Site icon Vistara News

Actor Kishore | ಟ್ವಿಟರ್ ಅಕೌಂಟ್ ಸಸ್ಪೆಂಡ್ ಬಗ್ಗೆ ಸ್ಷಷ್ಟನೆ ನೀಡಿದ ನಟ ಕಿಶೋರ್

Actor Kishore

ಬೆಂಗಳೂರು : ಕನ್ನಡ ನಟ ಕಿಶೋರ್ (Actor Kishore) ಅವರ ಟ್ವಿಟರ್ ಅಕೌಂಟ್ ಸಸ್ಪೆಂಡ್ ಆಗಿತ್ತು. ಕಿಶೋರ್‌ ಅವರ ಪೋಸ್ಟ್‌ಗಳಿಂದಲೇ ಟ್ವಿಟರ್ ಅಕೌಂಟ್ ಸಸ್ಪೆಂಡ್ ಆಗಿದೆ ಎಂಬ ಉಹಾಪೋಹಗಳು ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡಿತ್ತು. ಇದೀಗ ನಟ ಕಿಶೋರ್ ಸೋಷಿಯಲ್‌ ಮೀಡಿಯಾ ಮೂಲಕ ಸ್ಷಷ್ಟನೆ ನೀಡಿದ್ದಾರೆ.

ಅನವಶ್ಯಕ ಊಹಾಪೋಹಗಳನ್ನು ತಡೆಯಲಿಕ್ಕಾಗಿಯಷ್ಟೆ ನನ್ನ ಟ್ವಿಟರ್ ಅಕೌಂಟ್ ಸಸ್ಪೆಂಡ್ ಆದದ್ದು. ನನ್ನ ಯಾವ ಪೋಸ್ಟಿನಿಂದಲೂ ಅಲ್ಲ. ಡಿಸೆಂಬರ್ 20ನೇ ತಾರೀಖು 2022ರಂದು ಹ್ಯಾಕ್ ಮಾಡಲಾಗಿತ್ತು ಎಂದು ತಿಳಿದುಬಂದಿದೆ. ತಕ್ಕ ಕ್ರಮ ಕೈಗೊಳ್ಳುವ ಭರವಸೆ ಟ್ವಿಟರ್ ಕೂಡ ಕೊಟ್ಟಿದೆ. ಎಲ್ಲರ ಕಾಳಜಿಗೆ ಧನ್ಯವಾದಗಳು ಎಂದು ಅವರು ಬರೆದುಕೊಂಡಿದ್ದಾರೆ.

ಇದನ್ನೂ ಓದಿ | Actor Ajay Rao | ದೀಪಾವಳಿಗೆ ನಟ ಅಜಯ್‌ ರಾವ್‌ ಹೊಸ ಚಿತ್ರ ಘೋಷಣೆ, ಫಿಲ್ಮ್‌ ಹೆಸರೇನು?

ಕಿಶೋರ್ ಅವರು ಕನ್ನಡ ಸೇರಿದಂತೆ ಇತರ ಭಾಷೆಯ ಚಿತ್ರಗಳಲ್ಲೂ ನಟಿಸಿ ಸೈ ಎನಿಸಿಕೊಂಡಿದ್ದಾರೆ. ತಮಿಳು, ತೆಲುಗು, ಮಲಯಾಳಂ ಭಾಷೆಯ ಸಿನಿಮಾಗಳಲ್ಲೂ ಅಭಿನಯಸಿದ್ದಾರೆ. ಅಲ್ಲಿಯ ಸಿನಿ ಪ್ರೇಕ್ಷಕರ ಹೃದಯವನ್ನೂ ಗೆದ್ದಿದ್ದಾರೆ. ಆದರೆ, ಕೆಲವು ದಿನಗಳಿಂದ ಕಿಶೋರ್ ಅವರು ಟ್ವಿಟರ್ ವಿಚಾರವಾಗಿ ಸುದ್ದಿಯಾಗಿದ್ದರು. 

ಇದನ್ನೂ ಓದಿ | Kantara Movie | ಕೊಲ್ಲುವ ದೈವ, ಮನಸ್ಸನ್ನು ಪರಿವರ್ತಿಸಲಾರದೇ? ಕಿಶೋರ್‌ ಪೋಸ್ಟ್‌ ವೈರಲ್‌

Exit mobile version