Site icon Vistara News

Actor Jaggesh: ವಿಮಾನದಲ್ಲಿ ಜಗ್ಗೇಶ್‌ಗೆ ಪಾದದ ಮೂಳೆ ಮುರಿತ; 6 ವಾರ ದಿಗ್ಬಂಧನ!

Actor Jaggesh

ಬೆಂಗಳೂರು; ನವರಸ ನಾಯಕ ಜಗ್ಗೇಶ್ (Actor Jaggesh) ಕಾಲು ಮುರಿದುಕೊಂಡು ಚಿಕಿತ್ಸೆ ಪಡೆದುಕೊಂಡಿರುವ ಫೋಟೊವನ್ನು ಟ್ವಿಟರ್‌ನಲ್ಲಿ ಶೇರ್‌ ಮಾಡಿಕೊಂಡಿದ್ದಾರೆ. ʻʻಸಣ್ಣ ಅಚಾತುರ್ಯ ನಡಿಗೆಯಿಂದಾಗಿ ಕಾಲು ಮುರಿದುಕೊಂಡಿದ್ದೇನೆ. ಪಾದದ ಮೂಳೆ ಮುರಿದಿದೆ. ಆರು ವಾರಗಳ ಕಾಲ ದಿಗ್ಬಂಧನ’ ಎಂದು ಬರೆದುಕೊಂಡಿದ್ದಾರೆ. ರಾಘವೇಂದ್ರ ಸ್ಟೋರ್ಸ್ (Raghavendra Stores) ಸಿನಿಮಾ ಬಿಡುಗಡೆ ಬಳಿಕ ಅಮೆರಿಕಕ್ಕೆ ಹಾರಿ ಆರಾಮವಾಗಿ ಕಾಲ ಕಳೆದಿದ್ದ ನಟ ಜಗ್ಗೇಶ್ (Jaggesh) ಕೆಲ ದಿನಗಳ ಹಿಂದಷ್ಟೆ ಭಾರತಕ್ಕೆ ಮರಳಿದ್ದರು.

ವೈದ್ಯರು ಸಲಹೆಯಂತೆ ವಿಶ್ರಾಂತಿ ಪಡೆದುಕೊಳ್ಳಿ. ಬೇಗ ಕಾಲು ಗುಣಮುಖವಾಗಲಿ ಎಂದು ಅವರ ಅಭಿಮಾನಿಗಳು ಹಾರೈಸಿದ್ದಾರೆ. ನೆಚ್ಚಿನ ನಟನ ಆರೋಗ್ಯದ ಬಗ್ಗೆ ಕಾಳಜಿ ವಹಿಸಿದ್ದಾರೆ. ಆದರೆ ಜಗ್ಗೇಶ್​ ಕಾಲಿಗೆ ಪೆಟ್ಟಾಗಿರುವ ಬಗ್ಗೆ ಮತ್ತೊಂದು ಸುದ್ದಿ ಸಹ ಹರಿದಾಡುತ್ತಿದೆ. ಇತ್ತೀಚೆಗೆ ಅಮೆರಿಕಕ್ಕೆ ಹೋಗಿದ್ದ ಜಗ್ಗೇಶ್ ಅಲ್ಲಿಂದ ವಾಪಸ್ ಬರುವಾಗ ವಿಮಾನದಲ್ಲಿ ಆದ ಘಟನೆಯಿಂದ ಕಾಲಿಗೆ ಪೆಟ್ಟು ಮಾಡಿಕೊಂಡಿದ್ದಾರೆ ಎನ್ನಲಾಗುತ್ತಿದೆ. ವಿಮಾನ ಬೆಂಗಳೂರಿನಲ್ಲಿ ಭೂ ಸ್ಪರ್ಷ ಮಾಡುವ ಮುನ್ನ ಜರ್ಕ್ ಹೊಡೆದಿದ್ದರಿಂದ ಜಗ್ಗೇಶ್ ಕಾಲಿಗೆ ಪೆಟ್ಟಾಗಿದೆ ಎನ್ನಲಾಗುತ್ತಿದೆ.

ಇದನ್ನೂ ಓದಿ: Bangalore Rain: ಜಗ್ಗೇಶ್‌ಗೂ ತಟ್ಟಿದ ಮಳೆ ಅವಾಂತರ, ಕಾರು ಮುಳುಗಡೆ

ಜಗ್ಗೇಶ್‌ ಪೋಸ್ಟ್‌

ಜಗ್ಗೇಶ್ ಮಾತ್ರವೇ ಅಲ್ಲದೆ ಅದೇ ವಿಮಾನದಲ್ಲಿದ್ದ ಇನ್ನೂ ಕೆಲವು ಪ್ರಯಾಣಿಕರಿಗೂ ಪೆಟ್ಟಾಗಿದೆ. ಗಗನ ಸಖಿಯರಿಬ್ಬರಿಗೂ ಪೆಟ್ಟಾಗಿದೆ ಎನ್ನಲಾಗುತ್ತಿದೆ. ಈ ಬಗ್ಗೆ ಸ್ಪಷ್ಟ ಮಾಹಿತಿ ಇನ್ನಷ್ಟೆ ಸಿಗಬೇಕಿದೆ. ಆದರೆ ಅಮೆರಿಕದಿಂದ ಮರಳಿದ ಮೇಲೆ ಜಗ್ಗೇಶ್ ಅವರು ಪತ್ನಿ ಪರಿಮಳ ಜಗ್ಗೇಶ್ ಜತಗೆ ನೂತನ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿಯಾಗಿ ಅವರಿಗೆ ಶುಭ ಹಾರೈಸಿದ್ದರು.

Exit mobile version