Site icon Vistara News

“ಬಡ್ಡೀಸ್‌ʼ ಚಿತ್ರ ತಂಡದ ವಾಹನದ ಮೇಲೆ ಉರುಳಿದ ವಿದ್ಯುತ್‌ ಕಂಬ

ಕಿರಣ್ ರಾಜ್

ಬೆಂಗಳೂರು : ಕಿರುತೆರೆಯ “ಕನ್ನಡತಿʼ ಧಾರಾವಾಹಿ ಖ್ಯಾತಿಯ ನಟ ಕಿರಣ್ ರಾಜ್‌ ಅವರ ಚಿತ್ರತಂಡ ಅಪಘಾತದಲ್ಲಿ ಅಪಾಯದಿಂದ ಪಾರಾಗಿದೆ. ವಿದ್ಯುತ್‌ ಕಂಬ ಪ್ರಮೋಷನ್‌ ಗಾಡಿ ಮೇಲೆ ಬಿದ್ದಿತ್ತು.

ಮೂಡಲಗಿಯ ಗೋಕಾಕ್‌ನಲ್ಲಿ “ಬಡ್ಡೀಸ್‌ʼ ಚಿತ್ರದ ಪ್ರಮೋಷನ್‌ ಮುಗಿಸಿಕೊಂಡು ಬೆಳಗಾವಿ ಮಾರ್ಗವಾಗಿ ಹೋಗುವಾಗ ಇದ್ದಕ್ಕಿದ್ದಂತೆ ವಿದ್ಯುತ್‌ ಕಂಬ ಪ್ರಮೋಷನ್‌ ವಾಹನದ ಮೇಲೆ ಬಿತ್ತು. ಟೀ ಬ್ರೇಕ್‌ಗೆಂದು ಪ್ರಮೋಷನ್‌ ವಾಹನದ ಹುಡುಗರು ವಿರಾಮ ತೆಗೆದುಕೊಂಡಿದ್ದರಿಂದ ಅದೃಷ್ಟವಶಾತ್‌ ಪಾರಾದರು. ಯಾರೂ ಗಾಡಿಯಲ್ಲಾಗಲಿ, ಪಕ್ಕದಲ್ಲಾಗಲಿ ಇರಲಿಲ್ಲ.

ಕಿರಣ್ ರಾಜ್

ಇದನ್ನೂ ಓದಿ | Buddies : ಕಿರುತೆರೆ ನಟ ಕಿರಣ್‌ರಾಜ್ ಈಗ ಸ್ಯಾಂಡಲ್‌ವುಡ್‌ಗೆ

ಹುಬ್ಬಳ್ಳಿಯಲ್ಲಿ ಈ ಘಟನೆ ನಡೆದಿದೆ. ವಿದ್ಯುತ್ ಕಂಬ ವಾಹನದ ಮೇಲೆ ಬಿದ್ದಿರುವುದರಿಂದ ವಾಹನ ಜಖಂಗೊಂಡಿದೆ.

ಈ ಘಟನೆಯಲ್ಲಿ ಯಾರಿಗೂ ಅಪಾಯವಾಗಿಲ್ಲ ಎಂದು ನಟ ಕಿರಣ್‌ ರಾಜ್ ಪೋಸ್ಟ್‌ ಮಾಡಿದ್ದಾರೆ.

“ಹಾಯ್ ಎಲ್ಲರಿಗೂ ನಮಸ್ಕಾರ. ಈ ದಿನ ಕೆಲವು ಕಾಲೇಜುಗಳಿಗೆ ಹೋಗುವುದಿತ್ತು. ಈ ಘಟನೆಯ ಹಿನ್ನೆಲೆಯಲ್ಲಿ ಕೊನೆಯ ಕ್ಷಣದಲ್ಲಿ ನಮ್ಮ ಪ್ಲಾನ್ ಬದಲಿಸಬೇಕಾಯಿತು. ದೇವರ ದಯೆಯಿಂದ ನಮ್ ಟೀಮ್‌ಗೆ ಏನೂ ಆಗಲಿಲ್ಲ. ಎಲ್ಲರೂ ಕ್ಷೇಮವಾಗಿ ಇದ್ದಾರೆ. ಸಿನಿಮಾ ಬಿಡುಗಡೆಯ ನಂತರ theater Visitಗೆ ಬಂದಾಗ ತಮ್ಮೆಲ್ಲರನ್ನೂ ಖಂಡಿತ ಮಿಸ್ ಮಾಡ್ದೆ ಮೀಟ್ ಮಾಡ್ತೀವಿ, ದಯಮಾಡಿ ಕ್ಷಮೆ ಇರಲಿʼ ಎಂದವರು ಪೋಸ್ಟ್‌ ಹಂಚಿಕೊಂಡಿದ್ದಾರೆ.

ಭಾರತಿ ಶೆಟ್ಟಿ ನಿರ್ಮಾಣದ “ಬಡ್ಡೀಸ್ʼ ಸಿನಿಮಾ ಜೂ.24ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ. ಕಿರಣ್‌ಗೆ ನಾಯಕಿಯಾಗಿ ಸಿರಿ ಪ್ರಹ್ಲಾದ್ ನಟಿಸಿದ್ದಾರೆ. ‘ಬಡ್ಡೀಸ್’ ಸಿನಿಮಾಗೆ ಕಥೆ, ಚಿತ್ರಕಥೆ, ಸಂಭಾಷಣೆ ಹಾಗೂ ಹಾಡುಗಳನ್ನು ಬರೆದು ನಿರ್ದೇಶನ ಮಾಡಿದ್ದಾರೆ ಗುರುತೇಜ್ ಶೆಟ್ಟಿ.

ಇದನ್ನೂ ಓದಿ | Fat Free Surgery: ಕಿರುತೆರೆ ನಟಿ ಚೇತನಾ ಅನುಮಾನಾಸ್ಪದ ಸಾವು

Exit mobile version