Site icon Vistara News

Actor Darshan: ಮೊದಲ ಬಾರಿ ಕೊರಗಜ್ಜನ ಸನ್ನಿಧಿಗೆ ಭೇಟಿ ನೀಡಿದ ದರ್ಶನ್‌!

Actor Darshan visit first time visit koragajja

ಬೆಂಗಳೂರು: ಈಗಾಗಲೇ ಹಲವಾರು ಸ್ಯಾಂಡಲ್‌ವುಡ್‌ ನಟ ನಟಿಯರು ಮಂಗಳೂರಿನ ಕೊರಗಜ್ಜ ಕ್ಷೇತ್ರಕ್ಕೆ ಭೇಟಿ ಕೊಟ್ಟು ದರ್ಶನ ಪಡೆದಿದ್ದಾರೆ. ಈ ಸಾಲಿಗೆ ಈಗ ದರ್ಶನ್‌ ಸೇರಿದ್ದಾರೆ. ಹೌದು ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಅವರು ಹಾಕಿ ಮಂಗಳೂರಿನ ಕೊರಗಜ್ಜ ಕ್ಷೇತ್ರಕ್ಕೆ (Koragajja) ಭೇಟಿ ನೀಡಿದ್ದಾರೆ. ಕೊರಗಜ್ಜ ದೈವ ದೇವರಿಗೆ ಡಿಬಾಸ್ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಈ ವೇಳೆ, ದರ್ಶನ್ ಜತೆ ನಟ ಚಿಕ್ಕಣ್ಣ ನಟ ಯಶಸ್ ಸೂರ್ಯ ಕೂಡ ಭಾಗಿಯಾಗಿದ್ದಾರೆ.

ದರ್ಶನ್‌ ಭೇಟಿ ನೀಡಿದ್ದ ವೇಳೆ, ಕೊರಗಜ್ಜ ಕ್ಷೇತ್ರದ ವತಿಯಿಂದ ದರ್ಶನ್‌ಗೆ ಗೌರವ ಸಲ್ಲಿಸಿದ್ದಾರೆ. ಪೂಜೆಯ ಬಳಿಕ ದರ್ಶನ್ ಮಾಧ್ಯಮಕ್ಕೆ ಪ್ರತಿಕ್ರಿಸಿ, “ಮೊದಲ ಬಾರಿಗೆ ಕುತ್ತಾರು ಕೊರಗಜ್ಜನ ಸನ್ನಿಧಿಗೆ ಭೇಟಿ ನೀಡಿದ್ದೇನೆ. ಹಿಂದೆ ಮಂಗಳೂರಿಗೆ ಸುಮಾರು ಬಾರಿ ಬಂದಿದ್ದೇನೆ. ಆದರೆ ಕೊರಗಜ್ಜ ಕ್ಷೇತ್ರಕ್ಕೆ ಭೇಟಿ ನೀಡಿರಲಿಲ್ಲ. ಹಾಗೆ ನೋಡಿಕೊಂಡು ಹೋಗೋಣ ಅಂತ ಬಂದಿದ್ದೀನಿ. ಇಲ್ಲಿಗೆ ಇಂದು ಬಂದಿರುವುದಕ್ಕೆ ಬೇರೆ ಯಾವುದೇ ಕಾರಣ ಇಲ್ಲ” ಎಂದು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: Bipasha Basu: ಇದೇ ಮೊದಲ ಬಾರಿಗೆ ಮಗಳು ʻದೇವಿʼಯ ಮುಖ ದರ್ಶನ ಮಾಡಿದ ಬಿಪಾಶಾ ಬಸು!

ಈಗಾಗಲೇ ದರ್ಶನ್‌ ಅಭಿನಯದ ‘ಡೆವಿಲ್’ ಚಿತ್ರದ ಫಸ್ಟ್ ಲುಕ್ ಟೀಸರ್ ರಿಲೀಸ್ ಆಗಿದೆ. ಮಿಲನಾ ಪ್ರಕಾಶ್ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಲಿದ್ದಾರೆ. ಅಜನೀಶ್ ಲೋಕನಾಥ್ ಸಂಗೀತ ಚಿತ್ರಕ್ಕಿದೆ. ‘ತಾರಕ್’ ಬಳಿಕ ದರ್ಶನ್- ಪ್ರಕಾಶ್ ಜೋಡಿಯ ಎರಡನೇ ಸಿನಿಮಾ ಇದು. ದರ್ಶನ್‌ ಕೂಡ ರಗಡ್‌ ಆಗಿ ಕಂಡಿದ್ದಾರೆ.ಡೆವಿಲ್’ ಚಿತ್ರಕ್ಕೆ ಕೆಲವು ತಿಂಗಳ ಹಿಂದೆ ಸ್ಕ್ರಿಪ್ಟ್ ಪೂಜೆ ನಡೆದಿತ್ತು. ಕೆಲವು ಎಡಿಟ್ ಮಾಡಿದ ಫೋಟೊಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳಲಾಗಿತ್ತು. ಇದು ‘ಡೆವಿಲ್’ ಚಿತ್ರದ ಪೋಸ್ಟರ್ ಎಂದು ಹೇಳಲಾಗಿತ್ತು.

ಆದರೆ, ಇದು ನಕಲಿ ಪೋಸ್ಟರ್ ಎಂದು ತಂಡ ಸ್ಪಷ್ಟನೆ ನೀಡಿತ್ತು. ಡೆವಿಲ್’ ಚಿತ್ರಕ್ಕೆ ಪ್ರಕಾಶ್ ವೀರ್ ಅವರು ನಿರ್ದೇಶನ ಮಾಡುತ್ತಿದ್ದಾರೆ. ಈ ಮೊದಲು ‘ವಂಶಿ’, ‘ಮಿಲನ’ ಮೊದಲಾದ ಚಿತ್ರಗಳಿಗೆ ಅವರು ಆ್ಯಕ್ಷನ್ ಕಟ್ ಹೇಳಿದ್ದರು. ದರ್ಶನ್ ಜೊತೆ 2017ರಲ್ಲಿ ‘ತಾರಕ್’ ಸಿನಿಮಾ ಮಾಡಿದ್ದರು. ಈಗ ಎರಡನೇ ಬಾರಿಗೆ ಇವರು ಒಂದಾಗಿದ್ದಾರೆ.

Exit mobile version