Site icon Vistara News

Actor Jaggesh: ಕಿರುತೆರೆಯಲ್ಲಿ ಮೋಡಿ ಮಾಡಲು ಬರ್ತಾ ಇದೆ ʻರಾಘವೇಂದ್ರ ಸ್ಟೋರ್ಸ್‌ʼ ಸಿನಿಮಾ!

Jaggesh shweta srivastava

ಬೆಂಗಳೂರು: ನವರಸ ನಾಯಕ ಜಗ್ಗೇಶ್‌ (Actor Jaggesh) ನಟನೆ ಹಾಗೂ ಹೊಂಬಾಳೆ ಸಂಸ್ಥೆ (Hombale Films) ನಿರ್ಮಾಣದ ʻರಾಘವೇಂದ್ರ ಸ್ಟೋರ್ಸ್‌ʼ ಸಿನಿಮಾ ಒಟಿಟಿಗೆ ಈಗಾಗಲೇ ಬಂದಿದೆ. ಇದೀಗ ಈ ಸಿನಿಮಾ ಕಿರುತೆರೆಯ ವೀಕ್ಷಕರಿಗಾಗಿ ಪ್ರಸಾರವಾಗಲು ಸಜ್ಜಾಗಿದೆ. ʻರಾಘವೇಂದ್ರ ಸ್ಟೋರ್ಸ್’ ಸ್ಟಾರ್‌ ಸುವರ್ಣದಲ್ಲಿ ಜುಲೈ 23ರಂದು ಸಂಜೆ 6.30ಕ್ಕೆ ಪ್ರಸಾರ ಆಗಲಿದೆ.

ಸಿನಿಮಾ ರಿಲೀಸ್‌ ಆದ 20 ದಿನಕ್ಕೆ ಸಿನಿಮಾ ಒಟಿಟಿಗೆ ಬಂದಿರುವುದು ಸಿನಿಪ್ರಿಯರಲ್ಲಿ ಅಚ್ಚರಿ ಮೂಡಿಸಿತ್ತು. ಸಂತೋಷ್ ಆನಂದ್ ರಾಮ್ ನಿರ್ದೇಶನ, ಜಗ್ಗಣ್ಣನ ಅಭಿನಯಕ್ಕೆ ಸಿನಿರಸಿಕರು ಖುಷಿ ಪಟ್ಟಿದ್ದಾರೆ. ಹಾಸ್ಯಭರಿತವಾಗಿರುವ ಈ ಸಿನಿಮಾದಲ್ಲಿ ಜಗ್ಗೇಶ್‌ ಅವರು 40 ವರ್ಷ ದಾಟಿದರೂ ಇನ್ನೂ ಮದುವೆಯಾಗದ ಅಡುಗೆ ಭಟ್ಟನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರದಲ್ಲಿ ರವಿಶಂಕರ್‌ ಗೌಡ ಮತ್ತು ನಟಿ ಶ್ವೇತಾ ಶ್ರೀವಾಸ್ತವ್‌ ಅಭಿನಯಿಸಿದ್ದಾರೆ. ಮಲ್ಟಿಪ್ಲೆಕ್ಸ್‌ಗಳಲ್ಲಿ ಸಿನಿಮಾ ಯಶಸ್ವಿಯಾಗಿ ಪ್ರದರ್ಶನ ಕಂಡಿತ್ತು.

ಇದನ್ನೂ ಓದಿ: Actor Jaggesh: ಸದ್ದಿಲ್ಲದೇ ಒಟಿಟಿಗೆ ಬಂತು ʻರಾಘವೇಂದ್ರ ಸ್ಟೋರ್ಸ್‌ʼ ಸಿನಿಮಾ!

ಈ ಸಿನಿಮಾ ಕಳೆದ ವರ್ಷ ಆಗಸ್ಟ್‌ 5ರಂದೇ ಬಿಡುಗಡೆಯಾಗಬೇಕಿತ್ತು. ವರಮಹಾಲಕ್ಷ್ಮೀ ಹಬ್ಬವಾದ ಅಂದೇ ಸಿನಿಮಾ ಬಿಡುಗಡೆ ಮಾಡಲು ಮುಂದಾಗಿದ್ದ ಸಿನಿ ತಂಡ ಕಾರಣಾಂತರಗಳಿಂದ ಸಿನಿಮಾ ಬಿಡುಗಡೆ ದಿನಾಂಕವನ್ನು ಮುಂದೂಡಿತು. ಮಂಜುನಾಥ ಸ್ಟೋರ್ಸ್‌ ಸಿನಿಮಾಕ್ಕೆ ಅಜನೀಶ್‌ ಲೋಕನಾಥ ಅವರ ಸಂಗೀತವಿದೆ. ಅಂದ ಹಾಗೆ ಇದು ಹೊಂಬಾಳೆ ಫಿಲ್ಮ್ಸ್‌ ಅವರ 12ನೇ ಸಿನಿಮಾವಾಗಿದೆ.

Exit mobile version