ಮುಂಬೈ: ಶಾರ್ಕ್ಸ್ ಟ್ಯಾಂಕ್ ಶೋ ಇತ್ತೀಚಿನ ದಿನಗಳಲ್ಲಿ ಹಲವರಿಗೆ ಇಷ್ಟವಾದ ಟಿವಿ ಶೋ. ಸ್ಟಾರ್ಟ್ ಅಪ್ ಬಿಸಿನೆಸ್ ಮಾಡುತ್ತಿರುವವರು ಪ್ರಸಿದ್ಧ ಉದ್ಯಮಿಗಳ ಎದುರು ತಮ್ಮ ಯೋಜನೆಯನ್ನು ಹಂಚಿಕೊಂಡು, ಅವರಿಂದ ಕಂಪನಿಗೆ ಹೂಡಿಕೆ ಮಾಡಿಸಿಕೊಳ್ಳುವ ವಿಶಿಷ್ಟ ಶೋ ಅದು. ಆ ಶೋನಲ್ಲಿ ಇತ್ತೀಚೆಗೆ ನಟಿ ಪಾರುಲ್ ಗುಲಾಟಿ ((Actor Parul Gulati) ಕೂಡ ಭಾಗವಹಿಸಿದ್ದು, ಶಾರ್ಕ್ಸ್‌ಗಳಿಂದ ಒಂದು ಕೋಟಿ ರೂ. ಹೂಡಿಕೆ ಪಡೆದುಕೊಂಡಿದ್ದಾರೆ.
ಇದನ್ನೂ ಓದಿ: Motivatonal story : ಪ್ರೊಫಸರ್ ಹೇಳಿದ ಶಾರ್ಕ್ ಕಥೆ; ನಿಜವಾದ ಬ್ಯಾರಿಯರ್ ಇರುವುದು ತಲೆಯಲ್ಲಿ, ಅದನ್ನು ಕಿತ್ತು ಹಾಕಿ!
ಪಾರುಲ್ ಅವರು ನಿಶಾ ಹೇರ್ ಹೆಸರಿನ ಹೇರ್ ಎಕ್ಸ್‌ಟೆನ್ಶನ್ ಸ್ಟಾರ್ಟ್‌ಅಪ್ ನಡೆಸುತ್ತಿದ್ದಾರೆ. ಅದೇ ಸ್ಟಾರ್ಟ್‌ಅಪ್ ಅನ್ನು ಪಾರುಲ್ ಶಾರ್ಕ್ಸ್‌ಗಳ ಎದುರು ಪ್ರಸ್ತುತ ಪಡಿಸಿದ್ದರು. ಕಂಪನಿಗೆ ಒಂದು ಕೋಟಿ ರೂ. ಹೂಡಿಕೆ ಮಾಡಿದರೆ ಶೇ.2 ಈಕ್ವಿಟಿಯನ್ನು ಅವರಿಗೆ ವಹಿಸಿಕೊಡುವುದಾಗಿ ಅವರು ಹೇಳಿದ್ದರು. ಅದಕ್ಕೆ ಉದ್ಯಮಿಗಳಾದ ವಿನೀತ್ ಸಿಂಗ್ ಮತ್ತು ಅಮನ್ ಗುಪ್ತಾ ಆಫರ್ ನೀಡಿದ್ದರು. ಶೇ. 3 ಈಕ್ವಿಟಿಗೆ ಒಂದು ಕೋಟಿ ರೂ. ಕೊಡುವ ಆಫರ್ ಅನ್ನು ಅವರು ಮಾಡಿದ್ದರು. ಆದರೆ ಅಮಿತ್ ಜೈನ್ ಅವರು ಶೇ. 2 ಈಕ್ವಿಟಿಗೆ ಒಂದು ಕೋಟಿ ರೂ. ಕೊಟ್ಟಿದ್ದಾರೆ.
ಈ ವಿಚಾರವನ್ನು ಪಾರುಲ್ ಅವರು ತಮ್ಮ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಒಂದು ಕೋಟಿ ರೂ.ನ ಚೆಕ್‌ನ ಫೋಟೋ ಹಿಡಿದಿರುವ ಫೋಟೋ ಹಂಚಿಕೊಂಡಿರುವ ಅವರು, “ಈ ಚೆಕ್ ಪಡೆದ ಸಂತೋಷವನ್ನು ನಾನು ನಿಮ್ಮೊಂದಿಗೆ ಹಂಚಿಕೊಳ್ಳಲು ಬಯಸುತ್ತೇನೆ. ನನ್ನ ಬಿಸಿನೆಸ್‌ನೊಂದಿಗೆ ನಾನಿದನ್ನು ಸಾಧಿಸಿದ್ದೇನೆ. ನನ್ನ ಬಿಸಿನೆಸ್ 50 ಕೋಟಿ ರೂ. ಮೌಲ್ಯದ್ದಾಗುತ್ತದೆ ಎಂದು ಯಾರು ಭಾವಿಸಿದ್ದರು. ಅಮಿತ್ ಜೈನ್ ಸರ್ ನೀವು ನಿಜಕ್ಕೂ ನನಗೆ ಹೀರೋ. ಚೆಕ್ ಕೊಟ್ಟ ಕಾರಣಕ್ಕೆ ಮಾತ್ರವಲ್ಲ ಆದರೆ ನೀವು ಮತ್ತು ನಿಮ್ಮ ತಂಡ ಯಾವಾಗಲೂ ನನಗೆ ಬೆಂಬಲಿಸಿದ್ದೀರಿ. ಮಾರ್ಗದರ್ಶನ ನೀಡಿದ್ದೀರಿ. ನನಗೆ ಪಾವತಿ ಗೇಟ್‌ವೇನಲ್ಲಿ ಸಮಸ್ಯೆ ಉಂಟಾದಾಗಲೂ ಸಹಾಯ ಮಾಡಿದ್ದು, ಇವರದ್ದೇ ತಂಡ” ಎಂದು ಬರೆದುಕೊಂಡಿದ್ದಾರೆ.