Site icon Vistara News

Actor Manoj Rajput: ಅತ್ಯಾಚಾರ ಎಸಗಿದ ಆರೋಪದ ಮೇಲೆ ನಟ ಮನೋಜ್ ರಜಪೂತ್ ಬಂಧನ

Actor Manoj Rajput Arrested On Allegations Of Raping

ಬೆಂಗಳೂರು: ಮದುವೆಯಾಗುತ್ತೇನೆ ಎಂದು ನಂಬಿಸಿ 12 ವರ್ಷಗಳ ಕಾಲ ಅಪ್ರಾಪ್ತ ವಯಸ್ಸಿನ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಆರೋಪ ಮೇಲೆ ಛತ್ತೀಸ್‌ಗಢದ ನಟ ಮನೋಜ್ ರಜಪೂತ್ (Actor Manoj Rajput) ಅವರನ್ನು ಪೊಲೀಸರು ಬಂಧಿಸಿದ್ದಾರೆ. ‘ಗಾಂವ್ ಕೆ ಝೀರೋ ಶಹರ್ ಮೇ ಹೀರೋ’ ಚಿತ್ರದ ಮೂಲಕ ಹೆಸರು ಗಳಿದ್ದರು ಮನೋಜ್ . ಜಿಆರ್‌ಪಿ ಭಿಲಾಯ್-3 ಪೊಲೀಸರು 29 ವರ್ಷದ ಯುವತಿ ನೀಡಿದ ದೂರಿನ ಮೇರೆಗೆ ಬಂಧಿಸಲಾಗಿದೆ. ಆರಂಭದಲ್ಲಿ ರಿಯಲ್ ಎಸ್ಟೇಟ್‌ನಲ್ಲಿ ತೊಡಗಿಸಿಕೊಂಡಿದ್ದ ಮನೋಜ್ ಬಳಿಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟಿದ್ದರು. ನಿರ್ಮಾಪಕ ಮತ್ತು ನಿರ್ದೇಶಕರಾಗಿ ಸಿನಿಮಾದಲ್ಲಿ ಸಕ್ರಿಯರಾಗಿದ್ದಾರೆ.

ಸಂತ್ರಸ್ತೆಯ ಪ್ರಕಾರ 2011 ರಿಂದ ಮನೋಜ್ ರಜಪೂತ್ ಜತೆ ಸಂಬಂಧ ಹೊಂದಿದ್ದರು. ಕಳೆದ ಕೆಲವು ವರ್ಷಗಳಿಂದ ತನ್ನ ಮೇಲೆ ಲೈಂಗಿಕ ಕಿರುಕುಳ ನೀಡುತ್ತಿದ್ದಾರೆ. ಮದುವೆಯ ವಿಷಯವನ್ನು ಪ್ರಸ್ತಾಪ ಮಾಡಿದಾಗ ನನ್ನನ್ನು ನಿರ್ಲಕ್ಷಿಸಲು ಶುರು ಮಾಡಿದರು ಎಂದು ದೂರಿನಲ್ಲಿ ತಿಳಿಸಿದ್ದಾರೆ. ಸಂತ್ರಸ್ತೆಯ ದೂರಿನ ಮೇರೆಗೆ ಪೊಲೀಸರು ಪ್ರಕರಣದ ತನಿಖೆ ಆರಂಭಿಸಿದ್ದಾರೆ.

ಇದನ್ನೂ ಓದಿ: Congress Party: ಸೋಲಿಗೆ ಮಧ್ಯಪ್ರದೇಶ ಕಾಂಗ್ರೆಸ್‌ ಅಧ್ಯಕ್ಷ ಕಮಲ್‌ನಾಥ್‌ ತಲೆದಂಡ; ಛತ್ತೀಸ್​ಗಢದಲ್ಲೂ ಬದಲಾವಣೆ

GRP ಭಿಲಾಯ್-3 ಪೊಲೀಸ್ ಠಾಣೆಯ ಪ್ರಕಾರ ಲೈಂಗಿಕ ದೌರ್ಜನ್ಯಸಂಭವಿಸಿದಾಗ ಹುಡುಗಿ ಅಪ್ರಾಪ್ತಳಾಗಿದ್ದಳು. ಆಕೆಗೆ ಕೇವಲ ಹದಿನಾರು ವರ್ಷವಾಗಿತ್ತು. ಹೀಗಾಗಿ ಮನೋಜ್ ರಜಪೂತ್ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ ಎಂದು ವರದಿಯಾಗಿದೆ. ಮನೋಜ್ ಈ ಹಿಂದೆ ಭೂ ವಂಚನೆ ಪ್ರಕರಣದಲ್ಲಿ ಜೈಲು ಸೇರಿದ್ದ.

Exit mobile version