Site icon Vistara News

Actor Naga Shourya | ಬೆಂಗಳೂರು ಮೂಲದ ಹುಡುಗಿ ಜತೆ ಸಪ್ತಪದಿ ತುಳಿಯಲಿದ್ದಾರೆ ತೆಲುಗು ನಟ ನಾಗ ಶೌರ್ಯ!

Actor Naga Shourya

ಬೆಂಗಳೂರು : ಕನ್ನಡದ ʻಕಿರಿಕ್‌ ಪಾರ್ಟಿʼ ಚಿತ್ರದ ಯಶಸ್ಸಿನ ಬೆನ್ನಲ್ಲೇ ನಟಿ ರಶ್ಮಿಕಾ ಮಂದಣ್ಣ ಕಾಲಿವುಡ್‌ಗೆ ಎಂಟ್ರಿ ಕೊಟ್ಟಿದ್ದರು. ʻಚಲೋʼ ಸಿನಿಮಾ ಮೂಲಕ ಮೊದಲ ಬಾರಿಗೆ ತೆಲುಗು ಚಿತ್ರರಂಗದಲ್ಲಿ ಕಾಣಿಸಿಕೊಂಡಿದ್ದರು ರಶ್ಮಿಕಾ. ಈ ಸಿನಿಮಾಗೆ ನಾಯಕನಾಗಿ ನಾಗ ಶೌರ್ಯ (Actor Naga Shourya) ಅಭಿನಯಿಸಿದ್ದರು. ಇದೀಗ ನಟ ನಾಗ ಶೌರ್ಯ ಹಸೆಮಣೆ ಏರಲು ಸಜ್ಜಾಗಿದ್ದಾರೆ. ಬೆಂಗಳೂರು ಮೂಲದ ಅನುಷಾ ಶೆಟ್ಟಿ ಜತೆ ಸಪ್ತಪದಿ ತುಳಿಯಲಿದ್ದಾರೆ. ಸದ್ಯ ಆಮಂತ್ರಣ ಪತ್ರಿಕೆ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದೆ.

ಇತ್ತೀಚೆಗಷ್ಟೆ ಬಿಡುಗಡೆಗೊಂಡ ನಾಗ ಶೌರ್ಯ ನಟನೆಯ ‘ಕೃಷ್ಣ ವೃಂದ ವಿಹಾರಿ’ ಯಶಸ್ವಿ ಪ್ರದರ್ಶನ ಕಂಡಿತ್ತು. 2018ರಲ್ಲಿ ʻಚಲೋʼ ಸಿನಿಮಾ ಮೂಲಕ ನಾಗ ಶೌರ್ಯ ಹೆಸರು ಗಳಿಸಿದ್ದರು. ಇದೀಗ ನಟ ಮದುವೆ ಇನ್ವಿಟೇಶನ್‌ ಕಾರ್ಡ್‌ಅನ್ನು ಇನ್‌ಸ್ಟಾದಲ್ಲಿ ಶೇರ್‌ ಮಾಡಿಕೊಂಡಿದ್ದು, ಅವರ ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ್ದಾರೆ. ಕರ್ನಾಟಕ ಮೂಲದ ಇಂಟೀರಿಯರ್‌ ಡಿಸೈನರ್ ಆಗಿ ಕೆಲಸ ಮಾಡುತ್ತಿರುವ ಅನುಷಾ ಶೆಟ್ಟಿ ಜತೆ ನಾಗಶೌರ್ಯ ಹೊಸ ಜೀವನಕ್ಕೆ ಕಾಲಿಡುತ್ತಿದ್ದಾರೆ. ಇನ್ನೂ ವಿಶೇಷ ಅಂದರೆ ನವೆಂಬರ್ 20ರಂದು ಬೆಂಗಳೂರಿನಲ್ಲಿ ಅದ್ಧೂರಿಯಾಗಿ ಮದುವೆ ನಡೆಯಲಿದೆ.

ಇದನ್ನೂ ಓದಿ | Photos | ಜತೆಯಾಗಿ ದೀಪ ಹಿಡಿದು ದೀಪಾವಳಿ ಶುಭಾಶಯ ಕೋರಿದ ವಾಸುಕಿ ವೈಭವ್​-ಚಂದನಾ; ಕಾಲೆಳೆದ ನಟಿ ರಮ್ಯಾ

ನವೆಂಬರ್‌ 19,20ರಂದು ವಿಠಲ್ ಮಲ್ಯ ರಸ್ತೆಯಲ್ಲಿರುವ ಜೆಡಬ್ಲೂ ಮ್ಯಾರಿಯಟ್‌ ಹೊಟೆಲ್‌ನಲ್ಲಿ ಮದುವೆ ಸಮಾರಂಭ ಜರುಗಲಿದೆ. ನವೆಂಬರ್‌ 20ರ ಬೆಳಗ್ಗೆ 11.25ರ ಶುಭ ಮುಹೂರ್ತದಲ್ಲಿ ಹೊಸ ಜೀವನಕ್ಕೆ ಕಾಲಿಡುತ್ತಿದ್ದಾರೆ ನಟ ನಾಗ ಶೌರ್ಯ ಹಾಗೂ ಅನುಷಾ ಶೆಟ್ಟಿ.

ಇದನ್ನೂ ಓದಿ | Manoranjan Ravichandran | ಸಪ್ತಪದಿ ತುಳಿಯಲಿರುವ ಕ್ರೇಜಿ ಸ್ಟಾರ್‌ ಪುತ್ರ ಮನು- ಸಂಗೀತ!

Exit mobile version