Site icon Vistara News

Actor Dwarakish: ಹಿರಿಯ ನಟ ದ್ವಾರಕೀಶ್‌ ಸಾವಿನ ಬಗ್ಗೆ ಅಪಪ್ರಚಾರ: ಸ್ಪಷ್ಟನೆ ಕೊಟ್ಟ ನಟ

Actor Dwarakish clarification to his death News

ಬೆಂಗಳೂರು: ಚಂದನವನದ ಹಿರಿಯ ನಟ, ನಿರ್ದೇಶಕ ದ್ವಾರಕೀಶ್ (Actor Dwarakish) ಆರೋಗ್ಯದ ಬಗ್ಗೆ ಇಲ್ಲ ಸಲ್ಲದ ಊಹಾಪೋಹಗಳಿಗೆ ಸ್ಪಷ್ಟನೆ ನೀಡಿದ್ದಾರೆ. ಕಿಡಿಗೇಡಿಗಳು ದ್ವಾರಕೀಶ್ ಅವರು ನಿಧನ ಹೊಂದಿದ್ದಾರೆ ಎಂದು ಸುಳ್ಳು ಸುದ್ದಿಯನ್ನು ಹಬ್ಬಿಸಿದ್ದರು. ಇದೀಗ ನಟ ವಿಡಿಯೊ ಮೂಲಕ “ನಾನು ಚೆನ್ನಾಗಿದ್ದೇನೆ. ನಿಮ್ಮ ಆಶೀರ್ವಾದ ಇರುವ ತನಕ ನನಗೆ ಏನು ಆಗುವುದಿಲ್ಲ” ಎಂದು ಹೇಳಿದ್ದಾರೆ.

ಕನ್ನಡದ ನಟ, ನಿರ್ದೇಶಕ ಮತ್ತು ನಿರ್ಮಾಪಕ ದ್ವಾರಕೀಶ್‌ ನಿಧನ ಹೊಂದಿದ್ದಾರೆ ಎಂದು ಕೆಲವು ದಿನಗಳ ಹಿಂದೆ ಸುದ್ದಿಗಳು ಹರಿದಾಡುತ್ತಿದ್ದವು. ಈ ಬಗ್ಗೆ ಸ್ವತಃ ದ್ವಾರಕೀಶ್‌ ಅವರೇ ವಿಡಿಯೊ ಮೂಲಕ ಸ್ಪಷ್ಟನೆ ಕೊಟ್ಟಿದ್ದಾರೆ. ʻʻಎಲ್ಲರಿಗೂ ನಮಸ್ಕಾರ. ನಾನು ದ್ವಾರಕೀಶ್‌. ನೀವು ಸಾಕಿದ ದ್ವಾರಕೀಶ್‌. ಚೆನ್ನಾಗಿದ್ದೀನಿ. ನಿಮ್ಮ ಆಶೀರ್ವಾದ ಬೇಕು. ಗಟ್ಟಿ ಮುಟ್ಟಾಗಿದ್ದೀನಿ. ಯಾವುದೇ ಚಿಂತೆಯಿಲ್ಲ. ನಗುನಗುತ್ತ ಇದ್ದೀನಿ. ನಿಮ್ಮ ವಿಶ್ವಾಸ ಪ್ರೀತಿ ಇದೇ ರೀತಿಯಲ್ಲಿ ಇರಲಿʼʼಎಂದು ವಿಡಿಯೊ ಮೂಲಕ ಹೇಳಿಕೊಂಡಿದ್ದಾರೆ. ಕೆಲ ತಿಂಗಳ ಹಿಂದೆ ಅವರ ಆರೋಗ್ಯದಲ್ಲಿ ಏರುಪೇರಾಗಿತ್ತು. ಸೂಕ್ತ ಚಿಕಿತ್ಸೆಯನ್ನೂ ಪಡೆದ ಆರೋಗ್ಯವಾಗಿದ್ದಾರೆ.

ಇದನ್ನೂ ಓದಿ: Vinod Raj: ಅಣ್ಣಾವ್ರ ಮಗ ವಿನೋದ್‌ ರಾಜ್‌ ಎಂಬ ಗಾಸಿಪ್‌ ಹುಟ್ಟಿದ್ದೇ ದ್ವಾರಕೀಶ್‌ರಿಂದ: ಪ್ರಕಾಶ್‌ ರಾಜ್ ಮೇಹು

ಕನ್ನಡದ ಪ್ರಮುಖ ನಟರಾದ ವಿಷ್ಣುವರ್ಧನ್ ಮತ್ತು ದ್ವಾರಕೀಶ್ ಜೋಡಿ ಕಳ್ಳ-ಕುಳ್ಳ ಜೋಡಿ ಎಂದು ಪ್ರಸಿದ್ಧವಾಗಿತ್ತು. ‘ದ್ವಾರಕೀಶ್​ ಚಿತ್ರ’ ನಿರ್ಮಾಣ ಸಂಸ್ಥೆ ಮೂಲಕ ಅವರು ಹಲವಾರು ಸಿನಿಮಾಗಳನ್ನು ನಿರ್ಮಿಸಿದ್ದಾರೆ. 

Exit mobile version