Site icon Vistara News

Actor Dhanush | `ಕೊಟ್ಲಲ್ಲಪೋ ಕೈ’ ಸಿನಿಮಾ ಖ್ಯಾತಿಯ ನಟ ಧನುಷ್‌ ಇನ್ನಿಲ್ಲ

Actor Dhanush

ಬೆಂಗಳೂರು : ಸ್ಯಾಂಡಲ್‌ವುಡ್‌ ನಟ ಧನುಷ್‌ (Actor Dhanush) ಅನಾರೋಗ್ಯದಿಂದ ನಿಧನರಾಗಿದ್ದಾರೆ. ಸಂಪಿಗೆ ಹಳ್ಳಿ, ಕೊಟ್ಲಲ್ಲಪೋ ಕೈ , ಪ್ಯಾರ್‌ ಕಾ‌ ಗೋಲ್‌ಗುಂಬಜ್ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಚಿತ್ರೀಕರಣಕ್ಕಾಗಿ ಲಡಾಖ್‌ಗೆ ತೆರಳಿದ್ದ ಅವರು ಅಲ್ಲಿನ ವಾತಾವರಣಕ್ಕೆ ಹೊಂದಿಕೊಳ್ಳಲು ಆಗದೇ, ಅನಾರೋಗ್ಯಕ್ಕೆ ತುತ್ತಾಗಿದ್ದರು. ನಂತರ ಬೆಂಗಳೂರಿನಲ್ಲಿ ಆಸ್ಪತ್ರೆಗೆ ದಾಖಲಿಸಿದ್ದರೂ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.

ಬಾಗಲಕೋಟೆ ಜಿಲ್ಲೆ ಕೋಡಿಹಾಳ ಗ್ರಾಮದ ಶ್ರೀಮುತ್ತುರಾಜ್ , ಸಿನಿಮಾಗಾಗಿ ತಮ್ಮ ಹೆಸರನ್ನು ಧನುಷ್ ಎಂದು ಬದಲಾಯಿಸಿಕೊಂಡಿದ್ದರು. ಶಿವರಾಜ್ ಕುಮಾರ್ ನಟನೆಯ ʻಲೀಡರ್ʼ ಸೇರಿದಂತೆ ಅನೇಕ ಚಿತ್ರಗಳಲ್ಲಿ ಅವರು ನಟಿಸಿದ್ದರು.

ಕೋಡಿಹಾಳ ಗ್ರಾಮದಲ್ಲಿಯೇ ಅಂತ್ಯಸಂಸ್ಕಾರ ಮಾಡಲಾಗುತ್ತಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ. ಅಗಲಿದ ನಟನಿಗೆ ಸೆಲೆಬ್ರಿಟಿಗಳು ಸಂತಾಪ ಸೂಚಿಸಿದ್ದಾರೆ.

ಇದನ್ನೂ ಓದಿ | Sanjay Chouhan | `ಪಾನ್ ಸಿಂಗ್ ತೋಮರ್’ ಸಿನಿಮಾದ ಖ್ಯಾತ ಚಿತ್ರಕಥೆಗಾರ ಸಂಜಯ್ ಚೌಹಾಣ್ ವಿಧಿವಶ

Exit mobile version