Site icon Vistara News

Actor Madhu Guruswami : ತಮಿಳಿನಲ್ಲೂ ಅಬ್ಬರಿಸೋಕೆ ಸಿದ್ಧವಾದ ಕನ್ನಡದ ಖಳನಟ ಮಧು ಗುರುಸ್ವಾಮಿ

#image_title

ಹೈದರಾಬಾದ್‌: ಪ್ರತಿ ಸಿನಿಮಾದಲ್ಲೂ ಹೊಸ ಬಗೆಯ ಪಾತ್ರಗಳ ಮೂಲಕ ಸಿನಿಪ್ರಿಯರನ್ನು ರಂಜಿಸುತ್ತಿರುವ ಕನ್ನಡದ ಖ್ಯಾತ ಖಳನಟ ಮಧು ಗುರುಸ್ವಾಮಿ (Actor Madhu Guruswami) ಕಾಲಿವುಡ್ ಚಿತ್ರರಂಗಕ್ಕೂ ಪದಾರ್ಪಣೆ ಮಾಡಿದ್ದಾರೆ. ಕನ್ನಡದ ಸೂಪರ್ ಹಿಟ್ ಸಿನಿಮಾ ಮಫ್ತಿ, ಪತ್ತುತಲಾ ಎಂಬ ಟೈಟಲ್‌ನಡಿ ತಮಿಳಿಗೆ ರಿಮೇಕ್ ಆಗಿದ್ದು, ಆ ಸಿನಿಮಾದಲ್ಲಿ ಮಧು ಗುರುಸ್ವಾಮಿ ನಟಿಸಿದ್ದಾರೆ.

ಇದನ್ನೂ ಓದಿ: Pathu Thala Teaser: ʻಮಫ್ತಿʼ ರಿಮೇಕ್‌ ‘ಪತ್ತು ತಲ’ ಟೀಸರ್‌ ರಿಲೀಸ್‌: ಹೇಗಿದೆ ಸಿಂಬು ರಗಡ್‌ ಲುಕ್‌?
ಕನ್ನಡದ ಮಫ್ತಿಯಲ್ಲಿ ಸಿಂಗ ಪಾತ್ರ ನಿರ್ವಹಿಸಿದ್ದ ಮಧು ಗುರುಸ್ವಾಮಿ ತಮಿಳಿನಲ್ಲೂ ಕೂಡ ಅದೇ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಸಿಲಂಬರಸನ್ ನಾಯಕನಾಗಿ ಅಭಿನಯಿಸಿರುವ ಪತ್ತುತಲಾ ಸಿನಿಮಾಗೆ ಖ್ಯಾತ ನಿರ್ದೇಶಕ ಒಬಿಲ್ ಕೃಷ್ಣ ಆಕ್ಷನ್ ಕಟ್ ಹೇಳಿದ್ದು, ಸ್ಟುಡಿಯೋ ಗ್ರೀನ್ ಸಂಸ್ಥೆ ನಿರ್ಮಾಪಕ ಜ್ಞಾನವೇಲ ರಾಜ ಬಂಡವಾಳ ಹೂಡಿದ್ದಾರೆ. ಸಿಂಗ ಪಾತ್ರವನ್ನು ಜ್ಞಾನವೇಲ ಮೆಚ್ಚಿ ತಮಗೆ ಅವಕಾಶ ನೀಡಿರುವುದಕ್ಕೆ ಮಫ್ತಿ ಸಾರಥಿ ನರ್ತನ್ ಬಹುಮುಖ್ಯ ಕಾರಣ ಎನ್ನುತ್ತಾರೆ ಮಧು ಗುರುಸ್ವಾಮಿ. ಈ ಚಿತ್ರ ಇದೇ ತಿಂಗಳ 30ಕ್ಕೆ ತೆರೆಗೆ ಬರುತ್ತಿದೆ.

ಮಧು ಗುರುಸ್ವಾಮಿ ಅವರು ಅಭಿನಯ ತರಂಗ ಶಾಲೆಯಲ್ಲಿ ಎರಡು ವರ್ಷಗಳ ಕಾಲ ನಟನೆ ತರಬೇತಿ ಪಡೆದು ಡೆಡ್ಲಿ-2 ಸಿನಿಮಾ ಮೂಲಕ ನಟನಾಗಿ ಹಾಗೂ ಸಹಾಯಕ ನಿರ್ದೇಶಕನಾಗಿ ಅದೃಷ್ಟ ಪರೀಕ್ಷೆಗೆ ಇಳಿದವರು. ಚಿಂಗಾರಿ ಚಿತ್ರದಲ್ಲಿ ವಿನೀಶ್ ಮಲ್ಹೋತ್ರ ಪಾತ್ರದಲ್ಲಿ, ಯಶ್ ಅಭಿನಯದ ಜಾನು ಸಿನಿಮಾದಲ್ಲಿ ಸಂಗಮೇಶ್ ಎಂಬ ಪಾತ್ರದಲ್ಲಿ, ಶಿವಣ್ಣನ ಹೈವೋಲ್ಟೇಜ್ ಕಥೆ ಭಜರಂಗಿಯಲ್ಲಿ ಮಂತ್ರವಾದಿಯಾಗಿ, ಶರಣ್ ನಟನೆಯ ಜೈ ಮಾರುತಿ 800 ಚಿತ್ರದಲ್ಲಿ ಹಾಸ್ಯನಟನಾಗಿ ಹೀಗೆ ತರಹೇವಾರಿ ಪಾತ್ರದ ಮೂಲಕ ಕನ್ನಡದಲ್ಲಿ ಖ್ಯಾತಿ ಪಡೆದುಕೊಂಡಿದ್ದಾರೆ.

ಇದನ್ನೂ ಓದಿ: Shivarajkumar: ಮತ್ತೆ ಬಂದ ‌ʻಭೈರತಿ ರಣಗಲ್ʼ: ನರ್ತನ್‌ ಆ್ಯಕ್ಷನ್‌ ಕಟ್‌!
ಮಧು ಗುರುಸ್ವಾಮಿ ಅವರು ಸಾಕ್ಷ್ಯಂ ಸಿನಿಮಾ ಮೂಲಕ ತೆಲುಗು ಚಿತ್ರರಂಗಕ್ಕೆ ಕಾಲಿಟ್ಟರು. ಈ ಚಿತ್ರದಲ್ಲಿ ವಿಲನ್ ಆಗಿ ಅಬ್ಬರಿಸಿ ಬೊಬ್ಬಿರಿದ ಮಧು, ಪ್ರಶಾಂತ್ ನೀಲ್ ನಿರ್ದೇಶನದ ಡಾರ್ಲಿಂಗ್ ಪ್ರಭಾಸ್ ನಟನೆಯ ಬಹುನಿರೀಕ್ಷಿತ ಸಿನಿಮಾ ಸಲಾರ್ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದಾರೆ. ವಿಭಿನ್ನ ಪಾತ್ರಗಳ ಮೂಲಕ ಪ್ರೇಕ್ಷಕರ ಎದುರು ಹಾಜರಾಗುವ ಮಧು ಗುರುಸ್ವಾಮಿ ಸದ್ಯ ಬಹುಬೇಡಿಕೆ ನಟರೂ ಹೌದು.

Exit mobile version