ಬೆಂಗಳೂರು: ಚಿತ್ರದುರ್ಗ ರೇಣುಕಾಸ್ವಾಮಿ ಕೊಲೆ ಪ್ರಕರಣ ಸಂಬಂಧಿಸಿದಂತೆ (Actor Darshan) ಆರೋಪಿಗಳು ಹಲ್ಲೆ ಬಳಿಕ ಐ ಫೋನ್‌ನಲ್ಲಿ ರೆಕಾರ್ಡ್ ಕೂಡ ಮಾಡಿರುವುದು ತಿಳಿದು ಬಂದಿದೆ. ಹಲ್ಲೆ ಬಳಿಕ ಹೊಡೆದ ಜಾಗದಲ್ಲಿ ರೇಣುಕಾಸ್ವಾಮಿ ಕುಸಿದು ಬಿದ್ದಿದ್ದರಂತೆ. ಸ್ಯಾಕ್ಷಿ ನಾಶ ಮಾಡಬೇಕು ಎಂದು ಮಸ್ತ್ ಪ್ಲ್ಯಾನ್ ಕೂಡ ಆಗಿತ್ತು. ಅದರಲ್ಲಿಯೇ ಒಬ್ಬ ಆರೋಪಿ ಹಲ್ಲೆ ನಡೆದ ಬಳಿಕ ಐಫೋನ್‌ನಲ್ಲಿ ರೆಕಾರ್ಡ್ ಮಾಡಿದ್ದಾರಂತೆ. ಸಿನಿಮಾ ಶೈಲಿಯಲ್ಲಿ ನಡೆದಿದ್ದ ಕೃತ್ಯವನ್ನು ಸೆರೆ ಹಿಡಿದಿದ್ದಾರೆ.
ಚಿತ್ರದುರ್ಗ ರೇಣುಕಾಸ್ವಾಮಿ ಕೊಲೆ ಪ್ರಕರಣ ಸಂಬಂಧಿಸಿಂದಂತೆ. ಐವರು ಆರೋಪಿಗಳಿಗೆ ಸಿಮ್ ಕಾರ್ಡ್ ಕೊಟ್ಟಿದ್ದವರ ವಿಚಾರಣೆಯನ್ನು ಕಾಮಾಕ್ಷಿಪಾಳ್ಯ ಪೊಲೀಸರು ಮಾಡುತ್ತಿದ್ದಾರೆ. ಸಿಮ್ ಕಾರ್ಡ್ ಕೊಟ್ಟ ಬಗ್ಗೆ ಐವರ ಹೇಳಿಕೆಯನ್ನು ಪೊಲೀಸರು ದಾಖಲಿಸಿಕೊಂಡಿದ್ದಾರೆ. A2 ಆರೋಪಿ ನಟ ದರ್ಶನ್‌ಗೆ ಹೇಮಂತ್ ಸಿಮ್ ಕೊಟ್ಟಿದ್ದ .ಹೇಮಂತ್ ವಿಚಾರಣೆ ನಡೆಸಿ ಪೊಲೀಸರು ಹೇಳಿಕೆ ದಾಖಲಿಸಿದ್ದರು. ಬೆಂಗಳೂರಿನ ಪ್ರಕಾಶ್ ನಗರ ನಿವಾಸಿ ಹೇಮಂತ್.
ದರ್ಶನ್ ಗೆ ಸಿಮ್ ಕೊಟ್ಟಿದ್ದ ಬಗ್ಗೆ ಹೇಮಂತ್ ವಿಚಾರಣೆ ಆಗಿದೆ. ಅದೇ ರೀತಿ ಎ1 ಆರೋಪಿ ಪವಿತ್ರಾಗೌಡಗೆ ಸಿಮ್ ಕಾರ್ಡ್ ಕೊಟ್ಟಿದ್ದ ವ್ಯಕ್ತಿ ವಿಚಾರಣೆ ಆಗಿದೆ. ಮನೋಜ್ ಎಂಬಾತನ ವಿಚಾರಣೆ ನಡೆಸಿ ಪೊಲೀಸರು ಮಾಹಿತಿ ಪಡೆದಿದ್ದಾರೆ. ಮನೋಜ್ ಬಸವೇಶ್ವರನಗರ ನಿವಾಸಿಯಾದ್ದರು. ಹಾಗೂ ಉಳಿದ ಮೂವರು ಆರೋಪಿಗಳಿಗೆ ಸಿಮ್ ಕೊಟ್ಟವರ ವಿಚಾರಣೆ ಆಗಿದೆ. ಕಾರ್ತಿಕ್, ಕೇಶವಮೂರ್ತಿ, ನಿಖಲಿ ನಾಯಕ್ ಗೆ ಸಿಮ್ ಕಾರ್ಡ್ ಕೊಟ್ಟವರ ವಿಚಾರಣೆ ಕೂಡ ಆಗಿದೆ.
ಇದನ್ನೂ ಓದಿ: Kannada New Movie: ಸದ್ದಿಲ್ಲದೇ ಒಟಿಟಿಗೆ ಲಗ್ಗೆ ಇಟ್ಟ ರಂಗಾಯಣ ರಘು ಅಭಿನಯದ ‘ಮೂರನೇ ಕೃಷ್ಣಪ್ಪ’ ಸಿನಿಮಾ!
ಕಾರ್ತಿಕ್ ಎಂಬುವ ವೇಲು ಎಂಬಾತನ ಹೆಸರಲ್ಲಿದ್ದ ಸಿಮ್ ಬಳಸಿದ್ದ . ಗೀತಾ ಹೆಸರಲ್ಲಿದ್ದ ಸಿಮ್ ಬಳಸಿದ್ದ ನಿಖಿಲ್ ನಾಯಕ್. ಐದು ಮಂದಿಯನ್ನ ವಿಚಾರಣೆ ನಡೆಸಿ ಹೇಳಿಕೆ ಪಡೆದಿದ್ದಾರೆ ಪೊಲೀಸರು. ಕೊಲೆ ವೇಳೆ ಬೇರೊಬ್ಬರ ಹೆಸರಲ್ಲಿದ್ದ ಸಿಮ್ ಕಾರ್ಡ್ ಆರೋಪಿಗಳು ಬಳಸಿದ್ದರು. ಐವರು ಆರೋಪಿಗಳ ಪೋನ್ ಪರಿಶೀಲನೆ ವೇಳೆ ಸಿಮ್ ಕಾರ್ಡ್ ಸಿಕ್ರೇಟ್ ಬಯಲಾಗಿದೆ.