Site icon Vistara News

Actor Nani: ನಾನಿ ಅಭಿನಯದ ʻದಸರಾʼ ಸಿನಿಮಾಗೆ ಸೆನ್ಸಾರ್ ಮಂಡಳಿಯಿಂದ 36 ಕಟ್ ಸೂಚನೆ​

Nani’s Dasara Gets U/A Certificate Before 36 Cuts

ಬೆಂಗಳೂರು: ತೆಲುಗು ನಟ ನಾನಿ (Actor Nani) ಅಭಿನಯದ ದಸರಾ ಸಿನಿಮಾ ಮಾರ್ಚ್‌ 30ರಂದು ಬಿಡುಗಡೆಯಾಗುತ್ತಿದೆ. ನಿರ್ದೇಶಕ-ಲೇಖಕ ಶ್ರೀಕಾಂತ್ ಒಡೆಲಾ ಅವರು ನಾನಿ ಅಭಿನಯದ ಚಿತ್ರದ ಮೂಲಕ ನಿರ್ದೇಶಕರಾಗಿ ಪದಾರ್ಪಣೆ ಮಾಡುತ್ತಿದ್ದಾರೆ. ಚಿತ್ರದಲ್ಲಿ ನಾನಿ ಹೊಸ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಸೆನ್ಸಾರ್ ಮಂಡಳಿಯು 36 ಕಟ್​ಗಳನ್ನು ಸೂಚಿಸಿದೆ. ಇದೀಗ ಯು/ಎ ಪ್ರಮಾಣಪತ್ರವನ್ನು ನೀಡಿದ್ದು, ತೆಲುಗಿನಲ್ಲಿ ಸೆನ್ಸಾರ್​ನಿಂದ ಇಷ್ಟು ದೊಡ್ಡ ಸಂಖ್ಯೆಯ ಕಟ್ ಪಡೆದ ಮೊದಲ ಸಿನಿಮಾ ಎಂದು ವರದಿಯಾಗಿದೆ. .

ದೃಶ್ಯಗಳನ್ನು ತೆಗೆಯುವ ಹೊರತಾಗಿ, ವಿವಿಧ ಫ್ರೇಮ್‌ಗಳಿಂದ ಕೆಲವು ಆಡಿಯೊ ಮತ್ತು ಸಂಭಾಷಣೆಗಳನ್ನು ತೆಗೆದುಹಾಕಲಾಗಿದೆ. ಸೆನ್ಸಾರ್ ಮಂಡಳಿ ಸದಸ್ಯರು ಕೆಲವು ಸೀಕ್ವೆನ್ಸ್‌ಗಳಿಂದ ಸಬ್‌ಟೈಟಲ್‌ ತೆಗೆದುಹಾಕಲು ಸೂಚಿಸಿದ್ದಾರೆ. ಅದರಲ್ಲಿಯೂ ಕುಡಿತವನ್ನು ವೈಭವೀಕರಿಸುವ ಹಲವು ದೃಶ್ಯಗಳಿಗೆ ಹಾಗೂ ಹಿಂಸೆಯನ್ನು ವೈಭವೀಕರಿಸುವ ದೃಶ್ಯಗಳಿಗೆ ಹಲವು ಕಟ್​ಗಳನ್ನು ಸೂಚಿಸಿದೆ. ಇವಲ್ಲದೆ ಸಿನಿಮಾದ ಪ್ರಚಾರದಲ್ಲಿಯೂ ಬಳಸಲಾಗುತ್ತಿರುವ ಬಾಂಚೆತ್ ಹಾಗೂ ಬದ್ದಲು ಬಾಸಿಂಗಾಲೈತಾಯ್ ಸಂಭಾಷಣೆಗಳನ್ನು ಸಹ ಮ್ಯೂಟ್ ಮಾಡಲಾಗಿದೆ. ಸಿನಿಮಾಕ್ಕೆ ಅಂತಿಮವಾಗಿ ಯು/ಎ ಸರ್ಟಿಫಿಕೇಟ್ ನೀಡಲಾಗಿದೆ.

ಮಾರ್ಚ್ 26 ರಂದು ಆಂಧ್ರಪ್ರದೇಶದ ಅನಂತಪುರದ ಆರ್ಟ್ಸ್ ಕಾಲೇಜು ಮೈದಾನದಲ್ಲಿ ದಸರಾದ ಅದ್ಧೂರಿ ಪ್ರೀ ರಿಲೀಸ್ ಇವೆಂಟ್‌ ನಡೆಯಲಿದೆ ಎಂದು ಎಸ್‌ಎಲ್‌ವಿ ಸಿನಿಮಾಸ್ ಹೇಳಿಕೊಂಡಿದೆ. “ಧೂಮ್ ಧಾಮ್ ದಸರಾ ಆಚರಣೆಗೆ ಸಿದ್ಧರಾಗಿ. ಮಾರ್ಚ್ 26 ರಂದು ಅನಂತಪುರದ ಆರ್ಟ್ಸ್ ಕಾಲೇಜ್ ಮೈದಾನದಲ್ಲಿ ದಸರಾ ಗ್ರ್ಯಾಂಡ್ ಪ್ರಿ-ರಿಲೀಸ್ ಈವೆಂಟ್” ಎಂದು ಪ್ರೊಡಕ್ಷನ್ ಹೌಸ್ ಟ್ವೀಟ್ ಮಾಡಿದೆ.
ಶ್ರೀಕಾಂತ್ ಒಡೆಲಾ ಚೊಚ್ಚಲ ನಿರ್ದೇಶನದಲ್ಲಿ ಸಿನಿಮಾ ಮೂಡಿ ಬಂದಿದ್ದು, ಖ್ಯಾತ ನಟಿ ಕೀರ್ತಿ ಸುರೇಶ್ ನಾನಿ ಜೋಡಿಯಾಗಿ ಸ್ಕ್ರೀನ್ ಶೇರ್ ಮಾಡಿದ್ದಾರೆ.

ಇದನ್ನೂ ಓದಿ: Dasara Movie: ನ್ಯಾಚುರಲ್ ಸ್ಟಾರ್ ನಾನಿ ‘ದಸರಾ’ದಲ್ಲಿ ಮಿಂಚಲಿದ್ದಾರೆ ‘ದಿಯಾ’ ಖ್ಯಾತಿಯ ದೀಕ್ಷಿತ್ ಶೆಟ್ಟಿ

ಬಹು ದೊಡ್ಡ ತಾರಾಗಣ ಒಳಗೊಂಡ ಈ ಚಿತ್ರದಲ್ಲಿ ‘ದಿಯಾ’ ಖ್ಯಾತಿಯ ದೀಕ್ಷಿತ್ ಶೆಟ್ಟಿ, ಸಮುದ್ರಕನಿ, ಸಾಯಿಕುಮಾರ್, ಜರೀನಾ ವಹಾಬ್ ಸೇರಿದಂತೆ ಸ್ಟಾರ್ ಕಲಾವಿದರ ತಾರಾಬಳಗವಿದೆ. ಸಂತೋಷ್ ನಾರಾಯಣನ್ ಮ್ಯೂಸಿಕ್, ಸತ್ಯನ್ ಸೂರ್ಯನ್ ಕ್ಯಾಮೆರಾ ವರ್ಕ್, ನವೀನ್ ನೂಲಿ ಸಂಕಲನ, ಅನ್ಬರಿವ್ ಸಾಹಸ ನಿರ್ದೇಶನ, ವಿಜಯ್ ಚಗಂಟಿ ಕಾರ್ಯಕಾರಿ ನಿರ್ಮಾಣದಲ್ಲಿ ‘ದಸರಾ’ ಸಿನಿಮಾ ಮೂಡಿ ಬಂದಿದೆ.

Exit mobile version