Site icon Vistara News

Actor Nani: ನಾನಿ ಅಭಿನಯದ ʻದಸರಾʼ ಸಿನಿಮಾದ ಕ್ಲೈಮ್ಯಾಕ್ಸ್‌ ಶೂಟ್‌ಗೆ ತಗುಲಿದ ವೆಚ್ಚ 5 ಕೋಟಿ ರೂ.?

Nani-starrer Dasara’s Grand Climax Scene

ಬೆಂಗಳೂರು: ನ್ಯಾಚುರಲ್‌ ಸ್ಟಾರ್‌ ನಾನಿ (Actor Nani) ಮುಂಬರುವ ಸಿನಿಮಾ ದಸರಾ ಬಿಡುಗಡೆಗೆ ಸಜ್ಜಾಗಿದ್ದಾರೆ. ಇದೇ ಮಾರ್ಚ್‌ 30ರಂದು ಸಿನಿಮಾ ತೆರೆ ಕಾಣುತ್ತಿದೆ. ಚಿತ್ರದ ಟ್ರೈಲರ್‌ ಮತ್ತು ಹಾಡುಗಳು ಸನಿರಸಿಕರ ಗಮನ ಸೆಳೆದಿವೆ. ಇದು ಹಿಂದೆಂದೂ ನೋಡಿರದ ಅವತಾರದಲ್ಲಿ ನಟ ಕಾಣಿಸಿಕೊಂಡಿದ್ದು., ಅವರ ಅಭಿಮಾನಿಗಳು ಮತ್ತು ಸಿನಿಪ್ರಿಯರು ಚಿತ್ರವನ್ನು ವೀಕ್ಷಿಸಲು ಉತ್ಸುಕರಾಗಿದ್ದಾರೆ. ಚಿತ್ರದ ಪ್ರಚಾರ ಕಾರ್ಯವೂ ಭರದಿಂದ ಸಾಗುತ್ತಿದೆ. ಇದೀಗ ವರದಿಯಲ್ಲಿ, ಚಿತ್ರದ ಕ್ಲೈಮ್ಯಾಕ್ಸ್ ದೃಶ್ಯವನ್ನು ತಯಾರಿಸಲು ಪ್ರೊಡಕ್ಷನ್ ಹೌಸ್ ದೊಡ್ಡ ಮೊತ್ತದ ಬಜೆಟ್‌ನಲ್ಲಿ ನಿರ್ಮಾಣ ಮಾಡಿದೆ ಎನ್ನಲಾಗಿದೆ.

ವರದಿ ಪ್ರಕಾರ, ದಸರಾದ ಕ್ಲೈಮ್ಯಾಕ್ಸ್‌ಗೆ ಎಸ್‌ಎಲ್‌ವಿ ಸಿನಿಮಾಸ್ ಸುಮಾರು 5 ಕೋಟಿ ರೂ. ಹಣವನ್ನು ಹಾಕಿದೆ ಎನ್ನಲಾಗಿದೆ. ಕ್ಲೈಮ್ಯಾಕ್ಸ್ ಸೀಕ್ವೆನ್ಸ್ ದೀರ್ಘಾವಾಗಿಯೂ ಇದೆ ಎಂದು ಹೇಳಲಾಗುತ್ತಿದೆ. ಈ ಚಿತ್ರಕ್ಕಾಗಿ ನಾನಿ ಸುಮಾರು 20 ಕೋಟಿ ರೂ. ಸಂಭಾವನೆ ಪಡೆದಿದ್ದಾರೆ ಎನ್ನಲಾಗಿದೆ. ದಸರಾ 2 ಗಂಟೆ 36 ನಿಮಿಷಗಳ ಸಿನಿಮಾವಾಗಿದೆ ಎಂದು ನಾನಿ ಹೇಳಿಕೊಂಡಿದ್ದಾರೆ. ಅಜಯ್ ದೇವಗನ್ ಅವರ ಸಾಹಸ ಚಿತ್ರ ಭೋಲಾ ಕೂಡ ದಸರಾ ಸಿನಿಮಾದ ಸಮಯದಲ್ಲೇ ರಿಲೀಸ್‌ ಆಗುತ್ತಿದೆ. ದಸರಾ ಪ್ರಚಾರದ ಸಂದರ್ಭದಲ್ಲಿ, ಈ ಕುರಿತು ನಾನಿ ಮಾತನಾಡಿ ʻಮೊದಲಿಗೆ ನಾನು ಭೋಲಾ ಸಿನಿಮಾ ನೋಡುತ್ತೇನೆಎಂದರು. ಇದೇ ವೇಳೆ ನಾನಿ ಅವರ ಮೊದಲ ಹಿಂದಿ ಚಿತ್ರ ಮಕ್ಕಿ ಪ್ರಚಾರಕ್ಕಾಗಿ ಮುಂಬೈಗೆ ಹೋದಾಗ, ಅಜಯ್ ಅವರನ್ನು ಬೆಂಬಲಿಸಿದರ ಬಗ್ಗೆ ನಾನಿ ನೆನಪಿಸಿಕೊಂಡರು.

ಮಾರ್ಚ್ 26 ರಂದು ಆಂಧ್ರಪ್ರದೇಶದ ಅನಂತಪುರದ ಆರ್ಟ್ಸ್ ಕಾಲೇಜು ಮೈದಾನದಲ್ಲಿ ದಸರಾದ ಅದ್ಧೂರಿ ಪ್ರೀ ರಿಲೀಸ್ ಇವೆಂಟ್‌ ನಡೆಯಲಿದೆ ಎಂದು ಎಸ್‌ಎಲ್‌ವಿ ಸಿನಿಮಾಸ್ ಹೇಳಿಕೊಂಡಿದೆ. “ಧೂಮ್ ಧಾಮ್ ದಸರಾ ಆಚರಣೆಗೆ ಸಿದ್ಧರಾಗಿ. ಮಾರ್ಚ್ 26 ರಂದು ಅನಂತಪುರದ ಆರ್ಟ್ಸ್ ಕಾಲೇಜ್ ಮೈದಾನದಲ್ಲಿ ದಸರಾ ಗ್ರ್ಯಾಂಡ್ ಪ್ರಿ-ರಿಲೀಸ್ ಈವೆಂಟ್” ಎಂದು ಪ್ರೊಡಕ್ಷನ್ ಹೌಸ್ ಟ್ವೀಟ್ ಮಾಡಿದೆ.

ಇದನ್ನೂ ಓದಿ: Actor Nani: ಹೋರಾಟದ ದಿನಗಳನ್ನು ನೆನಪಿಸಿಕೊಂಡ ಟಾಲಿವುಡ್‌ ಸ್ಟಾರ್‌ ನಾನಿ!

ಪ್ರೊಡಕ್ಷನ್ ಹೌಸ್ ಟ್ವೀಟ್

ಶ್ರೀಕಾಂತ್ ಒಡೆಲಾ ಚೊಚ್ಚಲ ನಿರ್ದೇಶನದಲ್ಲಿ ಸಿನಿಮಾ ಮೂಡಿ ಬಂದಿದ್ದು, ಖ್ಯಾತ ನಟಿ ಕೀರ್ತಿ ಸುರೇಶ್ ನಾನಿ ಜೋಡಿಯಾಗಿ ಸ್ಕ್ರೀನ್ ಶೇರ್ ಮಾಡಿದ್ದಾರೆ.

ಬಹು ದೊಡ್ಡ ತಾರಾಗಣ ಒಳಗೊಂಡ ಈ ಚಿತ್ರದಲ್ಲಿ ‘ದಿಯಾ’ ಖ್ಯಾತಿಯ ದೀಕ್ಷಿತ್ ಶೆಟ್ಟಿ, ಸಮುದ್ರಕನಿ, ಸಾಯಿಕುಮಾರ್, ಜರೀನಾ ವಹಾಬ್ ಸೇರಿದಂತೆ ಸ್ಟಾರ್ ಕಲಾವಿದರ ತಾರಾಬಳಗವಿದೆ. ಸಂತೋಷ್ ನಾರಾಯಣನ್ ಮ್ಯೂಸಿಕ್, ಸತ್ಯನ್ ಸೂರ್ಯನ್ ಕ್ಯಾಮೆರಾ ವರ್ಕ್, ನವೀನ್ ನೂಲಿ ಸಂಕಲನ, ಅನ್ಬರಿವ್ ಸಾಹಸ ನಿರ್ದೇಶನ, ವಿಜಯ್ ಚಗಂಟಿ ಕಾರ್ಯಕಾರಿ ನಿರ್ಮಾಣದಲ್ಲಿ ‘ದಸರಾ’ ಸಿನಿಮಾ ಮೂಡಿ ಬಂದಿದೆ.

Exit mobile version