Site icon Vistara News

Mangal Dhillon Death: ಕ್ಯಾನ್ಸರ್​ನಿಂದ ಬಳಲುತ್ತಿದ್ದ ನಟ, ನಿರ್ಮಾಪಕ ಮಂಗಲ್​ ಧಿಲ್ಲೋನ್​ ನಿಧನ

Actor Mangal Dhillon Dies After Battling Cancer

ಪಂಜಾಬಿ ಮತ್ತು ಹಿಂದಿ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದ ಹಿರಿಯ ನಟ (Senior Actor) ಹಾಗೂ ನಿರ್ಮಾಪಕ ಮಂಗಲ್ ಧಿಲ್ಲೋನ್ (Mangal Dhillon Death)​ ಅವರು ಭಾನುವಾರ (ಜೂನ್​ 11) ನಿಧನರಾಗಿದ್ದಾರೆ. ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಅವರು ಲೂಧಿಯಾನದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ನಟ ಯಶಪಾಲ್ ಶರ್ಮಾ ಸುದ್ದಿಯನ್ನು ದೃಢಪಡಿಸಿದ್ದು, ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.

ನಟನಾ ಕೌಶಲ್ಯಕ್ಕಾಗಿ ಅವರ ಅನೇಕ ಅಭಿಮಾನಿಗಳು ಅವರನ್ನು ನೆನಪಿಸಿಕೊಳ್ಳುತ್ತಾರೆ. ಅಭಿಮಾನಿಯೊಬ್ಬರು “ಓಹ್! ಅವರು ತುಂಬಾ ಒಳ್ಳೆಯ ನಟರಾಗಿದ್ದರು. ನಾನು ಅನೇಕ ಧಾರಾವಾಹಿಗಳಲ್ಲಿ ಅವರ ನಟನೆ ನೋಡಿದ್ದೇನೆʼʼಎಂದು ಟ್ವೀಟ್‌ ಮಾಡಿದ್ದಾರೆ.

ಫರೀದ್ಕೋಟ್ ಮೂಲದ ನಟ ಮಂಗಲ್ ಧಿಲ್ಲೋನ್ ನಿರ್ಮಾಪಕ-ನಿರ್ದೇಶಕ ಮತ್ತು ಬರಹಗಾರರಾಗಿದ್ದರು. ಅವರು ಬಾಲಿವುಡ್ ಮತ್ತು ಟಿವಿಯಲ್ಲಿ ಮಾತ್ರವಲ್ಲದೆ ಪಂಜಾಬಿ ಚಿತ್ರಗಳಲ್ಲಿಯೂ ದೊಡ್ಡ ಹೆಸರು ಗಳಿಸಿದ್ದರು. ಅವರು ಅನೇಕ ಪಂಜಾಬಿ ಚಲನಚಿತ್ರಗಳಲ್ಲಿ ಕೆಲಸ ಮಾಡಿದರು. ರೇಖಾ ಅಭಿನಯದ ʻಖೂನ್ ಭಾರಿ ಮಾಂಗ್ʼ ಚಿತ್ರದಲ್ಲಿ ಮಂಗಲ್ ಧಿಲ್ಲೋನ್ ಕಾಣಿಸಿಕೊಂಡಿದ್ದಾರೆ. ದಯಾವನ್, ಜಖ್ಮಿ ಔರತ್, ವಿಶ್ವಾತ್ಮ, ಪ್ಯಾರ್ ಕಾ ದೇವತಾ, ಅಂಬಾ, ತೂಫಾನ್ ಸಿಂಗ್, ದಲಾಲ್ ಮತ್ತು ಇನ್ನೂ ಅನೇಕ ಚಲನಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ.

ಮಂಗಲ್ ಧಿಲ್ಲೋನ್​ ಅವರ ವೃತ್ತಿಜೀವನ ಕೇವಲ ನಟನೆಗೆ ಮಾತ್ರ ಸೀಮಿತ ಆಗಿರಲಿಲ್ಲ. ತಮ್ಮದೇ ಆದ ನಿರ್ಮಾಣ ಸಂಸ್ಥೆ ಆರಂಭಿಸುವ ಮೂಲಕ ಅವರು ಸಿನಿಮಾಗಳಿಗೆ ಬಂಡವಾಳ ಹೂಡಲು ಆರಂಭಿಸಿದ್ದರು. ಕಮರ್ಷಿಯಲ್​ ಸಕ್ಸಸ್​ ಕಾಣುವಂತಹ ಹಾಗೂ ವಿಮರ್ಶೆ ದೃಷ್ಟಿಯಿಂದಲೂ ಅತ್ಯುತ್ತಮ ಎನಿಸಿಕೊಳ್ಳುವಂತಹ ಸಿನಿಮಾಗಳನ್ನು ಅವರು ನಿರ್ಮಿಸಿದ್ದರು. ಚಿತ್ರರಂಗದಲ್ಲಿನ ಕೊಡುಗೆಯನ್ನು ಗುರುತಿಸಿಮಂಗಲ್ ಧಿಲ್ಲೋನ್ ಅವರಿಗೆ ಪಂಜಾಬ್​ ಸರ್ಕಾರವು ‘ಬಾಬಾ ಫರೀದ್​ ಪ್ರಶಸ್ತಿ’ನೀಡಿ ಗೌರವಿಸಿತ್ತು.

ಇದನ್ನೂ ಓದಿ: Praveen Nettaru: ಸುಳ್ಯದ ಪಿಎಫ್‌ಐ ಕಚೇರಿ ಸೀಜ್‌ ಮಾಡಿದ NIA; ಇನ್ನಿದನ್ನು ಪರಭಾರೆ ಮಾಡುವಂತಿಲ್ಲ

ಕಥಾ ಸಾಗರ್, ಕಿಸ್ಮತ್, ಘುತಾನ್, ರಿಶ್ತಾ ಮತ್ತು ಪರಮ ವೀರ ಚಕ್ರದಂತಹ ಟಿವಿ ಕಾರ್ಯಕ್ರಮಗಳ ಭಾಗವಾಗಿದ್ದರು. ತೆರೆಯ ಮೇಲೆ ವಿಭಿನ್ನ ಪಾತ್ರಗಳನ್ನು ನಿರ್ವಹಿಸಿದ್ದರು.

Exit mobile version