Site icon Vistara News

Mandeep Roy | ಕನ್ನಡ ಚಿತ್ರರಂಗದ ಹಿರಿಯ ನಟ ಮನ್​ದೀಪ್​ ರಾಯ್​ಗೆ ಹೃದಯಾಘಾತ 

Mandeep Roy

ಬೆಂಗಳೂರು : ಕನ್ನಡ ಚಿತ್ರರಂಗದ ಹಿರಿಯ ನಟ ಮನದೀಪ್ ರಾಯ್ (Mandeep Roy ) ಅವರಿಗೆ ಡಿಸೆಂಬರ್‌ 5 ಸೋಮವಾರ ಹೃದಯಾಘಾತವಾಗಿದ್ದು ಬೆಂಗಳೂರಿನ ಶೇಷಾದ್ರಿಪುರಂ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಮೂರು ದಿನಗಳ ಹಿಂದೆಯೇ ಅವರಿಗೆ ಹೃದಯಾಘಾತವಾಗಿದೆ ಎನ್ನಲಾಗುತ್ತಿದೆ. ಈ ವಿಷಯ ಚಿತ್ರೋದ್ಯಮಕ್ಕೆ ತಿಳಿಯುತ್ತಿದ್ದಂತೆಯೇ ಆದಷ್ಟು ಬೇಗ ಅವರು ಗುಣಮುಖರಾಗಲಿ ಎಂದು ಹಲವರು ಹಾರೈಸಿದ್ದಾರೆ.

ಇದನ್ನೂ ಓದಿ | Aindrila Sharma | ಬೆಂಗಾಲಿ ನಟಿ ಐಂದ್ರಿಲಾ ಶರ್ಮಾಗೆ ಹೃದಯಾಘಾತ: ಆರೋಗ್ಯ ಸ್ಥಿತಿ ಗಂಭೀರ

ಮನ್​ದೀಪ್​ ರಾಯ್‌ ಅವರು 500ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ನಟಿಸಿದ್ದಾರೆ. ʻʻಮಿಂಚಿನ ಓಟʼʼ , ʻʻಬೆಂಕಿಯ ಬಲೆʼʼ, ʻʻಆಕಸ್ಮಿಕʼʼ, ʻʻಏಳು ಸುತ್ತಿನ ಕೋಟೆʼʼ, ʻʻಆಸೆಗೊಬ್ಬ ಮೀಸೆಗೊಬ್ಬʼʼ, ʻʻಆಪ್ತ ರಕ್ಷಕʼʼ ಪ್ರೀತ್ಸೋದ್ ತಪ್ಪ ಹೀಗೆ ಸಾಕಷ್ಟು ಸಿನಿಮಾಗಳಲ್ಲಿ ಅವರು ನಟಿಸಿದ್ದಾರೆ. ಹಾಸ್ಯ ಕಲಾವಿದ ಎಂದು ಗುರುತಿಸಿಕೊಂಡಿದ್ದರು. ಮನ್​ದೀಪ್​ ರಾಯ್​ ಅವರು ಆದಷ್ಟು ಬೇಗ ಗುಣಮುಖರಾಗಲಿ ಎಂದು ಅಭಿಮಾನಿಗಳು ಪ್ರಾರ್ಥಿಸುತ್ತಿದ್ದಾರೆ.

ಇದನ್ನೂ ಓದಿ | Andres Balanta | ಹೃದಯಾಘಾತದಿಂದ ಕೊನೆಯುಸಿರೆಳೆದ ಯುವ ಫುಟ್ಬಾಲ್​ ತಾರೆ ಆಂಡ್ರೆಸ್ ಬಲಾಂಟ; ಕಂಬನಿ ಮಿಡಿದ ಫುಟ್ಬಾಲ್ ಜಗತ್ತು

Exit mobile version