Site icon Vistara News

Actor Diganth : ಎಡಗೈ ಬಳಸುವವರರಿಗಾಗಿ ಹೊಸ ಹೆಲ್ಮೆಟ್ ಲಾಂಚ್; ಇದು ಸಿನಿಮಾ ಇಂಪ್ಯಾಕ್ಟ್‌!

Actor Diganth movie

ಬೆಂಗಳೂರು: ಬಲಗೈಯವರ ಪ್ರಾಬಲ್ಯವಿರುವ ಜಗತ್ತಿನಲ್ಲಿ ಪ್ರತಿ ಆಗಸ್ಟ್ 13ರಂದು ಅಂತಾರಾಷ್ಟ್ರೀಯ ಎಡಗೈಯವರ ದಿನವನ್ನು ಆಚರಿಸಲಾಗುತ್ತದೆ. ಇದೇ ಎಡಗೈ ಬಳಸುವವರ ಸುತ್ತ ಕನ್ನಡದಲ್ಲಿ ಸಿನಿಮಾವೊಂದು ತಯಾರಾಗುತ್ತಿರುವುದು ಗೊತ್ತೇ ಇದೆ. ʻಅದೇ ಎಡಗೈ ಅಪಘಾತಕ್ಕೆ ಕಾರಣʼ. ದೂದ್ ಪೇಡಾ ದಿಗಂತ್ (Diganth Manchale) ನಾಯಕನಾಗಿ (Actor Diganth) ನಟಿಸುತ್ತಿರುವ ಈ ಚಿತ್ರದ ಕಾನ್ಸೆಪ್ಟ್‌ ʻವೇಗʼ ಹೆಲ್ಮೆಟ್ ಕಂಪನಿಯವರಿಗೆ ಬಹಳ ಇಷ್ಟವಾಗಿದೆ. ಹೀಗಾಗಿ ಸಿನಿಮಾಗೆ ‘ವೇಗ’ ಹೆಲ್ಮೆಟ್ ಕಂಪನಿ ಸಾಥ್ ಕೊಟ್ಟಿದೆ. ಇದೇ ಆಗಸ್ಟ್ 13ರಂದು ಅಂತಾರಾಷ್ಟ್ರೀಯ ಎಡಗೈ ದಿನದಂದು ʻವೇಗ ಹೆಲ್ಮೆಟ್ ಕಂಪನಿʼ ಎಗಡೈ ಬಳಸುವವರರಿಗಾಗಿ ಹೊಸ ಹೆಲ್ಮೆಟ್ ಲಾಂಚ್ ಮಾಡುತ್ತಿದೆ.

ಎಡಗೈ ಬಳಸುವವರಿಗೆ ಹೊಸ ಹೆಲ್ಮೆಟ್

ಕನ್ನಡ ಸಿನಿಮಾಗಳ ಮಾರುಕಟ್ಟೆ ಈಗ ವಿಸ್ತರಿಸಿದೆ. ವಿಭಿನ್ನ ಬಗೆಯ ಕಥಾಹಂದರದ ಕನ್ನಡ ಚಿತ್ರಗಳು ಈಗ ವಿಶ್ವಮಟ್ಟದಲ್ಲಿ ಸದ್ದು ಮಾಡುತ್ತಿದೆ. ಅದರಂತೆ ʻಎಡಗೈ ಅಪಘಾತ ಕಾರಣʼ ಸಿನಿಮಾದ ಐಡಿಯಾ, ಕಾನ್ಸೆಪ್ಟ್ ವೇಗ ಹೆಲ್ಮೆಟ್ ಕಂಪನಿಯರನ್ನು ತಲುಪಿದೆ. ..ಎಡಗೈ ಅಪಘಾತಕ್ಕೆ ಕಾರಣ ಸಿನಿಮಾ ತಂಡದ ಜತೆ ವೇಗ ಹೆಲ್ಮೆಟ್ ಕಂಪನಿ ಕೈ ಜೋಡಿಸಿದ್ದಾರೆ. ಎಡಗೈ ಬಳಸುವವರಿಗೆ ಹೊಸ ಹೆಲ್ಮೆಟ್ ಪರಿಚಯಿಸುತ್ತಿದೆ. ʻʻದೊಡ್ಡ ದೊಡ್ಡ ಕಂಪನಿಗಳು ಕೂಡ ಕನ್ನಡ ಚಿತ್ರರಂಗದ ಈ ರೀತಿಯ ವಿಶೇಷ ಕಾನ್ಸೆಪ್ಟ್​ಗಳನ್ನು ಗಮನಿಸುತ್ತಿವೆ. ಹೆಲ್ಮೆಟ್​ ವಿಚಾರದಲ್ಲಿ ಇಂಥ ಪ್ರಯತ್ನ ಆಗಿರುವುದು ಇದೇ ಮೊದಲು’ʼ ಎಂದಿದ್ದಾರೆ ನಿರ್ಮಾಪಕ ಗುರುದತ್​ ಗಾಣಿಗ.

ಇದನ್ನೂ ಓದಿ: ಎಡಗೈಯೇ ಅಪಘಾತಕ್ಕೆ ಕಾರಣ| ದಿಗಂತ್ ನಟನೆಯ ಹೊಸ ಚಿತ್ರದ ಚಿತ್ರೀಕರಣ ಇಂದಿನಿಂದ ಶುರು

ಸಮರ್ಥ್ ಬಿ ಕಡಕೊಳ್ ಎಡಗೈ ಅಪಘಾತಕ್ಕೆ ಕಾರಣ ಸಿನಿಮಾಗೆ ಆಕ್ಷನ್ ಕಟ್ ಹೇಳಿದ್ದು, ಇದು ಇವರ ಚೊಚ್ಚಲ ನಿರ್ದೇಶನದ ಚಿತ್ರವಾಗಿದೆ. ಮರ್ಡರ್ ಮಿಸ್ಟರಿ, ಡಾರ್ಕ್ ಕಾಮಿಡಿ ಹಾಗೂ ಸಸ್ಪೆನ್ಸ್ ಥ್ರಿಲ್ಲರ್ ಸಬ್ಜೆಕ್ಟ್ ಒಳಗೊಂಡ ಕಥಾಹಂದರ ಚಿತ್ರದಲ್ಲಿದೆ. ಹೆಸರೇ ಹೇಳುವಂತೆ ಎಡಗೈ ಬಳಸುವವರ ಸಮಸ್ಯೆಗಳ ಸುತ್ತ ಹೆಣೆದ ಚಿತ್ರವಿದು.

ಇದನ್ನೂ ಓದಿ: Diganth | ಎಡಗೈಯೇ ಅಪಘಾತಕ್ಕೆ ಕಾರಣ ಸಿನಿಮಾಗೆ ಮತ್ತೆ ಒಂದಾದ ಪಂಚರಂಗಿ ಜೋಡಿ

ಚಿತ್ರದಲ್ಲಿ ದಿಗಂತ್ ಜೋಡಿಯಾಗಿ ನವನಟಿ ಧನು ಹರ್ಷ ನಟಿಸಲಿದ್ದಾರೆ. ರಾಧಿಕಾ ನಾರಾಯಣ್, ನಿಧಿ ಸುಬ್ಬಯ್ಯ ಕೂಡ ಚಿತ್ರದ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ. ಹೈಫನ್ ಪಿಕ್ಚರ್ಸ್ ಬ್ಯಾನರ್‌ನಡಿ ಗುರುದತ್ ಗಾಣಿಗ ಹಾಗೂ ನಿರ್ದೇಶಕ ಸಮರ್ಥ್ ಬಿ ಕಡಕೊಳ್ ಚಿತ್ರವನ್ನು ಜಂಟಿಯಾಗಿ ನಿರ್ಮಾಣ ಮಾಡುತ್ತಿದ್ದಾರೆ. ಭಜರಂಗಿ ಲೋಕಿ, ಕೃಷ್ಣ ಹೆಬ್ಬಾಳ್ ಚಿತ್ರದ ತಾರಾಗಣದಲ್ಲಿದ್ದಾರೆ. ಅಭಿಮನ್ಯು ಸದಾನಂದ್ ಕ್ಯಾಮೆರಾ ವರ್ಕ್, ರಾಹುಲ್ ವಿ ಪಾರ್ವತಿಕರ್ ಹಾಗೂ ಶ್ರೀಪಾದ್ ಜೋಶಿ ಸಂಭಾಷಣೆ ಸಿನಿಮಾಗಿದೆ.

Exit mobile version