Site icon Vistara News

Actor Darshan: ಅಯ್ಯೋ ತಗಡೇ, ಯಾಕಪ್ಪ ಗುಮ್ಮಿಸ್ಕೋತಿಯಾ: ಉಮಾಪತಿಗೆ ದರ್ಶನ್‌ ವಾರ್ನಿಂಗ್‌!

Actor Darshan

ಬೆಂಗಳೂರು: ಇಂದು (ಫೆ.20) ಪ್ರಸನ್ನ ಚಿತ್ರಮಂದಿರದಲ್ಲಿ ʻಕಾಟೇರʼ ಸಿನಿಮಾದ 50ನೇ ದಿನದ ಸಂಭ್ರಮಾಚರಣೆ ನಡೆಯುತ್ತಿದೆ. ಈ ಸಮಾರಂಭದಲ್ಲಿ ದರ್ಶನ್‌ ಕೂಡ ಭಾಗಿಯಾಗಿದ್ದಾರೆ. ಇದೇ ವೇಳೆ ದರ್ಶನ್‌ ರಾಬರ್ಟ್ ಸಿನಿಮಾದ ನಿರ್ಮಾಪಕ ಉಮಾಪತಿಗೆ ತಿರುಗೇಟು ಕೊಟ್ಟಿದ್ದಾರೆ. ಈ ಹಿಂದೆ ಉಮಾಪತಿ ಅವರು ಕಾಟೇರ ಟೈಟಲ್‌ ನಾನೇ ಕೊಟ್ಟಿದ್ದು ಎಂದು ಹಲವಾರು ಸಂದರ್ಶನಗಳಲ್ಲಿ ಹೇಳಿದ್ದರು. ಇದೀಗ ಕಾರ್ಯಕ್ರಮದಲ್ಲಿ ದರ್ಶನ್‌ ಮಾತನಾಡಿ ʻಅಯ್ಯೋ ತಗಡೇ, ರಾಬರ್ಟ್‌ ಕಥೆ ನಿನಗೆ ಕೊಟ್ಟಿದ್ದು ನಾವು. ಇಂಥ ಒಳ್ಳೆ ಕಥೆ ಮತ್ತೆ ಯಾಕ್‌ ಬಿಟ್ಟೆ ನೀನು?ʼʼ ಎಂದು ವೇದಿಕೆ ಮೇಲೆಯೇ ಪ್ರಶ್ನೆ ಮಾಡಿದ್ದಾರೆ.

ದರ್ಶನ್‌ ಮಾತನಾಡಿ ʻʻಯಾವುದೇ ಅವಾರ್ಡ್‌ ಕಾರ್ಯಕ್ರಮಕ್ಕೆ ನಾನು ಹೋಗಲ್ಲ. ಅವಾರ್ಡ್‌ಗೆ ವ್ಯಾಲ್ಯೂ ಇಲ್ಲ. ಆದರೆ ಯಾರಾದರೂ ಶೀಲ್ಡ್‌ ಕೊಡ್ತಾರೆ ಸಿನಿಮಾದು ಅಂದರೆ ಮೊದಲು ಹೋಗ್ತೀನಿ. ಏನಕ್ಕೆ ಅಂದರೆ ನಮ್ಮ ಮನೆಯಲ್ಲಿ ಮೊದಲು ಒಂದಷ್ಟು ಶೀಲ್ಡ್‌ಗಳು ಇದ್ದವು. ಈಗಲೂ ಇದೆ. ಅದೆಲ್ಲ ನೋಡಿದಾಗ ನಮ್ಮ ಜರ್ನಿ ಕಾಣಿಸುತ್ತೆ. ಇದೂ ಸೇರಿ ಪ್ರಸನ್ನ ಚಿತ್ರಮಂದಿರದ ಕಡೆಯಿಂದಲೇ ನನಗೆ 3 ಶೀಲ್ಡ್‌ ಕೊಟ್ಟಿದ್ದಾರೆ. ಮುಂದೆ ನಮ್ಮ ಮನೆಯಲ್ಲಿ ಮಕ್ಕಳಿಗೆ ಇದು ಮಾದರಿʼ ಎಂದರು.

ಇದನ್ನೂ ಓದಿ: Actor Darshan: ಪತ್ನಿಗೆ ಗೌರವ ಕೊಡದ ನೀನ್ಯಾವ ಗಂಡ್ಸಲೇ; ದರ್ಶನ್‌ ವಿರುದ್ಧ ಅಹೋರಾತ್ರ ಆಕ್ರೋಶ!

ಅಯ್ಯೋ ತಗಡೇ, ರಾಬರ್ಟ್‌ ಕಥೆ ನಿನಗೆ ಕೊಟ್ಟಿದ್ದು ನಾವು!

ʻʻರಾಮಮೂರ್ತಿ ಅವರು ಇಲ್ಲಿದ್ದಾರೆ. ಈ ಕಥೆ ನಾನು ಮಾಡಿಸಿದೆ, ಕಥೆ ನಾನು ಕೊಟ್ಟೆ ಎಂದು ಒಬ್ಬರು ಹೇಳಿದ್ದರು. ಕೊಟ್ಟಿದ್ದು, ಮಾಡಿದ್ದು ಹೇಳಬಾರದು. ಒಂದ್ಸಲ ಆಗಿರೋದ್ರಿಂದ ಬುದ್ಧಿ ಕಲಿತಿಲ್ಲ. ಇಂಥ ಒಳ್ಳೆ ಕಥೆ ಯಾಕೆ ಬಿಟ್ಟೆ ನೀನು? ನಿನ್ನ ಜಡ್ಜ್‌ಮೆಂಟ್‌ ಚೆನ್ನಾಗಿದೆ. ಬಟ್‌ ಯಾಕೆ ಈ ಕಥೆ ಬಿಟ್ಟೆ? ಕಾಟೇರ ಟೈಟಲ್‌ ಕೊಟ್ಟಿದ್ದೆ ನಾನುʼʼ ಎಂದು ದರ್ಶನ್‌ ಖಡಕ್‌ ಆಗಿ ಹೇಳಿದ್ದಾರೆ. ʻʻಅಯ್ಯೋ ತಗಡೇ… ಎಲ್ಲ ಆಧಾರ ಇಟ್ಟುಕೊಂಡೇ ಮಾತನಾಡಬೇಕುʼʼ ಎಂದು ಉಮಾಪತಿಗೆ ನೇರವಾಗಿ ದರ್ಶನ್‌ ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ. ʻʻತರುಣ್ ಅವರಿಗೆ ಟೈಟಲ್ ರಿಜಿಸ್ಟರ್ ಮಾಡಿಸೋಕೆ ಹೇಳಿದ್ದೆ. ಅವರ ಬ್ಯಾನರ್‌ನಲ್ಲಿ ರಿಜಿಸ್ಟರ್ ಮಾಡಿಸಿದ್ವಿʼʼ ಎಂದರು. ತರುಣ್ ಕೂಡ ದರ್ಶನ್‌ ಅವರೇ ಟೈಟಲ್ ಕೊಟ್ಟಿದ್ದು ಎಂದರು. ಕೊನೆಯಲ್ಲಿ ದರ್ಶನ್‌ ಅವರು ಉಮಾಪತಿಗೆ ʻಯಾಕಪ್ಪ ಬಂದೂ ಬಂದು ಗುಮ್ಮಿಸ್ಕೋತಿಯಾʼʼ ಎಂದು ಕಿಚಾಯಿಸಿದ್ದಾರೆ.

ಇದನ್ನೂ ಓದಿ: Actor Darshan: ಇವತ್ತು ಇವಳಿರ್ತಾಳೆ, ನಾಳೆ ಅವಳಿರ್ತಾಳೆ, ನಾನ್ಯಾಕೆ ತಲೆ ಕೆಡಿಸಿಕೊಳ್ಳಲಿ ಎಂದ ದರ್ಶನ್!

Exit mobile version