Site icon Vistara News

Actor Jaggesh | ಜಗ್ಗೇಶ್‌ ನಟನೆಯ ʻರಾಘವೇಂದ್ರ ಸ್ಟೋರ್ಸ್‌ʼ ರಿಲೀಸ್ ಬಗ್ಗೆ ಸಂತೋಷ್‌ ಆನಂದ್‌ರಾಮ್ ಹೇಳಿದ್ದೇನು?

Actor Jaggesh

ಬೆಂಗಳೂರು: ನವರಸ ನಾಯಕ ಜಗ್ಗೇಶ್ (Actor Jaggesh ) ನಟನೆಯ ‘ರಾಘವೇಂದ್ರ ಸ್ಟೋರ್ಸ್’ ಸಿನಿಮಾ ರಿಲೀಸ್‌ ಯಾವಾಗ ಎಂದು ಜಗ್ಗೇಶ್‌ ಅಭಿಮಾನಿಗಳು ಸೋಷಿಯಲ್‌ ಮೀಡಿಯಾದಲ್ಲಿ ಕೇಳುತ್ತಿದ್ದರು. ಜಗ್ಗೇಶ್ ಅಭಿಮಾನಿಗಳು ಕಾತರದಿಂದ ಕಾಯುತ್ತಿರುವ ಸಿನಿಮಾ ಹೊಂಬಾಳೆ ಸಂಸ್ಥೆ ನಿರ್ಮಾಣದ ‘ರಾಘವೇಂದ್ರ ಸ್ಟೋರ್ಸ್’ (Raghavendra Stores) ವರಲಕ್ಷ್ಮೀ ಹಬ್ಬದ ಸಮಯದಲ್ಲಿ ‘ರಿಲೀಸ್ ಆಗಬೇಕಿತ್ತು. 

ʻರಾಘವೇಂದ್ರ ಸ್ಟೋರ್ಸ್’ ಸಿನಿಮಾ ಮುಂದಿನ ವರ್ಷ ಬಿಡುಗಡೆ ಆಗುತ್ತದೆ. ಬಹಳ ತುಂಟತನ, ಮಜಾ ಇರುವಂತಹ ಈ ಸಿನಿಮಾ ಒಂದಷ್ಟು ಮೌಲ್ಯಗಳನ್ನು ಹೊತ್ತು ಬರಲಿದೆ ಎಂದು ಸಂತೋಷ್ ಆನಂದ್‌ರಾಮ್ ಟ್ವೀಟ್ ಮೂಲಕ ಸ್ಪಷ್ಟನೆ ಕೊಟ್ಟಿದ್ದಾರೆ. ಕೆಜಿಎಫ್‌ಗೆ ಬಂಡವಾಳ ಹೂಡಿದ್ದ ಹೊಂಬಾಳೆ ಫಿಲ್ಮ್ಸ್‌ ಈ ಹಿಂದೆ ಸಂತೋಷ್‌ ಆನಂದ್‌ ರಾಮ್‌ ನಿರ್ದೇಶನದ ರಾಜಕುಮಾರ ಹಾಗೂ ಯುವರತ್ನವನ್ನು ಕೂಡ ನಿರ್ಮಾಣ ಮಾಡಿತ್ತು. ಇದೀಗ ರಾಘವೇಂದ್ರ ಸ್ಟೋರ್ಸ್‌ ಸಿನಿಮಾವನ್ನು ನಿರ್ಮಾಣ ಮಾಡಿದೆ.

ಇದನ್ನೂ ಓದಿ | Hombale Films | ಬಾಲಿವುಡ್‌ ನಟ ಶಾರುಖ್‌ ಖಾನ್‌ ಸಿನಿಮಾ ನಿರ್ಮಾಣ ಮಾಡಲಿದೆಯಂತೆ ಹೊಂಬಾಳೆ ಫಿಲ್ಮ್ಸ್‌!

ರಾಘವೇಂದ್ರ ಸ್ಟೋರ್ಸ್‌ ಹಾಸ್ಯಾಧಾರಿತ ಸಿನಿಮಾ ಆಗಿದ್ದು, ಇದರಲ್ಲಿ ಜಗ್ಗೇಶ್‌ 40 ವರ್ಷ ಪ್ರಾಯ ದಾಟಿದರೂ ಮದುವೆಯಾಗದ ಅಡುಗೆ ಭಟ್ಟರ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ತಮ್ಮ ಮ್ಯಾನರಿಸಂ, ನಟನೆ ಹಾಗೂ ಡೈಲಾಗ್‌ಗಳ ಮೂಲಕ ಸಿನಿಪ್ರಿಯರಿಗೆ ಕಚಗುಳಿ ಇಡಲು ಸಿದ್ಧರಾಗಿದ್ದಾರೆ. ರಾಘವೇಂದ್ರ ಸ್ಟೋರ್ಸ್‌ ಹೊಂಬಾಳೆ ಫಿಲ್ಮ್ಸ್‌ನ 12ನೇ ಸಿನಿಮಾ ಆಗಿದೆ.

ಇದನ್ನೂ ಓದಿ | Keerthy Suresh | ತಮಿಳಿಗೆ ಹೊಂಬಾಳೆ ಫಿಲ್ಮ್ಸ್‌: ಕೀರ್ತಿ ಸುರೇಶ್ ಅಭಿನಯದಲ್ಲಿ ‘ರಘು ತಾತಾ’ ಚಿತ್ರ ನಿರ್ಮಾಣ ಶುರು

Exit mobile version