Site icon Vistara News

Actor Mamukkoya: ಮಲಯಾಳಂ ಚಿತ್ರರಂಗದ ಹಿರಿಯ ನಟ ಮಾಮುಕ್ಕೋಯ ವಿಧಿವಶ

Actor Mamukkoya passes away

ಬೆಂಗಳೂರು: ಹೃದಯಾಘಾತದಿಂದ ಆಸ್ಪತ್ರೆಗೆ ದಾಖಲಾಗಿದ್ದ ಮಲಯಾಳಂನ ಹಿರಿಯ ನಟ ಮಾಮುಕ್ಕೋಯ (Actor Mamukkoya) ಏಪ್ರಿಲ್‌ 24ರಂದು ವಿಧಿವಶರಾಗಿದ್ದಾರೆ. ಕೇರಳದ ಮಲಪ್ಪುರಂ ಜಿಲ್ಲೆಯ ವಂಡೂರಿನಲ್ಲಿ ನಡೆದ ಫುಟ್ಬಾಲ್ ಪಂದ್ಯಾವಳಿಯ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ನಟ ಅಲ್ಲಿಯೇ ಕುಸಿದು ಬಿದ್ದಿದ್ದರು. ತಕ್ಷಣ ವಂಡೂರಿನ ಆಸ್ಪತ್ರೆಗೆ ದಾಖಲಿಸಲಾಗಿದ್ದು, ನಂತರ ಅವರನ್ನು ಕೋಝಿಕ್ಕೋಡ್‌ನ ಖಾಸಗಿ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ಐಸಿಯುನಲ್ಲಿ ಇರಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಹಿರಿಯ ನಟ ನಿಧನ ಹೊಂದಿದ್ದಾರೆ. ಅವರಿಗೆ 76 ವರ್ಷ ವಯಸ್ಸಾಗಿತ್ತು.

ಕೋಯಿಕ್ಕೋಡ್‌ನ ಕಲ್ಲಾಯಿಯಲ್ಲಿ ಜನಿಸಿದ ಮಾಮುಕ್ಕೋಯ ಚಿಕ್ಕಂದಿನಿಂದಲೂ ರಂಗಭೂಮಿಯಲ್ಲಿ ಸಕ್ರಿಯರಾಗಿದ್ದರು. ಅವರ ಚೊಚ್ಚಲ ಚಿತ್ರ ಅನ್ಯರುಡೆ ಭೂಮಿ (1979) (Anyarude Bhoomi). ಹಾಸ್ಯನಟರಾಗಿ ಖ್ಯಾತಿ ಗಳಿಸಿದ್ದರು. ಸುಮಾರು 450ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ನಟಿಸಿದ್ದಾರೆ. ನಿರ್ದೇಶಕರ ನಾಡೋಡಿಕಟ್ಟು (Nadodikattu) (1987)ನಲ್ಲಿ ಅವರು ಗಫೂರ್ ಪಾತ್ರವನ್ನು ನಿರ್ವಹಿಸಿದರು. ಈ ಪಾತ್ರದಿಂದ ಅದು ಅಪಾರ ಖ್ಯಾತಿಯನ್ನು ಗಳಿಸಿದರು. ರಾಮ್‌ಜಿ ರಾವ್ ಸ್ಪೀಕಿಂಗ್ (Ramji Rao Speaking), ವಡಕ್ಕು ನೋಕ್ಕಿಯಂತ್ರಂ (Vadakku Nokkiyanthram), ತಲಯಾನಮಂತ್ರಂ (Thalayanamanthram), ಸಂದೇಶಂ ( Sandesham ) ಮತ್ತು ಹಿಸ್ ಹೈನೆಸ್ ಅಬ್ದುಲ್ಲಾ ( His Highness Abdulla) ಚಿತ್ರಗಳಲ್ಲಿ ನಟಿಸಿದ್ದಾರೆ.

ಮಾಮುಕ್ಕೋಯ ಅವರು ಚಲನಚಿತ್ರಗಳಲ್ಲದೆ ಸಾಹಿತ್ಯ ಮತ್ತು ರಂಗಭೂಮಿಯಲ್ಲೂ ಹೆಚ್ಚಿನ ಆಸಕ್ತಿಯನ್ನು ಹೊಂದಿದ್ದರು. 2004 ರ ಪೆರುಮಝಕ್ಕಲಂ(Perumazhakkalam) ಮತ್ತು ಇನ್ನತೇ ಚಿಂತ ವಿಷಯಂ (Innathe Chintha Vishayam) ಚಿತ್ರಗಳಿಗೆ ಕೇರಳ ರಾಜ್ಯ ಪ್ರಶಸ್ತಿಯನ್ನು ಗೆದ್ದಿದ್ದಾರೆ. ಇತ್ತೀಚೆಗೆ ಪಯಲಿ, ತೀರ್ಪು ಚಿತ್ರಗಳಲ್ಲಿ ಕಾಣಿಸಿಕೊಂಡರು.

ಇದನ್ನೂ ಓದಿ: Sri Charukeerthi Bhattaraka Swamiji: ಶ್ರವಣಬೆಳಗೊಳದ ಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ವಿಧಿವಶ

ಮಲಯಾಳಂ ನಟ ವಿಕ್ರಮ್ ಅವರ ತಮಿಳು ಚಿತ್ರ ಕೋಬ್ರಾದಲ್ಲಿ ಸಹ ಪಾತ್ರವನ್ನು ನಿರ್ವಹಿಸಿದ್ದಾರೆ. ಮಿನ್ನಲ್ ಮುರಳಿ (Minnal Murali), ಉಸ್ತಾದ್ ಹೋಟೆಲ್ (Ustad Hotel), ಮತ್ತು ಮರಕ್ಕರ್: ಅರಬಿಕದಲಿಂತೆ ಸಿಂಹಂ (Marakkar: Arabikadalinte Simham) ಅವರ ವೃತ್ತಿಜೀವನದ ಇತರ ಗಮನಾರ್ಹ ಚಿತ್ರಗಳು. ʼಫ್ಲಾಮೆನ್ ಇಮ್ ಪ್ಯಾರಡೀಸ್ʼ ಎಂಬ ಸ್ವಿಸ್ ಚಿತ್ರದಲ್ಲೂ ಅವರು ನಟಿಸಿದ್ದಾರೆ.

Exit mobile version