಕ್ಷ್ಮಿ ಮೇಡಂ, ಅವರ ಮಗ ವಿನೀಶ್ ಇದನ್ನೆಲ್ಲಾ ಹೇಗೆ ಫೇಸ್ ಮಾಡ್ತಿದ್ದಾರೆ ಅನ್ನೋದು ಗೊತ್ತಿಲ್ಲ. ಆದರೆ ಅವರ ಸಂಸಾರ ಚೆನ್ನಾಗಿ ಆಗಬೇಕುʼʼಎಂದರು. ʻʻನನಗೆ ಪವಿತ್ರಾ ಬಗ್ಗೆ ಗೊತ್ತಿಲ್ಲ. ದರ್ಶನ್‌ ಜೀವನದಲ್ಲಿ ಬಂದಿರೋದು ಗೊತ್ತಿಲ್ಲ. ಗೊತ್ತಿಲ್ಲದೇ ವಿಚಾರವನ್ನು ಮಾತನಾಡುವುದು ತಪ್ಪುʼʼಎಂದು ಹೇಳಿಕೆ ನೀಡಿದ್ದಾರೆ.

ಇದನ್ನೂ ಓದಿ: Actor Darshan: ಇನ್ಮುಂದೆ ದರ್ಶನ್‌ ಕೈದಿ ನಂಬರ್‌ ನನ್ನ ಗಾಡಿ ಮೇಲೆ ಇರತ್ತೆ ಎಂದು ಗಳಗಳನೇ ಅತ್ತ ಅಭಿಮಾನಿ!

ಹೇಳಿದ್ದನ್ನ ತಿರುಚಿ ನನ್ನ, ದರ್ಶನ್ ಮಧ್ಯೆ ನಿಖಿತಾ ಮನಸ್ತಾಪ ತಂದ್ರು!

ʻʻಮುಂಚೆ ದರ್ಶನ್‌ ಹಾಗೂ ನನ್ನ ಸ್ನೇಹ ಚೆನ್ನಾಗಿಯೇ ಇತ್ತು. ನಮಗೆ ಒಂದು ಜ್ಞಾನ ಇರುತ್ತೆ. ಸಡನ್‌ ಆಗಿ ಯಾರೋ ಹೇಳಿದ್ದು ಕೇಳೋದು ತಪ್ಪು. ಆದರೆ ದರ್ಶನ್‌ ಯಾರೋ ಹೇಳಿದ್ದನ್ನು ಬೇಗ ಕೇಳುತ್ತಿದ್ದ. ನನ್ನ ದರ್ಶನ್‌ ಮಧ್ಯೆ ಮನಸ್ತಾಪ ತಂದಿಟ್ಟಿದ್ದು ನಿಖಿತಾ ಎಂಬ ಕಲಾವಿದೆ. ಯಾವುದೋ ಒಂದು ವಿಷಯವನ್ನು ತಿರುಚಿ ಹೇಳಿದ್ದಾರೋ ಗೊತ್ತಿಲ್ಲ. ಎಲ್ಲರೂ ಅವರ ಅವರ ಸೇಫ್ಟಿ ನೋಡ್ಕೋತ್ತಾರೆ ಅನ್ಸತ್ತೆ. ಹಾಗೇ ನನ್ನ ದರ್ಶನ್‌ ಜತೆ ವೈಮನಸ್ಸು ಆಯ್ತು. ಆ ಬಗ್ಗೆ ತುಂಬ ಸಲ ಬೇಜಾರು ಮಾಡಿಕೊಂಡಿದ್ದು ಇದೆʼʼಎಂದರು.

ಇಂದು ಜಾಮೀನು ಅರ್ಜಿ ಸಲ್ಲಿಕೆ

ದರ್ಶನ್‌ ಸೇರಿದತೆ ರೇಣುಕಾ ಸ್ವಾಮಿ ಕೊಲೆ ಆರೋಪಿಗಳು ಜಾಮೀನು‌ ಕೋರಿ ಇಂದು ಎಸಿಎಂಎಂ ಕೋರ್ಟ್ ಮುಂದೆ ಅರ್ಜಿ ಸಲ್ಲಿಸಲಿದ್ದಾರೆ. ಜಾಮೀನು ಅರ್ಜಿ ಸಲ್ಲಿಕೆ ಮಾಡಿದರೆ ದರ್ಶನ್ ಪರ ವಾದ ಮಂಡನೆಯನ್ನು ಹಿರಿಯ ವಕೀಲ ಸಿ.ವಿ ನಾಗೇಶ್ ಮಾಡಲಿದ್ದಾರೆ.

ದರ್ಶನ್‌ನನ್ನು ಬೇರೆ ಜೈಲಿಗೆ ಶಿಫ್ಟ್‌ ಮಾಡಲು ಅವಕಾಶ ಕೊಡುವಂತೆ ಎಸ್‌ಪಿಪಿ ನ್ಯಾಯಾಲಯದಲ್ಲಿ ಮನವಿ ಮಾಡಿದ್ದರು. ಬೇರೆ ಜೈಲಿಗೆ ಶಿಫ್ಟ್‌ ಮಾಡಲು ಸಲ್ಲಿಸಿದ್ದ ಅರ್ಜಿ ವಿಚಾರಣೆ ಸೋಮವಾರ ನಡೆಯಲಿದೆ. ಒಂದು ವೇಳೆ ನ್ಯಾಯಾಲಯ ಅರ್ಜಿ ಪುರಸ್ಕರಿಸಿದರೆ ತುಮಕೂರು ಜೈಲಿಗೆ ಕಳಿಸಲಾಗುತ್ತದೆ. ಇಲ್ಲವಾದರೆ ಪರಪ್ಪನ ಅಗ್ರಹಾರದ ಭದ್ರತಾ ಸಿಬ್ಬಂದಿ ಕೊಠಡಿಯಲ್ಲೇ ನಟ ಕಾಲ ಕಳೆಯಬೇಕಾಗಿದೆ.

Exit mobile version