Site icon Vistara News

Actor Irrfan Khan | ನಟ ಇರ್ಫಾನ್​ ಖಾನ್‌ ಹಳೆಯ ಮಾತನ್ನು ನೆನಪಿಸಿಕೊಂಡ ಅನುಷ್ಕಾ ಶರ್ಮಾ

Actor Irrfan Khan

ಬೆಂಗಳೂರು : ನಟ ಇರ್ಫಾನ್​ ಖಾನ್​ (Actor Irrfan Khan) ಹಿಂದಿ ಸಿನಿಮಾಗಳಲ್ಲಿ ನಟಿಸಿ ಜನಮನ ಗೆದ್ದಿದ್ದಾರೆ. ಜನವರಿ 7 ಅವರ ಜನ್ಮದಿನ. ಅನುಷ್ಕಾ ಶರ್ಮಾ ಅವರು ಇರ್ಫಾನ್​ ಖಾನ್‌ರವರ ಹಳೆಯ ಮಾತನ್ನು ನೆನಪಿಸಿಕೊಂಡು ಪೋಸ್ಟ್‌ ಶೇರ್‌ ಮಾಡಿದ್ದಾರೆ.

2020ರಲ್ಲಿ ಬಾಲಿವುಡ್‌ ನಟ ಇರ್ಫಾನ್ ಖಾನ್ ಅವರ ಅಕಾಲಿಕ ಮರಣದಿಂದ ಇಡೀ ಬಾಲಿವುಡ್‌ ಕಂಬನಿ ಮಿಡಿದಿತ್ತು. ನಟನಾ ಕೌಶಲ್ಯಕ್ಕೆ ಹೆಸರು ವಾಸಿಯಾಗಿದ್ದದ ಇರ್ಫಾನ್​ ಖಾನ್ ಪ್ರೇಕ್ಷಕರಿಂದ ಮಾತ್ರವಲ್ಲದೇ ಇಡೀ ಬಾಲಿವುಡ್‌ ಚಿತ್ರರಂಗದಿಂದ ಗೌರವವನ್ನು ಸಂಪಾದಿಸಿದ್ದರು. ಅವರನ್ನು ನೆನೆದು ಅನುಷ್ಕಾ ಶರ್ಮಾ ಅವರ ಹಳೆಯ ಮಾತನ್ನು ನೆನಪಿಸಿಕೊಂಡಿದ್ದಾರೆ. ʻʻಖ್ಯಾತಿ ಬಯಸುವುದು ಒಂದು ಕಾಯಿಲೆ. ಒಂದು ದಿನ ನಾನು ಈ ಕಾಯಿಲೆಯಿಂದ ಮುಕ್ತನಾಗಲು ಬಯಸುತ್ತೇನೆ. ಅಲ್ಲಿ ಖ್ಯಾತಿ ಮುಖ್ಯವಲ್ಲ. ಅಲ್ಲಿ ಕೇವಲ ಜೀವನವನ್ನು ಅನುಭವಿಸುವುದು ಮತ್ತು ಸರಿಯಾಗಿರುವುದು ಮುಖ್ಯ” ಎಂಬ ಅವರ ಮಾತಿನ ಪೋಸ್ಟ್ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ | Suniel Shetty | ʻಬಾಲಿವುಡ್‌ ಬಾಯ್ಕಾಟ್‌ ಟ್ರೆಂಡ್‌ʼ ತೆಗೆದು ಹಾಕುವಂತೆ ಸಹಾಯ ಕೋರಿದ ಸುನೀಲ್‌ ಶೆಟ್ಟಿ

2018ರಲ್ಲಿ ಇರ್ಫಾನ್​ ಖಾನ್ ಅವರಿಗೆ ಕ್ಯಾನ್ಸರ್​ ಇರುವ ವಿಷಯ ತಿಳಿಯಿತು. ಆ ಸುದ್ದಿ ಹೊರಬಿದ್ದಾಗ ಅಭಿಮಾನಿಗಳಿಗೆ ಆಘಾತ ಆಯಿತು. ಬಳಿಕ ಅವರು ಚಿಕಿತ್ಸೆಗಾಗಿ ಇಂಗ್ಲೆಂಡ್​ಗೆ ತೆರಳಿದರು. 2019ರ ಫೆಬ್ರವರಿಯಲ್ಲಿ ಭಾರತಕ್ಕೆ ಮರಳಿದರು. ಇನ್ನೇನು ಗುಣಮುಖರಾಗುತ್ತಾರೆ ಎಂದೇ ಅಭಿಮಾನಿಗಳು ಭಾವಿಸಿದ್ದರು. ಆದರೆ ಆಗಿದ್ದೇ ಬೇರೆ. ಅಂತಿಮವಾಗಿ ಇರ್ಫಾನ್​ ಖಾನ್​ ಅವರನ್ನು ಕಳೆದುಕೊಳ್ಳಬೇಕಾಯಿತು.

ಇದನ್ನೂ ಓದಿ | ಹೊಸ ವರ್ಷ ಆಚರಣೆಗಾಗಿ ಮುಂಬಯಿ ಬಿಟ್ಟು ಹೋಗಿದ್ದ ಬಾಲಿವುಡ್​ ನಟ-ನಟಿಯರು ವಾಪಸ್​; ಇಲ್ಲಿವೆ ಏರ್​ಪೋರ್ಟ್​ ವಿಡಿಯೊಗಳು

Exit mobile version